September 19, 2024

Foundation stone laying of school buildings sanctioned under Viveka Scheme: ವಿವೇಕ ಯೋಜನೆಯಡಿ ಮಂಜೂರಾದ ಶಾಲಾ ಕಟ್ಟಡಗಳ ಶಂಕುಸ್ಥಾಪನೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಮಂತ್ರಿಗಳು, ಎಂಪಿ, ಎಂ.ಎಲ್.ಎ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಪ್ರಾರಂಭಿಸಿ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಕೊಡಿಸುವುದು ಪ್ರತಿಷ್ಠೆಯ ವಿಷಯವಾದಾಗ ಮಾತ್ರ ಶಿಕ್ಷಣವು ಹೊರೆಯಾಗದೆ ಪರಾವಲಂಭಿ ಶಿಕ್ಷಣವಾಗುವುದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ನಗರದ ರಾಮನಹಳ್ಳಿಯ ಎಲ್.ಬಿ.ಎಸ್ ಸರ್ಕಾರಿ ಪ್ರೌಢಶಾಲೆ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ವಿವೇಕ ಯೋಜನೆಯಡಿ ಮಂಜೂರಾದ ಶಾಲಾ ಕಟ್ಟಡಗಳ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ. ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ವಿವೇಕ ಯೋಜನೆಯಡಿ ೫ ಕೋಟಿ ರೂ ವೆಚ್ಚದಲ್ಲಿ ೨೨ ಶಾಲೆ ೩೭ ಕೊಠಡಿಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಲಾಗಿದೆ, ಜಿಲ್ಲೆಯಲ್ಲಿ ೧೬೨ ಕೊಠಡಿ, ರಾಜ್ಯದಲ್ಲಿ ೮ ಸಾವಿರ ಕೊಠಡಿ ೧೨೫ ಕೋಟಿ ರೂಗಳಲ್ಲಿ ನಿರ್ಮಾಣವಾಗುತ್ತಿದೆ, ಸರ್ವಶಿಕ್ಷಣ ಯೋಜನೆ ಮುಕ್ತಾಯದ ನಂತರ ಮೊದಲನೆಯ ಬಾರಿಗೆ ಶಾಲಾ ಶಿಕ್ಷಣ ನಿರ್ಮಾಣವಾಗುತ್ತಿದೆ, ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರಿ ಶಾಲೆಗಳನ್ನು ಶಕ್ತಿಯುತವಾಗಿ ಮಾಡುವಂತಹ ಪ್ರಯತ್ನ ಸ್ವಾಗತಾರ್ಹ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೋಮ್ಮಾಯಿ ಮತ್ತು ಶಿಕ್ಷಣ ಸಚಿವ ನಾಗೇಶ್ ಅವರಿಗೆ ಅಭಿನಂಧನೆ ಸಲ್ಲಿಸಿದರು.

ದೇಶದಲ್ಲಿ ಯಾವುದೇ ಬದಲಾವಣೆ ಆದರು ಅದು ಶಿಕ್ಷಣದ ಮೂಲಕ ಮಾತ್ರ ಸಾದ್ಯ, ೧೩೦೦ ಕೋಟಿ ರೂ ವೆಚ್ಚದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಪ್ರಮಾಣದದಲ್ಲಿ ಮೂಲ ಸೌಕರ್ಯ, ಶಾಲೆಗಳಿಗೆ ಹೆಚ್ಚಿನ ಶಿಕ್ಷಕರನ್ನು ನೀಡುವುದರ ಜತೆಗೆ ಶೈಕ್ಷಣಿಕ ವಾತಾವರಣವನ್ನು ಬಲಗೊಳಿಸುವ ಅವಶ್ಯಕತೆ ಇದೆ, ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳು ಮತ್ತು ಮಂತ್ರಿಗಳು, ಎಂಪಿ, ಎಂ.ಎಲ್.ಎ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಪ್ರಾರಂಭಿಸಿ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಕೊಡಿಸುವುದು ಪ್ರತಿಷ್ಠೆಯ ವಿಷಯವಾದಾಗ ಮಾತ್ರ ಶಿಕ್ಷಣವು ಹೊರೆಯಾಗದೆ ಪರಾವಲಂಭಿ ಶಿಕ್ಷಣವಾಗುವುದು ಎಂದರು.

ವಿವೇಕಾನಂದರು ಭಾರತದ ಸಂಸ್ಕೃತಿಯ ಪ್ರತೀಕ, ಅವರ ಪ್ರತಿಯೋಂದು ಮಾತುಗಳು ಪ್ರೇರಣೆಯನ್ನು ನೀಡುತ್ತದೆ, ವಿವೇಕಾನಂದ ಅವರು ನಿನ್ನ ಬಾಳಿಗೆ ನೀನೆ ಶಿಲ್ಪಿ ಎಂದು ಹೇಳಿದರು, ಒಬ್ಬ ಮನುಷ್ಯ ತನ್ನ ಬಾಳಿನಲ್ಲಿ ಪರಿವರ್ತನೆ ತಂದುಕೊಳ್ಳಲು ಮೊದಲು ಗುರಿಯನ್ನು ಇಟ್ಟುಕೊಳ್ಳಬೇಕು, ಗುರಿಯ ಕಡೆಗೆ ತಾನೇ ಶಿಲ್ಪಿಯಾಗಿ ತನ್ನನ್ನು ತಾನು ಪರಿವರ್ತನೆ ಮಾಡಿಕೊಳ್ಳಬೇಕು ಉದ್ದೇಶವಿತ್ತು, ಬ್ರಿಟೀಷರ ಆಡಳಿತವಿದ್ದ ಸಂದರ್ಭದಲ್ಲಿ ಭಾರತದ ಕಡೆಗೆ ಗಮನವೇ ಇಲ್ಲದ ಸಂದರ್ಭದಲ್ಲಿ ಜಗತ್ತಿನ ಗಮನವನ್ನು ಭಾರತದ ಸನಾತನ ಸಂಸ್ಕೃತಿಯ ಪರಿಚಯದ ಮೂಲಕ ಜಗತ್ತಿನ ಗಮನವನ್ನು ಸೆಳೆದವರು, ಇಂತಹ ಮಹನೀಯರ ಹೆಸರಿನಲ್ಲಿ ನಿರ್ಮಾಣ ವಾಗುತ್ತಿರುವ ಶಾಲಾ ಕೋಠಡಿಗಳಿಗು ವಿವೇಕಾನಂದರ ಶಾಲೆಗಳಿಗು ವಿರೋಧವನ್ನು ವ್ಯಕ್ತಪಡಿಸುತ್ತಿರುವುದು ಅವರ ಮಾನಸಿಕ ತನವನ್ನು ತೋರಿಸುತ್ತದೆ, ನಗರದ ಸರ್ಕಾರಿ ಶಾಲೆಗಳ ದುರಸ್ಥಿ ಕಾರ್ಯಕ್ಕೆ ೨೦ ಕೋಟಿ ರೂ ಅನುದಾನ ಬಂದಿದ್ದು, ಇನ್ನು ಹೆಚ್ಚಿನ ಅನುದಾನ ತರಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಲಲಿತರಾಜನಾಯ್ಕ, ಮಾಜಿ ಅಧ್ಯಕ್ಷ ಪುಷ್ವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಪಿ.ಡಬ್ಲೂ.ಡಿ ಗವಿರಂಗಪ್ಪ, ನರಸಿಂಹ ಮೂರ್ತಿ, ಪರಮೇಶ್ ಉಪಸ್ಥಿತರಿದ್ದರು.

Foundation stone laying of school buildings sanctioned under Viveka Scheme

About Author

Leave a Reply

Your email address will not be published. Required fields are marked *

You may have missed