September 19, 2024

Mock Parliament: ಭಾರತಕ್ಕೆ ಪ್ರಪಂಚದಲ್ಲೇ ಅತ್ಯಂತ ಉದ್ದವಾದ ಲಿಖಿತ ಸಂವಿಧಾನವಿದೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಭಾರತಕ್ಕೆ ಪ್ರಪಂಚದಲ್ಲೇ ಅತ್ಯಂತ ಉದ್ದವಾದ ಲಿಖಿತ ಸಂವಿಧಾನವಿದೆ. ಅದು ದೇಶದ ಜನರ ಮೂಲಭೂತ ಜವಾಬ್ದಾರಿಗಳನ್ನೊಳಗೊಂಡ ಲಿಖಿತ ದಾಖಲೆಯಾಗಿದೆ. ಇದರ ಪ್ರಕಾರ ಎಲ್ಲಾ ದೇಶವಾಸಿಗಳ ಹಕ್ಕುಗಳನ್ನು ಪ್ರತಿಪಾದಿಸುವ ಸಲುವಾಗಿ ಸಂಸತ್ತನ್ನು ರಚಿಸಲಾಗಿದೆ ಎಂದು ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಹೇಳಿದರು.

ಅವರು ಮಂಗಳವಾರ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆ ಮತ್ತು ಇತರೆ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಅಣಕು ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು.

ಕಟುಂಬ ಸದೃಢವಾಗಿ ನಡೆಯಬೇಕು ಎಂದರೆ ಅದರಲ್ಲಿರುವ ಎಲ್ಲರಿಗೂ ಜವಾಬ್ದಾರಿ ಮತ್ತು ಪಾತ್ರಗಳಿರುತ್ತವೆ. ಹಾಗೆಯೇ ಇಡೀ ಪ್ರಪಂಚದ ಆಡಳಿತವನ್ನು ನೋಡಿದಾಗ ಅದನ್ನು ಕ್ರಮಬದ್ಧವಾಗಿ ನಡೆಸಲು ಒಂದು ಚೌಕಟ್ಟು ಬೇಕಾಗುತ್ತದೆ. ಇದು ಅಲಿಖಿತವಾದ ಪದ್ಧತಿಯಾಗಿ ಅಳವಡಿಸಿಕೊಂಡಿರುತ್ತೇವೆ. ಅದೇ ರೀತಿ ಅನುಸರಿಸಬೇಕಾದ ಎಲ್ಲಾ ಜವಾಬ್ದಾರಿಗಳನ್ನು ಕುರಿತ ಲಿಖಿತ ಸಂವಿಧಾನಗಳನ್ನೂ ಅಳವಡಿಸಿಕೊಂಡಿವೆ ಎಂದರು.

ನಮ್ಮ ಸಂಸತ್ತು ಕಾಯ್ದೆಗಳನ್ನು ಮಾಡುವುದಷ್ಟೇ ಅಲ್ಲದೆ ಅಗತ್ಯವಿಲ್ಲ ಎಂದರೆ ಅದನ್ನು ಹಿಂದಕ್ಕೂ ಪಡೆಯುತ್ತದೆ. ಸಂಸತ್ತು ನೀತಿ ರೂಪಕ ಆಗಿರುತ್ತದೆ. ಸಾಧಕ ಬಾಧಕಗಳನ್ನು ಸಮಾಲೋಚನೆ ಮಾಡಿ ನಮ್ಮ ಜನರಿಗೆ ಯಾವುದು ಒಳಿತು ಎನ್ನುವುದನ್ನು ತೀರ್ಮಾನಿಸಿ ಅತಿಮಗೊಳಿಸುತ್ತದೆ ಎಂದು ವಿವರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ಭಾರತದ್ದು, ಈ ವ್ಯವಸ್ಥೆಯಲ್ಲಿ ಒಬ್ಬ ಮನುಷ್ಯ, ಕುಟುಂಬಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳು ಬೇಕಿರುತ್ತದೆ. ಇದೆಲ್ಲವನ್ನೂ ನಿರ್ವಹಿಸಲು ಇಲಾಖೆಗಳನ್ನು ರಚಿಸಲಾಗಿದೆ. ಅದಕ್ಕೆ ಬೇಕಾದ ಕಾನೂನುಗಳನ್ನು ರಚಿಸುವ ಜವಾಬ್ದಾರಿ ಸಂಸತ್ತಿನದ್ದಾಗಿರುತ್ತದೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ದೇಶದ ಸಂವಿಧಾನ, ಸಂಸತ್ತು ವ್ಯವಸ್ಥೆ ಬಗ್ಗೆ ತಿಳಿದುಕೊಂಡು ಉತ್ತಮ ಪ್ರಜೆಗಳಾಗಬೇಕು ಎನ್ನುವ ದೃಷ್ಠಿಯಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಂ.ಸಿ.ಪ್ರಕಾಶ್ ಮಾತನಾಡಿ ಶಾಲಾ ಮಕ್ಕಳು ದೇಶ ಮತ್ತು ಪ್ರಪಂಚದ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ನಾನೂ ಒಬ್ಬ ಉತ್ತಮ ಸಂಸದೀಯಪಟುವಾಗಬೇಕು ಎನ್ನುವ ಅಭಿಲಾಷೆ ಮೂಡಬೇಕು. ಉತ್ತಮ ಆಡಳಿತಗಾರರಾಗಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು. ಲೋಕಸಭೆ ಕಲಾಪಗಳು ಹಾಗೂ ಅಲ್ಲಿ ರೂಪಿತವಾಗುವ ನೀತಿ, ಕಾನೂನುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಸ್ಪರ್ದೆಯ ಉದ್ದೇಶ ಎಂದರು.

ಸಂಘದ ಜಂಟೀ ಕಾರ್ಯದರ್ಶಿ ಕೆ.ಕೆ.ಮನುಕುಮಾರ್ ಸ್ವಾಗತಿಸಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ್‌ಗೌಡ ರವಿ ಕುಮಾರ್, ಡಿ.ಡಿ.ಪಿ.ಐ ರಂಗನಾಥ್, ಸಂಘದ ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕ ರಾಜು, ಪ್ರಾಂಶುಪಾಲರಾದ ತೇಜಸ್ವಿನಿ ಮುಖ್ಯ ಶಿಕ್ಷಕ ವಿಜಿತ್, ಇತರರು

Mock Parliament

About Author

Leave a Reply

Your email address will not be published. Required fields are marked *

You may have missed