September 16, 2024

ರಾಜ್ಯದಗ್ರಾಮೀಣ ಭಾಗಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ- ಜಿ.ಪ್ರಭು

0

ಚಿಕ್ಕಮಗಳೂರುಎಕ್ಸ್ಪ್ರೆಸ್: ರಾಜ್ಯದಗ್ರಾಮೀಣ ಭಾಗಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವಆಶಯದಿಂದ ಸರ್ಕಾರದ ವತಿಯಿಂದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಗಳ ಸಹಯೋಗದಲ್ಲಿಗ್ರಾಮ ಪಂಚಾಯತ್ ಹಂತದಿ0ದರಾಜ್ಯ ಹಂದವರೆಗೆಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆಎಂದುಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಜಿ.ಪ್ರಭು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು.
ತಂಡ ಸ್ಪರ್ಧೆಗಳಾದ ಕಬಡ್ಡಿ, ಖೋ-ಖೋ, ವಾಲಿಬಾಲ್ ಹಾಗೂ ವೈಯಕ್ತಿಕ ಸ್ಪರ್ಧೆಗಳಾದ ಎತ್ತಿನಗಾಡಿ, ಮಟ್ಟಕುಸ್ತಿ, ಯೋಗ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಕೆಸರುಗದ್ದೆಓಟ, ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಗ್ರಾ.ಪಂ.ಗಳು ಸ್ವ-ಆಸಕ್ತಿಯಿಂದ ನಡೆಸಬಹುದು. ಕೆಸರುಗದ್ದೆಓಟ, ಹಗ್ಗಜಗ್ಗಾಟ ಮತ್ತುವಾಲಿಬಾಲ್‌ಸ್ಪರ್ಧೆಗಳು ಜಿಲ್ಲಾಮಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಕ್ರೀಡಾಕೂಟವುಎಲ್ಲಾ ವಯೋಮಾನದವರಿಗೂ ಮುಕ್ತವಾಗಿದ್ದು, ಯಾವುದೇ ವಯಸ್ಸಿನ ಮಿತಿಯಿರುವುದಿಲ್ಲ. ಆಸಕ್ತರು ನವೆಂಬರ್ ೮ರೊಳಗೆ ಆಯಾಗ್ರಾ.ಪಂ.ನಲ್ಲಿ ಪಿಡಿಓಗಳಿಗೆ ಅರ್ಜಿ ಸಲ್ಲಿಸುವ ಮೂಲಕ ನೋಂದಾಯಿಸಿಕೊಳ್ಳಬಹುದುಎ0ದುಅವರು ತಿಳಿಸಿದರು.
ಇದುರಾಜ್ಯಮಟ್ಟದಕಾರ್ಯಕ್ರಮವಾಗಿದ್ದು, ಗ್ರಾಮ ಪಂಚಾಯತ್‌ನಿAದ ಹಿಡಿದುಹಂತಹAತವಾಗಿರಾಜ್ಯಮಟ್ಟದವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಪ್ರತಿಗ್ರಾ.ಪಂ ಅಥವಾ ಹೋಬಳಿ ಮಟ್ಟದಲ್ಲಿಕ್ರೀಡಾಕೂಟಆಯೋಜಿಸಲಾಗುತ್ತದೆ. ಹೆಚ್ಚು ಗ್ರಾ.ಪಂ.ಗಳಿರುವ ತಾಲ್ಲೂಕುಗಳಲ್ಲಿ ಹೋಬಳಿ ಮಟ್ಟದಕ್ರೀಡಾಕೂಟವನ್ನುಆಯೋಜಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿಆಯ್ಕೆಯಾದವರುರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಪ್ರತಿ ಹಂತದ ವಿಜೇತರಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಗುತ್ತದೆಎಂದುಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸುಮಾರು ೮ ಲಕ್ಷಜನಗ್ರಾಮೀಣಜನತೆಯಿದೆ. ಗ್ರಾಮೀಣಜನರಲ್ಲಿಕ್ರೀಡಾಉತ್ಸಾಹ, ಆರೋಗ್ಯದ ಬಗ್ಗೆ ಕಾಳಜಿ ಬೆಳೆಸಿಕೊಳ್ಳುವಂತೆ ಮಾಡುವುದುಕ್ರೀಡಾಕೂಟದ ಮುಖ್ಯಉದ್ದೇಶ. ಗ್ರಾ.ಪಂ ವ್ಯಾಪ್ತಿಯ ಶಾಲೆಗಳ ದೈಹಿ ಶಿಕ್ಷಣ ಶಿಕ್ಷಕರನ್ನು ಒಳಗೊಂಡ ತಂಡವನ್ನುಕ್ರೀಡಾಕೂಟಆಯೋಜನೆಗಾಗಿ ನಿಯೋಜಿಸಲಾಗುತ್ತದೆಎಂದುಅವರು ಹೇಳಿದರು.
ಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯಉಪನಿರ್ದೇಶಕಿಡಾ. ಮಂಜುಳಾ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *