September 19, 2024

Chief minister drama: 780ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ

0

ಚಿಕ್ಕಮಗಳೂರು: ಇದುವರೆಗೂ 780ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಮತ್ತೊಮ್ಮೆ ಪರದೆ ಮೇಲೆ ಮನೋಜ್ಞವಾಗಿ ಮೂಡಿಬಂದು ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಯಾಯಿತು.

ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಟಿ.ಎಸ್.ಲೋಹಿತಾಶ್ವ ನೆನಪಿನಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ನಾಟಕ ಪ್ರದರ್ಶನ ರಾಜಕೀಯ ವಿದ್ಯಮಾನಗಳನ್ನು ತೆರೆದಿಟ್ಟು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.

ರಾಜಕೀಯ ಚದುರಂಗದಾಟದಲ್ಲಿ ಮುಖ್ಯಮಂತ್ರಿ ಹುದ್ದೆಗಿಟ್ಟಿಸಿಕೊಳ್ಳಲು ಏನೆಲ್ಲಾ ಕಸರತ್ತುಮಾಡಬೇಕು ಎಂಬು ದನ್ನು ತೆರೆದಿಟ್ಟ ಇಡೀ ನಾಟಕದಲ್ಲಿ ಮುಖ್ಯಭೂಮಿಕೆಯಲ್ಲಿ ಮುಖ್ಯಮಂತ್ರಿ ಪಾತ್ರಧಾರಿಯಾಗಿ ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ನಟಿಸಿದರು. ಅವರ ನಿರರ್ಗಳ ಸಂಭಾಷಣೆ, ಚುಟುಕು ಹಾಸ್ಯ, ಗಂಭೀರ್ಯ, ವಾಕ್ಚಾ ತುರ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ನಾಟಕದ ನಿರ್ದೇಶಕ ರಾಜಾರಾಂ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ವಿಶೇಷ ವಾದ ನಾಟಕ. ದೇಶ ವಿದೇಶದಲ್ಲೂ ಪ್ರದರ್ಶನ ಕಂಡಿದೆ. ಎಲ್ಲಿ ಹೋದರೂ ಕನ್ನಡಿಗರ ಪ್ರೀತಿಯ ಬಾಂಧ್ಯವ್ಯ ನಮಗೆ ದೊರೆತಿದೆ. ಜಿಲ್ಲೆಯಲ್ಲಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜನೆ ಮಾಡುವ ಉತ್ಸುಕತೆ ಕಸಾಪ ಅಧ್ಯಕ್ಷರಿಗಿದ್ದಂತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ನಾಟಕಕಾರ ಷೇಕ್ಸ್‌ಪಿಯರ್ ಹೇಳಿರುವಂತೆ ಈ ಪ್ರಪಂಚವೇ ಒಂದು ನಾಟಕ ರಂಗ. ನಾವೆಲ್ಲಾ ಪಾತ್ರಧಾರಿಗಳು ಎಂದರು. ಸಾಹಿತ್ಯ ಪ್ರಕಾರಗಳಲ್ಲಿ ನಾಟಕವೂ ಒಂದು. ಮುಖ್ಯಮಂತ್ರಿ ನಾಟಕ ೭೦೦ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಅದರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು. ಸುಗಮ ಸಂಗೀತಗಂಗಾ ಅಧ್ಯಕ್ಷ ಡಾ|ಜೆ.ಪಿ.ಕೃಷ್ಣೇಗೌಡ ಮಾತನಾಡಿದರು. ಕಸಾಪ ಅಧ್ಯಕ್ಷ ಸೂರಿ ಶ್ರೀನಿ ವಾಸ್, ವಕೀಲರಾದ ಎಸ್.ಎಸ್.ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.

Chief minister drama

About Author

Leave a Reply

Your email address will not be published. Required fields are marked *

You may have missed