September 19, 2024

Cycle jatha for students: ವನ್ಯಜೀವಿ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಸೈಕಲ್‌ ಜಾಥಾ

0

ಚಿಕ್ಕಮಗಳೂರು: ಅನೇಕ ಹಂತಗಳಲ್ಲಿ ನಮ್ಮಅಗತ್ಯವಾದ ಬೇಡಿಕೆಗಳನ್ನು ಈಡೇರಿಸುವುದು ನಿಸರ್ಗವೇಆಗಿರುವುದರಿಂದಅದನ್ನು ಬಿಟ್ಟು ಮನುಷ್ಯ ಬದುಕಲು ಸಾಧ್ಯವೇಇಲ್ಲಎಂದುಜಿಲ್ಲಾಧಿಕಾರಿಕೆ.ಎನ್.ರಮೇಶ್ ವಿಶ್ಲೇಷಿಸಿದರು.

ಅರಣ್ಯ ಇಲಾಖೆ, ಭದ್ರಾ ವನ್ಯಜೀವಿ ವಿಭಾಗ, ವೈಲ್ಡ್‌ಕ್ಯಾಟ್‌ಸಿ., ವನ್ಯಜೀವಿ ಸಂರಕ್ಷಣಾಕ್ರಿಯಾತಂಡದಆಶ್ರಯದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಶನಿವಾರ ನಗರದಜಿಲ್ಲಾ ಸ್ಕೌಟ್ಸ್ ಮತ್ತುಗೈಡ್ಸ್ ಭವನದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ಜಾಥಾದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ನಮಗೆ ನೀರು, ಗಾಳಿ, ಸೂರು, ಬಟ್ಟೆ, ಸಂಪತ್ತು, ಸಂತೋಷಇವೆಲ್ಲವನ್ನು ನೀಡುವುದು ಪ್ರಕೃತಿಯೆ. ಹೀಗಾಗಿ ಮನುಷ್ಯನಿಗೆ ಪ್ರಕೃತಿಯಿಂದದೂರವಿರಲು ಸಾಧ್ಯವಿಲ್ಲ. ವಿದ್ಯಾರ್ಥಿಜೀವನದಲ್ಲಿ ಪ್ರಕೃತಿಯಿಂದಕಲಿಯಲು ಸಾಕಷ್ಟು ವಿಚಾರಗಳಿವೆ ಎಂದರು.

ಡಿ.ವಿ.ಜಿ.ಯವರ ಮಾತಿನಂತೆ ನಿಸರ್ಗಎನ್ನುವುದುಒಂದು ಪಾಠಶಾಲೆ. ಪ್ರಕೃತಿಯಲ್ಲಿ ದಿನನಿತ್ಯ ಅನೇಕ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಅವುಗಳನ್ನು ನೋಡುವ ಕಣ್ಣುಗಳು ಬೇಕು. ಕಲಿಯುವ ಮನಸ್ಸುಗಳು ಬೇಕು. ಆಲ್ಬರ್ಟ್‌ಐನ್‌ಸ್ಟೈನ್ ಹೇಳಿರುವಂತೆ, ಜೀವನದ ಸಂಪೂರ್ಣ ವಿಚಾರಗಳು ಅರ್ಥವಾಗಬೇಕಾದರೆ ಪ್ರಕೃತಿಯ ಪ್ರತಿಯೊಂದು ವಿಚಾರಗಳನ್ನು ಗಮನಿಸಬೇಕು. ಪ್ರಕೃತಿಯಿಂದ ಬಹಳ ದೂರ ಉಳಿದ ವಿದ್ಯಾರ್ಥಿಗಳ ಬಗ್ಗೆ ತುಂಬಾ ರಾಷ್ಟ್ರಗಳು ಅದರಲ್ಲೂಅಮೆರಿಕಾ ನಡೆಸಿದ ಬಹಳಷ್ಟು ಅಧ್ಯಯನದ ಪ್ರಕಾರ ಮಕ್ಕಳು ಪ್ರಕೃತಿಯ ಸಂಪರ್ಕಕಡಿದುಕೊಂಡಿದ್ದಾರೆ. ಖಿನ್ನತೆ, ಬೊಜ್ಜು, ಡಯಾಬಿಟಿಸ್, ಬೌದ್ಧಿಕ ಅಸಮರ್ಥತೆ, ಏಕಾಗ್ರತೆಯಕೊರತೆ – ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆಎಂದು ಮಾಹಿತಿ ನೀಡಿದರು.

ಅಮೇರಿಕಾದಲ್ಲಿ ಶೇ.೫೦ ರಷ್ಟು ಮಕ್ಕಳು ಬೊಜ್ಜಿನ ಸಮಸ್ಯೆಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯಅಧ್ಯಯನ ಸಂಸ್ಥೆಯವರದಿಯ ಪ್ರಕಾರ ಸುಮಾರು ಶೇ.೮ರಷ್ಟು ಮಕ್ಕಳು ಕ್ಲಿನಿಕಲ್‌ಖಿನ್ನತೆಗೆ ಒಳಗಾಗಿದ್ದಾರೆ. ೨೦೦೨ರಲ್ಲಿ ೪೦ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪರಿಸರಆಧರಿತ ಶಿಕ್ಷಣ ಕ್ರಮ ಹಾಗೂ ಪಠ್ಯಕ್ರಮಆಧರಿತಶಿಕ್ಷಣ ಕ್ರಮ ಆಧರಿಸಿದ ವಿದ್ಯಾಭ್ಯಾಸ ವಿಶ್ಲೇಷಿಸಲು ನಡೆಸಿದ ವಿದ್ಯಾರ್ಥಿಗಳಲ್ಲಿ ಪರಿಸರಆಧರಿತಅಧ್ಯಯನ ಮಾಡಿದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಹೆಚ್ಚಿನ ಪ್ರಮಾಣದಲ್ಲಿತ್ತು. ಪ್ರಕೃತಿಯಜೊತೆಒಡನಾಡಿಕೊಂಡು ಬೆಳೆಯುವವರಲ್ಲಿ ಶೇ.೩೪ ರಷ್ಟು ಮರಣ ಪ್ರಮಾಣಕಡಿಮೆಇರುತ್ತದೆಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆಎಂದರು.

ಜಿಲ್ಲಾ ಪೊಲೀಸ್‌ಮುಖ್ಯಾಧಿಕಾರಿಉಮಾ ಪ್ರಶಾಂತ್ ಮಾತನಾಡಿ, ನಾವು ದಿನನಿತ್ಯ ಬದುಕುವುದೇ ಪ್ರಕೃತಿಯೊಂದಿಗೆ. ಪ್ರಕೃತಿ ವಿಕೋಪವಾಗಲಿ, ಜಾಗತಿಕತಾಪಮಾನದಲ್ಲಿ ವೈಪರೀತ್ಯವಾಗುತ್ತಿರುವುದಕ್ಕೆ ನಾವು ಪ್ರಕೃತಿಯನ್ನುಉತ್ತಮವಾಗಿ ನೋಡಿಕೊಳ್ಳದಿರುವುದೇ ಕಾರಣ. ಪರಿಸರವನ್ನು ಉಳಿಸುವುದರಿಂದ ಮಾತ್ರ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ಸಾಧ್ಯ. ಹಾಗಾದಾಗ ಮಾತ್ರ ಸುಸ್ಥಿರ ಅಭಿವೃದ್ಧಿ, ಆರ್ಥಿಕಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿಇಂಥ ಕಾರ್ಯಕ್ರಮಗಳ ಆಯೋಜನೆ ಸೂಕ್ತ ಎಂದರು.

ಸ್ವಾಗತಿಸಿ ಮಾತನಾಡಿದರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ ಮಾತನಾಡಿ, ಸೈಕಲ್ ತುಳಿ-ನಿಸರ್ಗ ತಿಳಿ ಎನ್ನುವಘೋಷವಾಕ್ಯದಅನ್ವಯ ನಿಸರ್ಗವನ್ನು ತಿಳಿದುಕೊಳ್ಳುವ ಸಲುವಾಗಿ ವೈಲ್ಡ್‌ಕ್ಯಾಟ್ ಸಿ. ಮತ್ತುಅರಣ್ಯ ಇಲಾಖೆ ಪ್ರತಿ ವರ್ಷ ಸೈಕಲ್‌ಜಾಥಾವನ್ನುಆಯೋಜಿಸುತ್ತಿದೆ.

ನಿಸರ್ಗವನ್ನುಅರ್ಥ ಮಾಡಿಕೊಳ್ಳಲು ಗಿಡ, ಮರ, ಪಕ್ಷಿಗಳು, ಕೆರೆಗಳು, ಹಳೆಯ ಮನೆಗಳು, ದೇವಸ್ಥಾನಗಳು – ಹೀಗೆ ಕುತೂಹಲಕಾರಿ ಅಂಶಗಳನ್ನು ವಿದ್ಯಾರ್ಥಿಗಳು ನೋಡುವತೀಕ್ಷ್ಣತೆಯದೃಷ್ಟಿಗೆಅನುಗುಣವಾಗಿ ಮಕ್ಕಳು ದಾಖಲಿಸಿಕೊಳ್ಳುವ ಕಾರ್ಯ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಮಕ್ಕಳಲ್ಲಿ ಬೌದ್ಧಿಕ ಮಟ್ಟ, ಪ್ರತಿಭೆ, ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಸೈಕಲ್‌ಜಾಥಾವನ್ನುಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಕ್ರಾಂತಿ, ಭದ್ರಾ ವನ್ಯಜೀವಿ ವಿಭಾಗದ ಉಪ ನಿರ್ದೇಶಕ ಪ್ರಭಾಕರ್, ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್, ವಲಯಅರಣ್ಯಾಧಿಕಾರಿ ಮಂಜುನಾಥ್ ಹಾಗೂ ಅರಣ್ಯಇಲಾಖೆಯಅಧಿಕಾರಿ, ಸಿಬ್ಬಂದಿ ಮತ್ತಿತರರುಕಾರ್ಯಕ್ರಮದಲ್ಲಿದ್ದರು. ಎಸ್.ಕೆ.ಪ್ರಣೀತ್‌ಕಾರ್ಯಕ್ರಮ ನಿರೂಪಿಸಿದರು. ವೈಲ್ಡ್ ಕ್ಯಾಟ್-ಸಿ.ಯ ಶ್ರೀದೇವ್ ಹುಲಿಕೆರೆಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಉದ್ದೇಶ, ಸಲಹೆ, ಜಾಥಾದ ಮಾರ್ಗದರ್ಶನವನ್ನು ನೀಡಿದರು.

ಜಿಲ್ಲಾಆಟದ ಮೈದಾನದಿಂದ ಸೈಕಲ್ ತುಳಿಯುತ್ತಾ ಹೊರಟ ೧೧೫ ಮಂದಿ ವಿದ್ಯಾರ್ಥಿಗಳ ಜೊತೆಜಿಲ್ಲಾರಕ್ಷಣಾಧಿಕಾರಿಉಮಾ ಪ್ರಶಾಂತ್ ಸಹ ತೇಗೂರಿನವರೆಗೆ ಸೈಕಲ್‌ನಲ್ಲಿ ತೆರಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ತೇಗೂರಿನಿಂದ ಮಳಲೂರು, ಸಿರಗಾಪುರ, ಗೌಡನಹಳ್ಳಿ, ಕೈಗಾರಿಕಾ ವಸಾಹತುವನ್ನು ಹಾದು ಬಂದ ವಿದ್ಯಾರ್ಥಿಗಳು ಹಲವು ಕೆರೆಗಳಲ್ಲಿ ತೆರೆದ ಕೊಕ್ಕಿನ ಕೊಕ್ಕರೆ, ಚಮಚಾ ಕೊಕ್ಕಿನ ಹಕ್ಕಿ, ಐಬೀಸ್ ಪಕ್ಷಿ, ಕಾಟನ್‌ಟೀಲ್, ವಿಜಲಿಂಗ್‌ಟೀಲ್, ಗಾರ್ಗ್ಯಾನಿ ಮುಂತಾದ ಪಕ್ಷಿಗಳನ್ನು ಎಣಿಸುತ್ತಾ ರಸ್ತೆಗಳಲ್ಲಿ ಕಂಡ ಮರ ಹಾಗೂ ಇನ್ನಿತರ ಸಸ್ಯಗಳನ್ನು ದಾಖಲಿಸಿಕೊಳ್ಳುತ್ತಾ ಮರದ ಮೇಲೆ ಕುಳಿತ ಹಕ್ಕಿಗಳ ಮಾಹಿತಿ ಸಂಗ್ರಹಿಸಿಕೊಳ್ಳುತ್ತಾ ಸಾಗಿ ಬಂದರು.

ಪ್ರತೀ ಹಂತದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಬಾರದಂತೆ ಪಾಯಿಂಟ್ ಪ್ರತಿನಿಧಿಗಳಾಗಿ ಈ ಸಂಸ್ಥೆಗಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿಂತಿದ್ದು, ವಿದ್ಯಾರ್ಥಿಗಳಿಗೆ ಗ್ಲೂಕೋಸ್ ಮತ್ತುಚಾಕೋಲೆಟ್‌ಒದಗಿಸಲಾಯಿತಲ್ಲದೆ ಮೈದಾನವೊಂದರಲ್ಲಿಅವರಿಗೆ ೨೦ ನಿಮಿಷಗಳ ಕಾಲ ವಿಶ್ರಾಂತಿ ನೀಡಿ ಲಘು ಉಪಾಹಾರಒದಗಿಸಲಾಯಿತು.

ಕಾರ್ಯಕ್ರಮದ ನೇತೃತ್ವವನ್ನುಭದ್ರಾ ವನ್ಯಜೀವಿ ಸಂರಕ್ಷಣಾಸಂಸ್ಥೆಯ ಡಿ.ವಿ.ಗಿರೀಶ್, ಶ್ರೀದೇವ್ ಹುಲಿಕೆರೆ, ಮನೀಶ್ ವಹಿಸಿದ್ದರು.

Cycle jatha for students

About Author

Leave a Reply

Your email address will not be published. Required fields are marked *

You may have missed