September 19, 2024

District level sports event: ಕ್ರೀಡೆ ಕೇವಲ ಮನೋರಂಜನೆಯಷ್ಟೆ ಅಲ್ಲ. ಅದೊಂದು ತಪ್ಪಸ್ಸು

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಕ್ರೀಡೆ ಕೇವಲ ಮನೋರಂಜನೆಯಷ್ಟೆ ಅಲ್ಲ. ಅದೊಂದು ತಪ್ಪಸ್ಸು. ದೇಶಭಕ್ತಿ. ಕ್ರೀಡೆ ಮನುಷ್ಯನನ್ನ ಪರಿಪೂರ್ಣ ವ್ಯಕ್ತಿಯನ್ನಾಗಿಸುತ್ತದೆ. ಜೀವನಕ್ಕೆ ಶ್ರದ್ಧೆ, ಆಸಕ್ತಿ, ಧ್ಯೇಯವನ್ನ ಕಲಿಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಪ್ರಭು ಅವರು ಹೇಳಿದ್ದಾರೆ.

ಅವರು ಇಂದು ನಗರದ ಡಿ.ಆರ್. ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕ್ರೈಸ್ಥ ವಸತಿ ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಕ್ರೀಡೆಯಿಂದ ಮನೋರಂಜನೆಯಷ್ಟೆ ಅಲ್ಲದೆ ದೇಶಭಕ್ತಿ, ಶ್ರದ್ಧೆ, ಆಸಕ್ತಿಯನ್ನ ಕಲಿಯಬಹುದು ಎಂದರು.

ಪ್ರಪಂಚದ ಎಲ್ಲ ಸಾಧಕರನ್ನ ನೋಡಿ. ಯಾವುದೇ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಂದ್ರೆ ಅವರಿಗೆ ಆ ವಿಚಾರದಲ್ಲಿ ಗಂಭೀರತೆ ಇರಬೇಕು. ಅವರು ಕಲಿಯುವಂತಹಾ ಹಂತದಲ್ಲಿದ್ದಾಗ ವಿದ್ಯೆಗೆ ಹೆಚ್ಚು ಪ್ರಾಮುಖ್ಯಕತೆ-ಗೌರವ ಕೊಟ್ಟಿದ್ದರು. ಎಲ್ಲಾ ಸಾಧಕರು ಸಾಧನೆ ಮಾಡಿದ್ದು ಅವರ ಜ್ಞಾನ ಹಾಗೂ ಆಸಕ್ತಿಯಿಂದ. ಅವರು ನಿಮ್ಮಗಳ ವಯಸ್ಸಿನಲ್ಲಿ ಇದ್ದಾಗ ಕ್ರೀಯಾಶೀಲರಾಗಿ, ಆಸ್ತಿಯಿಂದ ಓದಿ, ತಮ್ಮ ಜೀವನದಲ್ಲಿ ಮೌಲ್ಯಗಳನ್ನ ಅಳವಡಿಸಿಕೊಂಡು ಸಾಧನೆ ಮಾಡಿ ಈ ಹಂತಕ್ಕೆ ಬೆಳೆದಿದ್ದಾರೆ ಎಂದರು.

ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆಯು ತಮ್ಮ ವ್ಯಕ್ತಿತ್ವಕ್ಕೆ ಕೊಡುಗೆಯಾಗಿದೆ, ಜೀವನದ ಸಾಧನೆಗೆ ಕ್ರೀಡೆಯಿಂದ ಅಳವಡಿಸಿಕೊಳ್ಳಬಹುದಾದ ಅಂಶಗಳೇನು ಎಂದು ತಿಳಿದುಕೊಳ್ಳಬೇಕು, ಪ್ರಪಂಚದ ಎಲ್ಲಾ ಸಾದಕರ ಬಗ್ಗೆ ತಿಳಿದುಕೊಂಡಾಗ, ಯಾವುದೇ ವ್ಯಕ್ತಿ ಸಾಧನೆ ಮಾಡಬೇಕಾದರೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಂದ ಹಿಡಿದು ಈಗಿನ ಸಾಧಕರ ವರೆಗು ಕ್ರೀಡೆ, ವಿಜ್ಞಾನ, ಅರ್ಥಶಾಸ್ತ್ರ, ಆಡಳಿತ, ಕೈಗಾರಿಕೆ ಎಲ್ಲಾ ಹಂತದಲ್ಲಿಯು ಸಾಧನೆ ಮಾಡುವ ಮನುಷ್ಯನಿಗೆ ೨ ವಿಷಯಗಳಲ್ಲಿ ಗಂಭೀರತೆ ಇರಬೇಕು ಕಲಿಯುವ ವಿದ್ಯೇಗೆ ಹೆಚ್ಚು ಗೌರವ ಕೊಡಬೇಕು ಅತ್ಯಂತ ಕ್ರಿಯಾಶೀಲರಾಗಿ ಆಸಕ್ತಿಯಿಂದ ಓದುವುದರಲ್ಲಿ ಗಮನ ಹರಿಸಿ ಜೀವನದ ಮೌಲ್ಯವನ್ನು ಅಳವಡಿಕೊಳ್ಳಬೇಕು, ಮತ್ತು ಕ್ರೀಡೆಯಲ್ಲಿ ಸಾಧನೆ ಕ್ರೀಡೆಯನ್ನು ಪ್ರೀತಿಸಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡು ಸಾಧನೆಯನ್ನು ಮಾಡಬೇಕು ಎಂದರು.

ವಿಶ್ವ, ರಾಷ್ಟ್ರ ಹಾಗೂ ರಾಜ್ಯವನ್ನು ಪ್ರತಿನಿಧಿಸಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಲು ಈ ಎರಡು ಸಾಧನೆಯಿಂದ ಮಾತ್ರ ಸಾದ್ಯ, ಯಾವುದೇ ವಿಷಯದಲ್ಲಿ ಶಿಸ್ತು, ನಿರಂತರ ಅಭ್ಯಾಸ ಇಟ್ಟುಕೊಂಡು ನಮ್ಮನ್ನು ಆಳವಾಗಿ ತೊಡಗಿಸಿಕೊಂಡಾಗ ಕ್ರೀಡೆಯಲ್ಲಿ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಸಾದ್ಯ, ಭಾರತ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದವರು ಮತ್ತೊಂದು ದೇಶದಲ್ಲಿ ಜಯ ಸಾಧಿಸಿದಾಗ ಇಡಿ ದೇಶವೆ ಒಟ್ಟಾಗಿ ನಿಂತು ಸಂಭ್ರಮವನ್ನು ಪಡುತ್ತದೆ, ಕ್ರೀಡೆಗೆ ದೇಶವನ್ನು ಒಗ್ಗೂಡಿಸಿ ಜಾಗೃತಿಪಡಿಸುವಂತಹ ಶಕ್ತಿ ಇದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸೋಮಶೇಖರ್ ಮಾತನಾಡಿ ಕ್ರೀಡೆಯು ವ್ಯಕ್ತಿತ್ವವನ್ನು ಬೆಳೆಸುತ್ತದೆ, ಜ್ಞಾನಿಗಳು ಹಾಗೂ ಸಿದ್ಧಾಂತಗಳು ಹೇಳುವ ರೀತಿಯಲ್ಲಿ ಮನುಷ್ಯನ ವ್ಯಕ್ತಿತ್ವ ಮತ್ತು ನಡವಳಿಕೆ ಕ್ರೀಡಾತ್ಮಕವಾಗಿರಬೇಕು, ಕ್ರೀಡೆಗೆ ವ್ಯಕ್ತಿತ್ವವನ್ನು ಪರಿಪೂರ್ಣ ಮಾಡುವಂತಹ ಶಕ್ತಿ ಇದೆ, ಕ್ರೀಡೆಯಲ್ಲಿ ಸೋಲು, ಗೆಲುವು ಖಚಿತ, ಗೆದ್ದಾಗ ಮತ್ತೆ ಸೋಲಬಾರದೆಂದು ಮತ್ತು ಸೋತಾಗ ಮತ್ತೆ ಗೆಲ್ಲಲೆಬೇಕು ಸಾಧನೆ ಮಾಡಲಢಬೇಕು ಎಂಬ ಮನೋಭಾನೆಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಎಲ್ಲಾ ಆಸೆ ಆಕಾಂಕ್ಷೆಗಳೆಲ್ಲವನ್ನು ಧನಾತ್ಮಕ ಚಿಂತನೆಯಿಂದ ಸಾಧನೆ ಮಾಡುವ ಮಹತ್ವ ಕ್ರೀಡೆಗೆ ಇದೆ, ತಾಲೂಕು ಮಟ್ಟ, ಜಿಲ್ಲಾ ಮಟ್ಟದಿಂದ ವಿಭಾಗೀಯ ಮಟ್ಟಕ್ಕೆ ಹಾಗೂ ರಾಜ್ಯಮಟ್ಟಕ್ಕೆ ಹೋಗುತ್ತಿರುವ ಎಲ್ಲರಿಗು ಶುಭಾಶಯವನ್ನು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಚೈತ್ರ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲು ಭಾಗವಹಿಸಿ ಸಾಧನೆ ಮಾಡಬಹುದಾಗಿದೆ, ವಸತಿ ನಿಲಯ ವಿದ್ಯಾರ್ಥಿಗಳಿಗೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ನೀಡಿದೆ, ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿ ತಮ್ಮ ಜೀವನದ ಗುರಿ ಮುಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯ ಅಶಿಕಾರಿ ಕೆ.ಎಸ್.ಶಿವಕುಮಾರ್, ಪ್ರಾಂಶುಪಾಲರಾದ ವಿಜಯ್‌ಕುಮಾರ್, ನಾಗರಾಜ್, ವೇಣುಕುಮಾರ್. ವಸತಿ ಶಾಲೆಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ಬೋದಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿವಕುಮಾರ್ ಸ್ವಾಗತಿಸಿ

District level sports event

About Author

Leave a Reply

Your email address will not be published. Required fields are marked *

You may have missed