September 19, 2024

World Disability Day: ದೌರ್ಬಲ್ಯಗಳನ್ನು ಮೆಟ್ಟಿನಿಂತು ಆತ್ಮಸ್ಥೈರ್ಯದಿಂದ ಹಲವಾರು ಸಾಧನೆ ಮಾಡಿದ್ದಾರೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ವಿಕಲಚೇತನರು ತಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು ಆತ್ಮಸ್ಥೈರ್ಯದಿಂದ ಹಲವಾರು ಸಾಧನೆ ಮಾಡಿದ್ದಾರೆಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚಾರಣೆ ಹಾಗೂ ಕ್ರೀಡಾಕೂಟ ಮತ್ತು ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಕಲಚೇತನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಯೋಗಕ್ಷೇಮದ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಜವಾಬ್ದಾರಿಯನ್ನು ವಹಿಸಲು ಡಿ.೩ನೇ ತಾರೀಖನ್ನು ವಿಶ್ವ ವಿಕಲಚೇತನ ದಿನಾಚಾರಣೆಯನ್ನಾಗಿ ಘೋಷಣೆ ಮಾಡಲಾಯಿತು, ತಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು ಆತ್ಮಸ್ಥೈರ್ಯದಿಂದ ಹಲವಾರು ಸಾಧನೆ ಮಾಡಿದ್ದಾರೆ, ಪ್ರತಿಯೋಬ್ಬರು ನಕಾರಾತ್ಮಕ ಚಿಂತನೆಯಿಂದ ಹೊರಬಂದು ಸಕಾರಾತ್ಮಕ ಚಿಂತನೆಯನ್ನು ಹೊಂದಿದಾಗ ಸಾಧನೆಮಾಡಲು ಸಾದ್ಯ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ಮಾತನಾಡಿ ವಿಕಲಚೇತನರಿಗಾಗಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ದಿನಾಚಾರಣೆಯ ಮುಖ್ಯ ಉದ್ದೇಶ ವಿಕಲಚೇತನ ಅಲ್ಲ ವಿಶೇಷ ಚೇತನರು, ಅವರಿಗೆ ಸಿಂಪತಿಯ ಬದಲಾಗಿ ಪ್ರೋತ್ಸಾಹದ ಅಗತ್ಯವಿದೆ, ಸಮಾಜದಲ್ಲಿ ಅವರಿಗೆ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮತ್ತು ಸರ್ಕಾರದಿಂದ ಸಿಗುವ ಅವಕಾಶಗಳನ್ನು ತಿಳಿಸಿ ಎಲ್ಲರಂತೆ ಎಲ್ಲರೊಂದಿಗೆ ಕರೆದುಕೊಂಡು ಹೋಗುವಂತೆ ಮಾಡುವ ಮುಖ್ಯ ಕೆಲಸ ಆಗಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಮಾತನಾಡಿ ವಿಕಲಚೇತನರಿಗಾಗಿ ಅತ್ಯುತ್ತಮವಾದ ಸಂಘವನ್ನು ಕಟ್ಟುವುದರ ಜತೆಗೆ ತಮ್ಮೆಲ್ಲರ ಏಳಿಗೆಗಾಗಿ ದುಡಿಯುತ್ತಿರುವ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಂಧನೆಗಳನ್ನು ತಿಳಿಸಿ, ಆಡಳಿತ ವ್ಯವಸ್ಥೆಯಿಂದ ರೂಪಿಸಲಾದ ಯೋಜನೆಗಳು ಮತ್ತು ಸವಲತ್ತುಗಳು ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.

ಸರ್ಕಾರ ವಿಕಲಚೇತನರಿಗಾಗಿ ಹಲವು ಸಮಗ್ರಯೋಜನೆಗಳು ರೂಪಿಸಿದೆ, ಕೇಂದ್ರ ಸರ್ಕಾರ ಜಿಲ್ಲೆಯ ವಿಕಲಚೇತನರನ್ನು ಗುರುತಿಸಿ ಆಧಾರ್‌ಕಾರ್ಡ್ ಮಾದರಿಯ ಯುಡಿಐಡಿ ಕಾರ್ಡ್‌ಗಳನ್ನು ನೀಡುವ ನಿರ್ಧಾರವನ್ನು ಮಾಡಿದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಲಾಖೆಯ ಉಪನಿರ್ದೇಶಕರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಪ್ರತಿ ತಾಲ್ಲೂಕುಗಳಲ್ಲಿ ಕ್ಯಾಂಪ್‌ಗಳನ್ನು ಮಾಡುವುದರ ಮೂಲಕ ಅರ್ಹರನ್ನು ಗುರುತಿಸಿ ೧೪ ಸಾವಿರ ಯುಡಿಐಡಿ ಕಾರ್ಡ್‌ಗಳನ್ನು ನೀಡುವುದರಲ್ಲಿ ಜಿಲ್ಲೆ ಯಶಸ್ವಿಯಾಗಿದೆ, ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಅಂಗವಿಕಲರಿಗಾಗಿ ಚಿಕಿತ್ಸೆ ಮತ್ತು ಪ್ರಮಾಣಪತ್ರ ಸುಲಭರೀತಿಯಲ್ಲಿ ದೋರೆಯುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿವ್ಯಕ್ತಿಗೂ ೫ ಲಕ್ಷದ ವರೆಗಿನ ಉಚಿತ ಚಿಕಿತ್ಸೆಯನ್ನು ಸರ್ಕಾರ ನೀಡುತ್ತಿದೆ, ಈ ಯೋಜನೆಯಡಿಯಲ್ಲಿ ೩೦ ಸಾವಿರ ರೋಗಿಗಳು ಪ್ರಯೋಜನವನ್ನು ಪಡೆದಿದ್ದಾರೆ, ನಿರಂತರವಾಗಿ ಉಚಿತ ಕೃತಕ ಜೋಡಣೆಯನ್ನು ಮಾಡಲಾಗುತ್ತಿದೆ, ನಮ್ಮ ಜಿಲ್ಲೆಯಿಂದ ೮೦ ದಿವ್ಯಾಂಗಚೇತನ ಯುವಕರನ್ನು ಗುರುತಿಸಿ ನಗರ ಮತ್ತು ತಾಲ್ಲೂಕು ಮಟ್ಟದಲ್ಲಿ ಹುದ್ದೆಗಳನ್ನು ನೀಡಲಾಗಿದೆ, ನಗರ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರ ಅಭಿವೃದ್ಧಿಗಾಗಿ ೫ ಅನುದಾನಗಳನ್ನು ಮೀಸಲಿಡುವುದರ ಜತೆಗೆ ೧ ಕೋಟಿ ರೂ ವೆಚ್ಚದಲ್ಲಿ ವಿಕಲಚೇತನರ ಭವನ ಕಟ್ಟಡವನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ, ಮುಂದಿನ ದಿನಗಳಲ್ಲಿ ಅನಿವಾರ್ಯ ಸಂದರ್ಭದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ಜತೆಗೆ ತರಬೇತಿ ಕೇಂದ್ರ ಮತ್ತು ಕಾರ್ಯಕ್ರಮ ಆಯೋಜನೆಗೆ ಭವನವನ್ನು ಮೀಸಲಿಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ನರೇಂದ್ರ ಮೋದಿಯವರ ಸರ್ಕಾರ ಮತ್ತು ಬಸವರಾಜ ಬೋಮ್ಮಾಯಿ ಸರ್ಕಾರ ಬಂದನಂತರ ವಿಕಲಚೇತನರಿಗಾಗಿ ವಿಶೇಷ ಯೋಜನೆಗಳನ್ನು ನೀಡಿದ್ದಾರೆ, ಸೂಕ್ತ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರವುದು ಸರ್ಕಾರದ ಮೂಲ ಉದ್ದೇಶವಾಗಿದೆ, ಸರ್ಕಾರಿ ಹುದ್ದೆಗಳ ಮೀಸಲಾತಿಯ ಜತೆಗೆ ಹಲವು ಯೋಜನೆಗಳನ್ನು ಯೋಜನೆಗಳನ್ನು ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ, ಜಿಲ್ಲೆಯಲ್ಲಿ ವಿಕಲಚೇತನರ ಭವನ ನಿರ್ಮಾಣ ಮಾಡಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಲಾಗುತ್ತಿದ್ದು, ಭವನ ನಿರ್ಮಾಣಕ್ಕೆ ಬೇಕಾದ ವಿಶೇಷ ಅನುದಾನವನ್ನು ನಗರಸಭೆ ವತಿಯಿಂದ ರೂಪಿಸಲಾಗುವುದು ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಚರಣ್‌ರಾಜ್ ಮಾತನಾಡಿ ಹಿಂದಿನಕಾಲದಲ್ಲಿ ವಿಕಲಚೇತನ ಎಂಬುದು ಒಂದು ಶಾಪ ಎಂಬುದಾಗಿ ಪರಿಗಣಿಸಲಾಗುತ್ತಿತ್ತು, ನಂತರದ ದಿನಗಳಲ್ಲಿ ವೃತ್ತಿಪರ ಮತ್ತು ವೈದ್ಯಕೀಯ ಬದಲಾವಣೆ ಮತ್ತು ವಿವಿಧ ಕಾಯ್ದೆಗಳಿಂದ ೨೧ ರೀತಯ ವಿಕಲಚೇತನರು ಗುರುತಿಸಲಾಗಿದ್ದು, ಸಮಾಜದಲ್ಲಿ ಅವರಿಗೆ ಎಲ್ಲರಂತೆ ಸಮಾನರಾಗಿ ಬದುಕಲು ಸಾಕಷ್ಟು ಅವಕಾಶಗಳಿವೆ, ವಿಕಲಚೇತನರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ, ಮಂಜುಳಹುಲ್ಲಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ಆಶಾಕಿರಣ ಶಾಲೆ ಸಂಸ್ಥಾಪಕ ಶರೀಫ್, ಶಶಿಪ್ರಸಾದ್, ಗಿರಿಧರ್‌ಯತೀಶ್, ರಂಗನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಸ್.ರಾಜನಾಯ್ಕ ಜಿಲ್ಲಾ ವಿಕನಚೇತನರ ಕಲ್ಯಾಣಾಧಿಕಾರಿ ಪೃಥ್ವಿಜಿತ್ ಮತ್ತಿತರರು ಉಪಸ್ಥಿತರಿದ್ದರು.

World Disability Day

About Author

Leave a Reply

Your email address will not be published. Required fields are marked *

You may have missed