September 19, 2024

Protest by Maratha Parishad: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ಪ್ರತಿಭಟನೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಕರ್ನಾಟಕ ಕ್ಷತ್ರಿಯ ಮರಾಠ ಸಮುದಾಯವನ್ನು ಪ್ರ.ವರ್ಗ ೩(ಬಿ)ಯಿಂದ ಪ್ರ.ವರ್ಗ ೨(ಎ)ಗೆ ಸೇರ್ಪಡೆಗಳಿಸುವಂತೆ ನಗರದ ಆಜಾದ್ ಪಾರ್ಕಿನಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀನಿವಾಸರಾವ್ ಮದನೆ ಮನವಿ ನೀಡಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸುಮಾರು ೪೦ ಲಕ್ಷಕ್ಕು ಹೆಚ್ಚು ಮರಾಠ ಜನಾಂಗವಿದ್ದು, ನಾವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ ಎಂದರು.

ಮರಾಠ ಜನಾಂಗವು ಹಿಂದಿನಿಂದಲು ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿರುತ್ತಾರೆ, ನಮ್ಮಲ್ಲಿ ೩೩ ಪಂಗಡಗಳಿದ್ದು, ಇದರ ಪೈಕಿ ೨೨ ಪಂಗಡಗಳನ್ನು ಈಗಾಗಲೇ ೨ಎ.ಗೆ ಸೇರ್ಪಡಿಸಲಾಗಿದೆ, ಇದರಲ್ಲಿ ನಮ್ಮ ಕ್ಷತ್ರಿಯ ಮರಾಠ ಜನಾಂಗವನ್ನು ಸೇರಿಸದೆ ಬಿಟ್ಟು ಹೋಗಿರುತ್ತದೆ, ೨೨ ಪಂಗಡಗಳನ್ನು ಸೇರಿಸುವ ಸಂದರ್ಭದಲ್ಲಿ ಕ್ಷತ್ರಿಯ ಮರಾಠ ಸಮಾಜವನ್ನು ಸೇರಿಸದೆ ಇರುವುದು, ಬಹಳ ಶೋಚನಿಯ ವಿಷಯ ಇದಕ್ಕೆ ಆಗಿಂದ್ದಾಗೆ ಬದಲಾದ ಸರ್ಕಾರಗಳಿಂದ ನಿರ್ಧಾರವು ವಿಳಂಬವಾಗಿದೆ ಎಂದರು.

ಕ್ಷತ್ರಿಯ ಮರಾಠ ಜನಾಂಗದ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಅರಿತುಕೊಂಡು, ನಮ್ಮ ಸಮಾಜವನ್ನು ೨ಎ.ಗೆ ಸೇರ್ಪಡಿಸಿಕೊಳ್ಳುವಂತೆ ರಾಜ್ಯದಾದ್ಯಂತ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಗಿದೆ, ಇಂದು ಚಿಕ್ಕಮಗಳೂರಿನಲ್ಲಿ ನಡೆಸಿ ಮನವಿ ಸಲ್ಲಿಸಲಾಗಿದೆ, ತಕ್ಷಣವೇ ಸರ್ಕಾರ ನಮ್ಮ ಸಮಸ್ಯೆಯನ್ನು ಬಗೆಹರಿಸಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುವಂತೆ ತಿಳಿಸಿದರು.

ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, ನಮ್ಮೆಲ್ಲರ ಅಭಿವೃದ್ಧಿಗೆ ೧೦೦ ಕೋಟಿ ಅನುದಾನ ನೀಡುವುದರ ಜತೆಗೆ, ೩ಬಿ ಯಿಂದ ೨ಬಿ ಗೆ ಕ್ಷತ್ರಿಯ ಮರಾಠ ಸಮುದಯವನ್ನು ಸೇರ್ಪಡೆಗೊಳಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಲ್.ಎಸ್.ನಾಗೇಶ್ವರ ರಾವ್ ಜಾದವ್, ರಾಜ್ಯ ಕಾರ್ಯದರ್ಶಿ ಹೆಚ್.ವಿಶ್ವನಾಥ್ ಲಾಡ್, ಸಹ ಕಾರ್ಯದರ್ಶಿ ತಾನೋಜಿರಾವ್ ಚೌವಾನ್, ಅಜ್ಜಂಪುರ ತಾಲ್ಲೂಕು ಅಧ್ಯಕ್ಷ ಗಿರೀಶ್ ಚೌವಾನ್, ಕಡೂರು ಅಧ್ಯಕ್ಷ ರಾಮಚಂದ್ರ ರಾವ್, ಬೀರೂರಿನ ಲೋಹಿತ್‌ರಾವ್ ಪವಾರ್, ಲೋಕೇಶ್‌ರಾವ್, ವೀಣಾಜಾದವ್, ಪಾರ್ವತಿಬಾಯಿ, ವೀಣಾಬಾಯಿ, ಸಿದ್ಧೋಜಿರಾವ್ ಮತ್ತಿತರರು ಉಪಸ್ಥಿತರಿದ್ದರು.

Protest by Maratha Parishad

About Author

Leave a Reply

Your email address will not be published. Required fields are marked *

You may have missed