September 19, 2024

Tell the people about the court order: ಕೋರ್ಟ್‌ ಆದೇಶ ಜನರಿಗೆ ತಿಳಿಸಿ

0

ಚಿಕ್ಕಮಗಳೂರು: ‘ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ/ಸಂಸ್ಥೆಗೆ ಸಂಬಂಧಿಸಿದಂತೆ ಕೋರ್ಟ್‌ ಆದೇಶಗಳು, ಧಾರ್ಮಿಕ ದತ್ತಿ ಇಲಾಖೆ ಕೈಗೊಂಡಿರುವ ನಿರ್ಧಾರಗಳು, ಇಲಾಖೆ ರಚಿಸಿರುವ ವ್ಯವಸ್ಥಾಪನಾ ಸಮಿತಿ ಕೈಗೊಂಡಿರುವ ಕ್ರಮಗಳನ್ನು ಜಿಲ್ಲಾಡಳಿತ ಜನರಿಗೆ ತಿಳಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಇಲ್ಲಿ ಶುಕ್ರವಾರ ಒತ್ತಾಯಿಸಿದರು.

‘ದತ್ತ ಜಯಂತಿ, ಉರುಸ್‌ಗೆ ಸಂಬಂಧಿಸಿದಂತೆ ಕೋರ್ಟ್‌ ಆದೇಶಗಳು ಏನಿವೆ ಎಂಬುದನ್ನು ಆಡಳಿತ ಪಕ್ಷದವರು ತೆರೆದ ಪುಸ್ತಕದಂತೆ ಸಾರ್ವಜನಿಕರ ಮುಂದಿಡಬೇಕು. ದತ್ತಪೀಠದ ಹೆಸರಿನಲ್ಲಿ ಅನೇಕರು ಶಾಸಕರಾಗಿದ್ದಾರೆ. ಇನ್ನಾದರೂ ಅವರು ಆ ವಿಷಯಕ್ಕೊಂದು ಮುಕ್ತಿ ನೀಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

‘ದತ್ತ ಜಯಂತಿಗೆ ಬಂದವರು ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌, ಹೆಲ್ಮೆಟ್‌ ಧರಿಸದೆ ಸಂಚರಿಸಿದರೂ ಕ್ರಮವಹಿಸಿಲ್ಲ. ಜಿಲ್ಲಾಡಳಿತವು ಶೋಭಾಯಾತ್ರೆಗೆ ಧ್ವನಿ ವರ್ಧಕ (ಡಿಜೆ) ಹೆಚ್ಚು ಬಳಕೆಗೆ ಅವಕಾಶ ನೀಡಿದ್ದರಿಂದ ಶಬ್ಧಮಾಲಿನ್ಯವಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಾಕೆ ಕ್ರಮ ವಹಿಸಿಲ್ಲ? ನೀವು ಆಡಳಿತ ಪಕ್ಷದ ಕೈಗೊಂಬೆಗಳಂತೆ ಕೆಲಸ ಮಾಡುತ್ತೀರಾ?’ ಎಂದು ಪ್ರಶ್ನಿಸಿದರು.

‘ಆಚರಣೆಯಲ್ಲಿ ಇಲ್ಲದ ಕಾರ್ಯಕ್ರಮಗಳಿಗೆ ಈ ಬಾರಿ ದತ್ತ ಜಯಂತಿಯಲ್ಲಿ ಅನುಮತಿ ನೀಡಲಾಗಿದೆ. ಜಿಲ್ಲಾಡಳಿತ ಜವಾಬ್ದಾರಿ ಮರೆತಿದೆ. ಕಾನೂನು ಗಾಳಿಗೆ ತೂರಿದರೂ ಕ್ರಮ ವಹಿಸಿಲ್ಲ. ಕೋರ್ಟ್‌ ಆದೇಶ ಉಲ್ಲಂಘನೆಯಾಗಿದ್ದರೆ ಪರಿಶೀಲಿಸಿ ಸಂಬಂಧಪಟ್ಟವರನ್ನು ಅಮಾನತುಗೊಳಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

‘ದತ್ತ ಜಯಂತಿ ಹಾಗೂ ಉರುಸ್‌ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿವೆ. ವಿವಾದವನ್ನು ಮತ ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಂಡಿವೆ. ಸಮಸ್ಯೆ ಪರಿಹರಿಸಲು ಕ್ರಮ ವಹಿಸಿಲ್ಲ. ಜಾತಿ, ಧರ್ಮ, ದೇವರ ಹೆಸರಿನಲ್ಲಿ ರಾಜಕೀಯ ಆಟ ನಡೆಯುತ್ತಿದೆ’ ಎಂದು ಆಪಾದಿಸಿದರು. ಜೆಡಿಎಸ್‌ನ ಪಂಚರತ್ನ ಯೋಜನೆ ಎರಡನೇ ಹಂತದ ಕಾರ್ಯಕ್ರಮ ಇದೇ 28ರಂದು ಮುಗಿಯಲಿದೆ. ಆ ನಂತರ 119 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತದೆ ಎಂದು ಉತ್ತರಿಸಿದರು.

ಕುಮಾರಗೌಡ, ಹೊಲದಗದ್ದೆ ಗಿರೀಶ್‌, ತಿಮ್ಮಶೆಟ್ಟಿ, ಸಿ.ಕೆ.ಮೂರ್ತಿ, ದಿನೇಶ್‌, ಚಿದಾನಂದ ಇದ್ದರು.

Tell the people about the court order

About Author

Leave a Reply

Your email address will not be published. Required fields are marked *

You may have missed