September 19, 2024

Demand to provide reservation according to census: ಜನಗಣತಿ ಅನುಗುಣವಾಗಿ ಮೀಸಲಾತಿ ಒದಗಿಸಲು ಆಗ್ರಹ

0

ಚಿಕ್ಕಮಗಳೂರು: ಜನಗಣತಿ ಆಧಾರದ ಮೇಲೆ ಪ್ರಸ್ತುತ ಮೂಡಿಗೆರೆ ತಾಲ್ಲೂಕಿಗೆ ನೀಡಿರುವ ಮೀಸಲಾತಿಯನ್ನು ಸಾಮಾಜಿಕ ನ್ಯಾಯಬದ್ಧದ ಅನುಗುಣವಾಗಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಪರಿವರ್ತಿಸಬೇಕು ಎಂದು ಜಿಲ್ಲಾ ಭೀಮ್ ಆರ್ಮಿ ಸಂಘಟನೆ ಮುಖಂಡರು ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.

ಈ ಸಂಬಂಧ ಉಪವಿಭಾಗಾಧಿಕಾರಿ ಹೆಚ್.ಡಿ.ರಾಜೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಸಂಘಟನೆಯ ಮುಖಂಡರುಗಳು ಇಪ್ಪತ್ತು ವರ್ಷಕ್ಕೊಮ್ಮೆ ಮೀಸಲಾತಿ ಬದಲಾವಣೆಯಾಬೇಕೆಂಬ ನಿಯಮದಂತೆ ಮೂಡಿಗೆರೆ ತಾಲ್ಲೂಕು ಮೀಸಲಾತಿಯನ್ನು ಚಿಕ್ಕಮಗಳೂರಿಗೆ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ ೨೦೧೧ನೇ ಜನಗಣತಿ ಪ್ರಕಾರ ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ ೪೬ ಸಾವಿರ ಪ.ಜಾತಿ ಹಾಗೂ ಪ.ಪಂಗಡದವರಿದ್ದು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ೭೯ ಸಾವಿರ ಮಂದಿಗಳಿರುವ ಕಾರಣ ಜನಗಣತಿಗೆ ಅನುಗುಣವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವನ್ನು ಮೀಸಲು ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭೀಮಾ ಆರ್ಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ತಾಲ್ಲೂಕು ಅಧ್ಯಕ್ಷ ರಮೇಶ್, ಯುವಘಟಕದ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್, ಉಪಾಧ್ಯಕ್ಷ ನಂದನ್ ಹಾಜರಿದ್ದರು.

Demand to provide reservation according to census

About Author

Leave a Reply

Your email address will not be published. Required fields are marked *

You may have missed