September 19, 2024

Public relations meeting: ಶೀಘ್ರದಲ್ಲಿಯೆ ನಗರಸಭೆ ವತಿಯಿಂದ ಜನಸಂಪರ್ಕ ಸಭೆ

0

ಚಿಕ್ಕಮಗಳೂರು: ನಗರಸಭೆ ವತಿಯಿಂದ ಶೀಘ್ರದಲ್ಲಿಯೇ ಜನರ ಕುಂದು ಕೊರತೆಯನ್ನು ಆಲಿಸಲು ಜನಸಂಪರ್ಕ ಸಭೆ ನಡೆಸಿ, ಜನಸ್ನೇಹಿ ನಗರಸಭೆ ಆಡಳಿತವನ್ನು ಮಾಡಲಾಗುವುದೆಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ನಗರದ ೨೩ನೇ ವಾರ್ಡ್‌ನಲ್ಲಿ ಡಾಂಬರೀಕರಣ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ನಗರಸಭೆ ವತಿಯಿಂದ ಶೀಘ್ರದಲ್ಲಿಯೇ ಎಲ್ಲಾ ವಾರ್ಡ್‌ಗಳಲ್ಲಿಯೂ ಜನ ಸಂಪರ್ಕ ಸಭೆ ಮಾಡುವುದರ ಜತೆಗೆ, ಜನರ ಕುಂದು ಕೊರತೆಗಳನ್ನು ಆಲಿಸಿ ತಕ್ಷಣವೇ ಪರಿಹರಿಸುವುದರ ಜತೆಗೆ, ಜನಸ್ನೇಹಿ ನಗರಸಭೆ ಆಡಳಿತವನ್ನು ಮಾಡುತ್ತೇವೆ ಎಂದು ತಿಳಿಸಿದರು.

ನಗರಸಭೆ ಎಸ್.ಎಫ್.ಸಿ ನಿಧಿಯಿಂದ ಡಾಂಬರೀಕರಣ ರಸ್ತೆಗೆ ೧೬.೫ ಲಕ್ಷ ರೂಗಳ ಕಾಮಗಾರಿ ನಡೆಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು, ನಗರದ ಎಲ್ಲಾ ವಾರ್ಡ್‌ಗಳ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿ ಹಂತಹಂತವಾಗಿ ಕೆಲಸ ಮಾಡಲಾಗುವುದು ಎಂದರು.

ನಗರಸಭೆ ಸದಸ್ಯೆ ಮಂಜುಳಾಶ್ರೀನಿವಾಸ್ ಮಾತನಾಡಿ. ನನ್ನ ವಾರ್ಡ್‌ನಲ್ಲಿ ಅಂಬೇಡ್ಕರ್ ಸಮುದಾಯ ಭವನ ಅರ್ಧಕ್ಕೆ ನಿಂತಿದೆ, ಬಾಕ್ಸ್ ಚರಂಡಿ, ರಸ್ತೆ ಕಾಮಗಾರಿ, ಶುದ್ಧಗಂಗಾ ಘಟಕ ಮತ್ತು ಕುಡಿಯುವ ನೀರಿನ ಸಮಸ್ಯೆ ಇದೆ, ನಮ್ಮ ವಾರ್ಡ್‌ಗೆ ವಿಶೇಷ ಗಮನ ಅರಿಸಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮೋಹನ್, ಸ್ಥಳಿಯರಾದ ಕೃಷ್ಣಮೂರ್ತಿ, ಅಜ್ಜಣ್ಣ, ಬೀರಣ್ಣ, ಮಂಜುನಾಥ್, ರಂಗಣ್ಣ, ಆನಂದ್, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Public relations meeting

About Author

Leave a Reply

Your email address will not be published. Required fields are marked *

You may have missed