September 19, 2024

Installation of EVM warehouse for safe storage of EVMs: ಮತಯಂತ್ರಗಳನ್ನು ಸುರಕ್ಷಿತವಾಗಿ ಸಂಗ್ರಹಣೆಗೆ ಇವಿಎಂ ವೇರ್ ಹೌಸ್‌ ಸ್ಥಾಪನೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಮತಯಂತ್ರಗಳನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡುವಉದ್ದೇಶದಿಂದ ಇವಿಎಂ ವೇರ್ ಹೌಸ್‌ಗಳನ್ನು ಪ್ರತೀ ಜಿಲ್ಲೆಗಳಲ್ಲಿ ಸ್ಥಾಪಿಸಲು ಭಾರತಚುನಾವಣಾಆಯೋಗ ೨೦೧೭-೧೮ರಲ್ಲಿ ನಿರ್ದೇಶನ ನೀಡಿದೆ. ಅದರಂತೆಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಇವಿಎಂ ವೇರ್‌ಹೌಸ್‌ನ್ನುಉದ್ಘಾಟನೆ ಮಾಡಿರುವುದು ಹೆಮ್ಮೆಯ ಹಾಗೂ ಗೌರವದ ಸಂಕೇತ. ಸದ್ಯದಲ್ಲೇ ಚುನಾವಣೆಗಳು ನಡೆಯಲಿದ್ದು, ನಿರ್ಮಿತಿಕೇಂದ್ರ ಸುಸಜ್ಜಿತ ಇವಿಎಂ ವೇರ್‌ಹೌಸ್‌ನಿರ್ಮಿಸಿಕೊಟ್ಟಿರುವುದು ಸಂತಸದ ವಿಷಯಎಂದುಜಿಲ್ಲಾಧಿಕಾರಿಕೆ.ಎನ್.ರಮೇಶ್ ಹೇಳಿದರು.

ನಗರದ ಫ್ಲೋರಾಎನ್‌ಕ್ಲೇವ್(ಟೀಚರ್ಸ್ ಲೇಔಟ್), ಸಗನೀಪುರರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದಚಿಕ್ಕಮಗಳೂರು ಜಿಲ್ಲೆಯ ಇವಿಎಂ(ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ವೇರ್‌ಹೌಸ್‌ಅನ್ನುಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ವಿಶ್ವದ ಬೃಹತ್ ಪ್ರಜಾಪ್ರಭುತ್ವದೇಶವಾಗಿದ್ದು, ೧೯೯೮ರಲ್ಲಿ ವಿದ್ಯುನ್ಮಾನ ಮತದಾನಯಂತ್ರ(ಇವಿಎಂ)ವನ್ನು ಮತದಾನ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮುಂದುವರಿದ ರಾಷ್ಟ್ರಗಳಾದ ಅಮೆರಿಕಾ, ಇಂಗ್ಲೆಂಡ್ ದೇಶಗಳಲ್ಲಿ ಸಂಪೂರ್ಣವಾಗಿ ಇವಿಎಂ ಯಂತ್ರವನ್ನು ಅಳವಡಿಸಲಾಗಿಲ್ಲ. ಭಾರತದ ಇವಿಎಂ ಯಂತ್ರವನ್ನುಅಧ್ಯಯನ ಮಾಡಿ ವಿದೇಶದಲ್ಲೂ ಅಳವಡಿಸಿಕೊಳ್ಳಲಾಗಿದೆಎಂದುಅವರು ತಿಳಿಸಿದರು.

ಭಾರತದಲ್ಲಿ ಪ್ರೌಢಮಟ್ಟದಲ್ಲಿ ಇವಿಎಂ ಯಂತ್ರವನ್ನು ಅಳವಡಿಸಲಾಗಿದೆ. ಪ್ರತೀ ಬಾರಿಚುನಾವಣೆಯಾದಾಗ ಇವಿಎಂ ಯಂತ್ರದ ಬಗ್ಗೆ ಚರ್ಚೆಗಳಾಗುತ್ತವೆ. ಇದಕ್ಕಾಗಿ ಭಾರತಚುನಾವಣಾಆಯೋಗ ೨೦೧೭ನೇ ಇಸವಿಯಲ್ಲಿಯಂತ್ರವನ್ನು ಹ್ಯಾಕ್ ಮಾಡುವ ಮುಕ್ತ ಸವಾಲನ್ನುಇಟ್ಟಿತ್ತು. ಸವಾಲಿನಲ್ಲಿಯಾರೂಯಶಸ್ಸು ಗಳಿಸಲಿಲ್ಲ.ಯಾಕೆಂದರೆಅದರ ಸಾಗಾಣಿಕೆ, ನಿರ್ವಹಣೆ, ಅಭ್ಯರ್ಥಿಗಳನ್ನು ವ್ಯವಸ್ಥೆ ಪಡಿಸುವುದು, ಮತಗಳ ಸಂಗ್ರಹಣೆ ಇವುಗಳ ಕುರಿತಾಗಿ ಶಿಷ್ಟಾಚಾರವನ್ನು ನಿಗದಿಪಡಿಸಲಾಗಿದ್ದು, ಪಾರದರ್ಶಕಹಾಗೂ ಸುರಕ್ಷತೆಯನ್ನು ಹೊಂದಿದೆಎಂದುಅವರು ಹೇಳಿದರು.

ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಪ್ರಜಾಪ್ರಭುತ್ವದ ಪ್ರಿತಿನಿಧಿಯಾಗಿರುವ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಗೆದೇಶದಚುನಾವಣಾ ವ್ಯವಸ್ಥೆಕೈಗನ್ನಡಿ. ಭಾರತದಲ್ಲಿ ನಡೆಯುವಚುನಾವಣೆ ಪಾರದರ್ಶಕವಾಗಿದ್ದು, ಇಡೀ ವಿಶ್ವವೇಗಮನಿಸುತ್ತಿದೆಎಂದರು.

ಸಂವಿಧಾನದಿಂದ ಸ್ಥಾಪಿತವಾದಚುನಾವಣಾಆಯೋಗ ಕಳೆದ ೭೫ ವರ್ಷಗಳಿಂದ ಯಾವುದೇಚ್ಯುತಿ ಬರದಂತೆಕಾರ್ಯ ನಿರ್ವಹಿಸುತ್ತಿದ್ದು, ಕಂದಾಯ ಇಲಾಖೆ ಅದರಆಧಾರಸ್ತಂಭವಾಗಿ ನಿಂತಿದೆ. ಪ್ರತಿ ತಾಲ್ಲೂಕುಗಳಲ್ಲಿಯೂ ಮಾದರಿ ಇವಿಎಂ ವೇರ್‌ಹೌಸ್ ಘಟಕಗಳಿದ್ದರೆ ಉತ್ತಮವಾಗಿರುತ್ತದೆಎಂದುಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಉಮಾ ಪ್ರಶಾಂತ್ ಮಾತನಾಡಿ, ಭಾರತದ ಪ್ರಜಾಪ್ರಭುತ್ವದಲ್ಲಿಚುನಾವಣೆ ಪ್ರಮುಖ ಪಾತ್ರ ವಹಿಸುತ್ತದೆ. ಭಾರತಚುನಾವಣಾಆಯೋಗದ ಮಾರ್ಗದರ್ಶನ ಹಾಗೂ ನಿಯಮಗಳಂತೆ ಪಾರದರ್ಶಕವಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆಎಂದರು.

ನಿರ್ಮಿತಿಕೇಂದ್ರದಯೋಜನಾಧಿಕಾರಿಗಂಗಾಧರ್ ಮಾತನಾಡಿ, ರೂ. ೨.೬೫ ಕೋಟಿ ವೆಚ್ಚದಲ್ಲಿ ಇವಿಎಂ ವೇರ್‌ಹೌಸ್ ನಿರ್ಮಿಸಲಾಗಿದೆ. ಇದು೧೪೫ ಅಡಿ ಉದ್ದ ಹಾಗೂ ೬೬ ಅಡಿ ಅಗಲವಿದ್ದು, ಸುಸಜ್ಜಿತವಾಗಿದೆ.ಕಟ್ಟಡವನ್ನು ೩ ಅಂತಸ್ತುಗಳವರೆಗೆ ವಿಸ್ತರಿಸಬಹುದುಎಂದು ಮಾಹಿತಿ ನೀಡಿದರು.

ಪರಜಿಲ್ಲಾಧಿಕಾರಿಬಿ.ಆರ್.ರೂಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕಮಗಳೂರು ತಹಶೀಲ್ದಾರ್ ವಿನಾಯಕ ಸಾಗರ್ ವಂದಿಸಿದರು. ಉಪವಿಭಾಗಾಧಿಕಾರಿರಾಜೇಶ್, ನಿರ್ಮಿತಿ ಕೇಂದ್ರದ ಗಂಗಾಧರ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Installation of EVM warehouse for safe storage of EVMs

About Author

Leave a Reply

Your email address will not be published. Required fields are marked *

You may have missed