September 19, 2024

Sharan Sahitya Parishad National Symposium: ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ವಿಚಾರ ಸಂಕಿರಣ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಇದೇ ನವೆಂಬರ್ ೨೫-೨೬ರಂದು ನಗರದ ಎಐಟಿ ಕಾಲೇಜು ಸಮೀಪದ ಒಕ್ಕಲಿಗರ ಭವನದಲ್ಲಿ ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ವಿಚಾರ ಸಂಕಿರಣವನ್ನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು ಹೇಳಿದ್ದಾರೆ.

ಇಂದು ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಈ ವಿಚಾರ ಸಂಕಿರಣ ವಚನ ಚಳುವಳಿ, ಅರಿವು ಮತ್ತು ಅನುಸರಣೆ ಎಂಬ ವಿಚಾರದಲ್ಲಿ ನಡೆಯುತ್ತಿದೆ. ಈ ವಿಚಾರ ಸಂಕಿರಣದಲ್ಲಿ ನಾಡಿನ ೧೨ ಜನ ಪ್ರಾಜ್ಞರು ಈ ಗೋಷ್ಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಕಿರಣದಲ್ಲಿ ತಜ್ಞರು ವಿವಿಧ ವಿಚಾರಗಳನ್ನ ಮಂಡಿಸಲಿದ್ದಾರೆ. ಈ ಗೋಷ್ಠಿಗೆ ರಾಜ್ಯದ ೩೦ ಜಿಲ್ಲೆಗಳಿಂದ ಹಾಗೂ ಬೇರೆ-ಬೇರೆ ರಾಜ್ಯಗಳಿಂದಲೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮೂರು ಜನ ಗೋಷ್ಠಿಯಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ. ಈ ವಿಚಾರ ಸಂಕರಣ ಏಕೆಂದರೆ, ಭಾರತ ಅತ್ಯಂತ ಕೆಟ್ಟ ಸಂದರ್ಭವನ್ನ ಎದುರಿಸುತ್ತಿದೆ. ನಾವು ಬಹುತ್ವದ ಭಾರತವಾಗುತ್ತಿಲ್ಲ. ಇದು ಏಕಸ್ವಾಮ್ಯ ಭಾರತವಾಗುತ್ತಿದೆ. ಬಹುತ್ವ ಭಾರತದೊಳಗೆ ಎಲ್ಲಾ ವಿಚಾರಧಾರೆಗಳು, ನಿರಂತರವಾಗಿ ಜಂಗಮ ಸ್ವರೂಪವಾಗಿರಬೇಕು ಎಂದರು.

ಭಾರತದೊಳಗೆ ವಚನ ಚಳುವಳಿ ಕೇವಲ ಸಾಹಿತ್ಯ ಅಲ್ಲ. ಅದು ಬದುಕಿನ ಚಳುವಳಿ. ಬದುಕಿನ ನಡೆ ಎಂಬ ಕಾರಣಕ್ಕಾಗಿ ಈ ವಿಚಾರ ಸಂಕಿರಣ ನಡೆಯುತ್ತಿದೆ ಎಂದರು. ಹಳೇ ಮಾದರಿ ಬಿಟ್ಟು ಹೊಸ ಮಾದರಿಯಲ್ಲಿ ವಚನವನ್ನ ನೋಡುವ ಮತ್ತು ಅಭ್ಯಾಸ ಮಾಡುವ ಹಾಗೂ ಬದುಕಿನಲ್ಲಿ ಅನುಸರಿಸುವುದು ಬಹಳ ಮುಖ್ಯ. ಈ ಗೋಷ್ಠಿ ಜೀವಪರ ಗೋಷ್ಠಿ ಎಂದು ನಾವು ಘೋಷಣೆ ಮಾಡಿಕೊಂಡಿದ್ದೇವೆ. ನೆಲದ ಜೀವಪರ ವಿಚಾರಗಳನ್ನ ಕುರಿತು ಮಾತನಾಡುವ ಈ ಗೋಷ್ಠಿಗೆ ಎಲ್ಲರೂ ಪಾಲ್ಗೊಳ್ಳಬೇಕೆಂದು ಜಿಲಾಧ್ಯಕ್ಷ ರವೀಶ್ ಕ್ಯಾತನಬೀಡು ಮನವಿ ಮಾಡಿದ್ದಾರೆ.

ಕಾರ್ಯಕ್ರಮವನನ್ ಎಸ್.ಜಿ.ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

Sharan Sahitya Parishad National Symposium

About Author

Leave a Reply

Your email address will not be published. Required fields are marked *

You may have missed