September 19, 2024

ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಕಳೆದುಕೊಂಡಿದೆ-ಶೋಭಾ ಕರಂದ್ಲಾಜೆ.

0

ಚಿಕ್ಕಮಗಳೂರುಎಕ್ಸ್ಪ್ರೆಸ್: ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಕಳೆದುಕೊಂಡಿದೆ. ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಗಾಂಧಿಯವರು ಏನು ಸಾಭೀತು ಮಾಡಲು ಹೊರಟಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ದಲ್ಲಿ ಚುನಾವಣೆ ಘೋಷಣೆಯಾಗಿದೆ. ಸ್ವಾತಂತ್ರö್ಯ ಭಾರತದ ನಂತರ ಅನೇಕ ವರ್ಷ ಕಾಂಗ್ರೆಸ್ ಆಡಳಿತ ನಡೆಸಿತ್ತು. ಆದರೆ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ರಾಜಕೀಯ ಪಕ್ಷ ಇರುವುದು ಚುನಾವಣೆಯನ್ನು ಎದುರಿಸಲು ಆದರೆ, ಚುನಾವಣೆ ಘೋಷಣೆಯಾದ ಬಳಿಕವು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಯಾಕೆ ಮಾಡುತ್ತಿದ್ದಾರೆಂದು ಅ ರ್ಥವಾಗುತ್ತಿಲ್ಲ, ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಹೇಳಿದರು. ಅಂದಿ ನಿಂದ ಹಿಂದಿನ ಕಾಂಗ್ರೆಸ್ ಸತ್ತು ಹೋಗಿದೆ. ಹೊಸ ಕಾಂಗ್ರೆಸ್ ದೇಶವನ್ನು ಮುನ್ನಡೆಸಲು ಬಂದಿದ್ದಾರೆ ಆದರೆ, ಅವರ ಅಸ್ತಿತ್ವವೇ ಇಲ್ಲ ಎಂದು ಎಂದರು.
ರಾಹುಲ್ ಗಾಂಧಿಯವರು ಪಕ್ಷದ ರಾಷ್ಟಿçÃಯ ಅಧ್ಯಕ್ಷರಾದರೂ ಸಂಪೂರ್ಣವಾಗಿ ವಿಫಲರಾದರೂ, ಪ್ರೀಯಾಂಕ ಗಾಂಧಿಯವರನ್ನು ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನೇಮಕ ಮಾಡಲಾಯಿತು ಅಲ್ಲಿ ಒಂದು ಸೀಟು ಗೆಲ್ಲಲು ಸಾಧ್ಯವಾಗಲಿಲ್ಲ, ೨೫-೩೦ವರ್ಷದಿಂದ ಒಂದು ಕುಟುಂಬದ ಅಧ್ಯಕ್ಷತೆಯನ್ನು ಬಿಡಿಸಿ ನಮ್ಮ ರಾಜ್ಯದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮೂಲಕ ಏನು ಸಾಭೀತು ಮಾಡಲು ಹೊರಟಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದರು.
ಭಾರತ ಜೋಡಿಸಬೇಕಿರುವುದು ಭಾರತದ ಒಳಗಲ್ಲ, ಭಾರತದ ಸೀಮೆಗಳಲ್ಲಿ, ಭಾರತದ ಗಡಿ ಪ್ರದೇಶ ದಲ್ಲಿರುವ ಗೊಂದಲಕ್ಕೆ, ಭಯೋತ್ಪಾದನೆ ಹೆಚ್ಚಾಗಲು ಅಂದು ಕಾಂಗ್ರೆಸ್ ಪಕ್ಷ ತಗೆದುಕೊಂಡ ತಪ್ಪು ನಿರ್ಧಾರಗಳು ಕಾರಣ ಎಂದ ಅವರು, ಭಾರತ್ ಜೋಡೋ ಅಗತ್ಯವಿರುವುದು ಗಡಿ ಪ್ರದೇಶದಲ್ಲಿ ಎಂದು ತೀರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅವರ ಮನೆಯನ್ನು ಮೊದಲು ಸರಿಮಾಡಿಕೊಳ್ಳಬೇಕಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಎರಡು ಗುಂಪುಗಳಲ್ಲಿ ಜನ ತಂದರು, ಅವರ ನಾಯಕರಲ್ಲಿ ಗೊಂದ ಲವಿದೆ. ಡಿ.ಕೆ.ಶಿವಕುಮಾರ್ ಅವರು ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತಾರ ಎಂದು ಪ್ರಶ್ನಿಸಿದರು.

ನೀವೇ ಮುಖ್ಯಮಂತ್ರಿ ಎಂದು ಯಾರು ಘೋಷಣೆ ಮಾಡಿದ್ದಾರೆ ಎಂದ ಅವರು, ಹಿರಿಯ ನಾಯಕರಾದ ಪರಮೇಶ್ವರ್ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿಲ್ಲ, ಒಂದು ವರ್ಗವನ್ನು ಬಿಟ್ಟು ಎಲ್ಲಾವನ್ನು ಮಾಡುತ್ತಿದ್ದಾರೆ ಆದ್ದರಿಂದ ರಾಜ್ಯದ ಜನತೆ ನಿಮ್ಮ ಮುಖ್ಯಮಂತ್ರಿ ಕನಸು ಕನಸ್ಸಾಗಿ ಉಳಿಯುತ್ತದೆ. ಅದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ ನಿಮ್ಮ ತುಘಲಕ್ ದರ್ಬಾರ್, ಟಿಪ್ಪು ದರ್ಬಾರ್ ಆಡಳಿತವನ್ನು ಜನರು ನೋಡಿದ್ದಾರೆ ಮತ್ತೇ ಅಧಿಕಾರ ನೀಡುವುದಿಲ್ಲ ಎಂದರು.
ಭ್ರಷ್ಟಚಾರ ನಡೆಸಿದ್ದರೇ ಸಾಕ್ಷಿ ಏನಿದೆ. ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ಸಾಮಾನ್ಯ, ಆಧಾರ ರಹಿತ ಆರೋಪವನ್ನು ಜನರು ಒಪ್ಪುವುದಿಲ್ಲ. ಕಸ್ತೂರಿ ರಂಗನ್ ವರದಿ ಬಗ್ಗೆ ಸಂಸದರು ಬಾಯಿ ಬಿಡುತ್ತಿಲ್ಲ ಎಂಬ ಮಧುಬಂಗಾರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು ಕಸ್ತೂರಿ ರಂಗನ್ ವರದಿ ಕಾಂಗ್ರೆಸ್ ಕೂಸು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರದಿಯಿಂದ ರೈತರಿಗೆ ತೊಂದರೆಯಾಗಬಾರದು ಎಂಬ ದೃಷ್ಠಿಯಿಂದ ನಿರ್ಧಾರ ತಗೆದುಕೊಂಡಿದೆ. ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ರೈತರು ಜನವಸ ತಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿದ್ಯುತ್ ಖಾಸಗೀಕರಣ ಸಂಬAಧ ಮಧುಬಂಗಾರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ರೀತಿಯ ಯಾವ ಸುತ್ತೋಲೆ ಬಂದಿಲ್ಲ, ಚುನಾವಣೆ ಸಂದರ್ಭದಲ್ಲಿ ಆರೋಪ ಹೊರಿಸಿ ಜನರನ್ನು ಗೊಂದಲಕ್ಕೆ ಈಡು ಮಾಡಬೇಕು ಎಂಬ ಉದ್ದೇಶ ಅವರಲ್ಲಿದ್ದು, ಉಚಿತ ವಿದ್ಯುತ್ ನೀಡಿದ್ದರೇ ಅದು ಬಿಜೆಪಿ ಸರ್ಕಾರದ ಸಾ ಧನೆ, ಕಾಂಗ್ರೆಸ್ ಮುಖಂಡರು ಏನನ್ನು ಮಾಡಿಲ್ಲ ಆದರೆ ಆರೋಪ ಮಾಡುತ್ತಾರೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್. ದೀಪಕ್ ದೋಡ್ಡಯ್ಯ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed