September 19, 2024

Chunchotsava-2022: ವಿನಯ, ವಿವೇಕ, ವಿಧೇಯತೆ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ : ಪುಟ್ಟನಾಯ್ಕ

0

????????????????????????????????????

ಚಿಕ್ಕಮಗಳೂರು: ವಿನಯ, ವಿವೇಕ ಹಾಗೂ ವಿಧೇಯತೆ ಎಂಬ ಮೂರು ವಿಶೇಷ ಗುಣಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಮಾಜದಲ್ಲಿ ಯಾವುದೇ ಕ್ಷೇತ್ರಗಳಲ್ಲಾದರೂ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟನಾಯ್ಕ ಹೇಳಿದರು.

ನಗರದ ಹೌಸಿಂಗ್ ಬೋರ್ಡ್‌ನ ಬಿಜಿಎಸ್ ಕ್ಯಾಂಪಸ್‌ನಲ್ಲಿ ಶ್ರೀ ಮಂಜುನಾಥೇಶ್ವರ ಆದಿಚುಂಚನ ಗಿರಿ ಪ್ರೌಢಶಾಲೆಯಲ್ಲಿ ಚುಂಚೋತ್ಸವ-೨೦೨೨ರ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶದ ಮಹಾನೀಯರಾದ ವಿವೇಕಾನಂದ, ವಿಶ್ವೇಶ್ವರಯ್ಯ, ಮಹಾತ್ಮಗಾಂಧಿಯಂತಹ ಸಾಧಕರು ಇಂತಹ ಗುಣಗಳನ್ನು ಅಳವಡಿಸಿಕೊಂಡು ಪ್ರಪಂಚದಾದ್ಯಂತ ಜನಮನ್ನಣೆ ಪಡೆದುಕೊಂಡಿದ್ದು ಅಂತಹ ವರ ಸಾಲಿಗೆ ಸೇರ್ಪಡೆಯಾಗಲು ಇಂದಿನ ಯುವಪೀಳಿಗೆ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಮಕ್ಕಳು ಉತ್ತಮ ಸಂಸ್ಕಾರವನ್ನು ಮೊದಲು ಪಡೆದುಕೊಳ್ಳುವುದು ತಂದೆ-ತಾಯಿ ಹಾಗೂ ಪೋಷಕ ರಿಂದ ಮಾತ್ರ. ಇವುಗಳನ್ನು ಮನಗಂಡು ಬಾಲ್ಯದಿಂದಲೇ ಮಕ್ಕಳಿಗೆ ನಾಡಿನ ಹಾಗೂ ದೇಶದ ಮಹಾ ನೀಯ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತಿಳಿಸುವ ಮೂಲಕ ಸಂಸ್ಕಾರ ಕಲಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್ ಮಂಜು ನಾಥ್ ಸದೃಢ ಶಿಕ್ಷಣವನ್ನು ಪಡೆದುಕೊಳ್ಳುವುದರ ಜೊತೆಗೆ ಸದೃಢ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡಲ್ಲಿ ಆರೋಗ್ಯಯುತವಾಗಿ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಶಾಲೆಯ ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿ ಕ್ರೀಡೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿರುವುದು ಸಂತಸದ ವಿಷಯ ಎಂದು ತಿಳಿಸಿದರು.

ಮಕ್ಕಳಿಗೆ ಸರ್ವತೋಮುಖ ಶಿಕ್ಷಣ, ಕ್ರೀಡಾಸಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಮಧ್ಯಮ ವರ್ಗದ ಸಾಮಾನ್ಯ ಜನತೆಗೆ ಪ್ರೇರಣೆಯಾಗಿ ಕೋಟ್ಟಿಗಟ್ಟಲೆ ವಿದ್ಯಾರ್ಥಿಗಳನ್ನು ವ್ಯಾಸಂಗ ನೀಡಿ ಅನುಕೂಲ ಕಲ್ಪಿಸಿರುವುದು ಬಿಜಿಎಸ್ ಶಾಲೆ ಎಂದರು.

ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜೆ.ಜಿ.ಸುರೇಂದ್ರ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವುದನ್ನು ಮಾತ್ರ ವಿದ್ಯಾರ್ಥಿಗಳು ಹೊಂದಿರಬೇಕು. ಸೋಲು, ಗೆಲುವು ಸಾಮಾನ್ಯವಾಗಿ ರುತ್ತವೆ. ಗೆಲುವು ಕಂಡೊಡನೆ ಬೀಗಬಾರದು. ಸೋಲು ಕಂಡವರು ಎಂದಿಗೂ ಪ್ರಯತ್ನವನ್ನು ಕೈಬಿಡಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಇದೇ ವೇಳೆ ಎಲ್.ಕೆ.ಜಿ.ಯಿಂದ ಪಿಯುಸಿವರೆಗೆ ಅತಿಹೆಚ್ಚು ಅಂಕಗಳಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸಿ ಅತ್ಯುತ್ತಮ ಸ್ಥಾನಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಶ್ರೀಮತಿ ಕವಿತಾ ಶೇಖರ್, ಎಐಟಿ ಪ್ರಾಂಶುಪಾಲ ಡಾ|| ಸಿ.ಟಿ. ಜಯದೇವ್, ಪ್ರಿನ್ಸಿಪಾಲ್ ಅಸೋಸಿಯೇಷನ್ ಅಧ್ಯಕ್ಷ ಇಂದ್ರೇಶ್, ಶ್ರೀ ಆದಿಚುಂಚನಗಿರಿ ಮುಖ್ಯೋ ಪಾಧ್ಯಾಯ ಜಿ.ಆರ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಶಿವಾನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಪ್ರಭಾಮಣಿ ಸ್ವಾಗತಿಸಿದರು.

Chunchotsava-2022

About Author

Leave a Reply

Your email address will not be published. Required fields are marked *

You may have missed