September 19, 2024

Victory in sports is possible only through hard work: ಕ್ರೀಡೆಯಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಗೆಲುವು ಸಾದಿಸಲು ಸಾದ್ಯ – ಎಂ.ಕೆ.ಪ್ರಾಣೇಶ್

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಕ್ರೀಡೆಯಲ್ಲಿ ಪ್ರತಿನಿತ್ಯದ ಅಭ್ಯಾಸ ಮತ್ತು ಕಠಿಣ ಪರಿಶ್ರಮಪಟ್ಟಾಗ ಮಾತ್ರ ಗೆಲುವು ಸಾಧಿಸಲು ಸಾದ್ಯವೆಂದು ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್ ತಿಳಿಸಿದರು.

ನಗರದ ಎಐಟಿ ಕಾಲೇಜಿನ ಬಿಜಿಎಸ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಮತ್ತು ಅಮೇಚುರ್ ನೆಟ್‌ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಪುರುಷ ಮತ್ತು ಮಹಿಳೆಯರ ೧೫ನೇ ದಕ್ಷಿಣ ವಲಯದ ರಾಷ್ಟ್ರಮಟ್ಟದ ಹೊನಲುಬೆಳಕು ನೆಟ್‌ಬಾಲ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ ಸರ್ಕಾರ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲಿ ವಿಶೇಷ ಆಸಕ್ತಿವಹಿಸಿ ತಮ್ಮ ಜೀವನದ ಗುರಿ ಮುಟ್ಟಬಹುದು ಎಂದರು.

ನಮ್ಮ ಊರಿನ ಹುಡಗ ಸಾಕ್ಷಾತ್‌ಗೌಡ ರವರಿಗೆ ಕರ್ನಾಟಕ ಅತ್ಯುತ್ತಮ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ಲಭ್ಯವಾಗಿರುವುದು ನಮ್ಮ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತಹ ವಿಷಯ, ಅವರ ಪ್ರತಿಭೆಗೆ ಪ್ರತಿಫಲ ದೋರೆತ್ತಿದೆ, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಅರ್ಜುನ ಪ್ರಶಸ್ತಿ ಸಿಗಲೆಂದು ಆಶಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ಮಾತನಾಡಿ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಹಲವು ಅವಕಾಶಗಳು ದೋರೆಯುತ್ತವೆ, ಅವುಗಳನ್ನು ಉತ್ತಮರೀತಿಯಲ್ಲಿ ಬಳಸಿಕೊಳ್ಳಬೇಕು, ಕ್ರೀಡಾಪಟುಗಳು ನಿರಂತರ ಅಭ್ಯಾಸದ ಜತೆಗೆ ತಮ್ಮ ಜೀವನದ ಗುರಿಯನ್ನು ತಲುಪಬೇಕು, ಕ್ರೀಡಾಪಟುಗಳು ಯಾವುದೇ ದುಷ್ಚಚಗಳಿಗೆ ಬಲಿಯಾಗಬಾರದೆಂದು ತಿಳಿಸಿದರು.

ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ದೀಪಕ್‌ದೊಡ್ಡಯ್ಯ ಮಾತನಾಡಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್ ಅವರ ಬಳಿ ಮನವಿ ಮಾಡಿದರು, ಜಿಲ್ಲೆಯಲ್ಲಿ ಮೊದಲಬಾರಿಗೆ ರಾಷ್ಟ್ರಮಟ್ಟದ ಕ್ರೀಡೆ ಆಯೋಜಿಸಲಾಗಿದೆ, ಕ್ರೀಡಾಪಟುಗಳು ಕ್ರೀಡೆಯನ್ನು ಬದುಕಿನ ಮುಖ್ಯಭಾಗವನ್ನಾಗಿಸಿಕೊಳ್ಳಬೇಕು, ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಪಾಲ್ಗೋಳ್ಳುವುದು ಮುಖ್ಯ, ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ್, ಪಾಂಡಿಚೆರಿ, ತೆಲಂಗಾಣದಿಂದ ಆಗಮಿಸಿದ ಎಲ್ಲಾ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಬೇಕೆಂದು ತಿಳಿಸಿದರು.

ರಾಷ್ಟ್ರಮಟ್ಟದ ಹೊನಲು ಬೆಳಕಿನ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಪುರುಷ ವಿಭಾಗದಲ್ಲಿ ಪ್ರಥಮ ಬಹುಮಾನ ಕರ್ನಾಟಕ, ದ್ವಿತೀಯ ಬಹುಮಾನ ಕೇರಳ, ತೃತೀಯ ಬಹುಮಾನವನ್ನು ತಮಿಳುನಾಡು ಮತ್ತು ತೆಲಂಗಾಣ ಪಡೆದುಕೊಂಡಿದೆ, ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಕೇರಳ, ದ್ವಿತೀಯ ಬಹುಮಾನ ಕರ್ನಾಟಕ, ತೃತೀಯ ಬಹುಮಾನ ಪಾಂಡಿಚೆರಿ ಮತ್ತು ಆಂದ್ರಪ್ರದೇಶ ಪಡೆದುಕೊಂಡಿದೆ, ಬೆಸ್ಟ್ ಶೂಟರ್ ಬಹುಮಾನವನ್ನು ಕರ್ನಾಟಕದ ನಿತಿನ್ ಪೂಜಾರಿ ಮತ್ತು ನಂದಿನ ಪಡೆದರೆ, ಬೆಸ್ಟ್ ಆಟಗಾರನಾಗಿ ಸಾಕ್ಷಾತ್‌ಗೌಡ ಪಡೆದುಕೊಂಡಿದ್ದಾರೆ,

.ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಸಿ.ಆನಂದ್, ನಗರಸಭೆ ಮಾಜಿ ಅಧ್ಯಕ್ಷರಾದ ಹೆಚ್.ಡಿ.ತಮ್ಮಯ್ಯ, ಕವಿತಾಶೇಖರ್, ಏಕಲವ್ಯ ಪ್ರಶಸ್ತಿ ವಿಜೇತ ಸಾಕ್ಷಾತ್‌ಗೌಡ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಿ.ಎಲ್.ಮಧು, ಉಪಾಧ್ಯಕ್ಷ ಡಾ. ಸಂತೋಷ್ ಅರಸ್, ಕಾರ್ಯದರ್ಶಿ ಹೇಮೋಧರ, ಸಹಕಾರ್ಯದರ್ಶಿ ಶಿಲ್ಪಪ್ರತಾಪ್, ಪರಮೇಶ್ವರ ರಾಜ್ ಅರಸ್, ಖಜಾಂಚಿ ಸಾಕ್ಷಾತ್ ಗೌಡ, ಸದಸ್ಯರಾದ ಪ್ರತಾಪ್ ಸಿದ್ದು, ಸುನೀಲ್ ಮಾಟಿಧನ್ ಸ್ಟೀವನ್, ಬಿಂದುಸಾರ, ಸುದೀನ್, ರಕ್ಷಾ ಫೌಂಡೇಶನ್ ಸಂಸ್ಥಾಪಕಿ ಸುಷ್ಮಾ.ಜಿ.ಎಮ್, ಮಾನಸ.ಎಲ್.ಜಿ, ಕರ್ನಾಟಕ ವಿಕ್ರಮಾದಿತ್ಯರೆಡ್ಡಿ ತೆಲಂಗಾಣ್, ಶಿವರಾಮ್ ಆಂದ್ರಪ್ರದೇಶ್, ಎ.ಸಿ.ವಿಶ್ವನಾಥ್ ಕರ್ನಾಟಕ, ಗಿರೀಶ್‌ಗೌಡ, ರಾಕೇಶ್ ಪಾಟೀಲ್ ಬೆಳಗಾವಿ ಆರ್ಮಿ, ಅಧ್ಯಕ್ಷ ಮತ್ತಿತರರು ಉಪಸ್ಥಿತರಿದ್ದರು,

Victory in sports is possible only through hard work

About Author

Leave a Reply

Your email address will not be published. Required fields are marked *

You may have missed