September 19, 2024

Appeal from Jain Women’s Society: ಶೃತವಾಣಿ ದಿಗಂಬರ ಜೈನ್ ಮಹಿಳಾ ಸಮಾಜದಿಂದ ಮನವಿ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಝಾರ್ಖಾಂಡ್ ರಾಜ್ಯದಲ್ಲಿರುವ ಜೈನರ ತೀರ್ಥ ಕ್ಷೇತ್ರ, ತೀರ್ಥ ರಾಜ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಕ್ಷೇತ್ರವನ್ನಾಗಿ ಘೋಷಿಸದೆ ಜೈನರಿಗಾಗಿ ಉಳಿಸಿಕೊಡುವಂತೆ ಶೃತವಾಣಿ ದಿಗಂಬರ ಜೈನ್ ಮಹಿಳಾ ಸಮಾಜದ ವತಿಯಿಂದ ಅಪಾರ ಜಿಲ್ಲಾಧಿಕಾರಿ ರೂಪ ಅವರಿಗೆ ಮನವಿ ನೀಡಿದರು.

ಶೃತವಾಣಿ ದಿಗಂಬರ ಜೈನ್ ಮಹಿಳಾ ಸಮಾಜದ ಅಧ್ಯಕ್ಷೆ ಜಿ.ಎನ್.ಚರಿತ್ರಜಿನೇಂದ್ರ ಮನವಿ ನೀಡಿ ಮಾತನಾಡಿ ಝಾರ್ಖಾಂಡ್ ರಾಜ್ಯದಲ್ಲಿರುವ ಜೈನರ ಸಿದ್ದ ಕ್ಷೇತ್ರ, ಅತ್ಯಂತ ಪವಿತ್ರ ಹಾಗೂ ವಂದನೀಯ ಸ್ಥಳವಾಗಿದ್ದು, ತೀರ್ಥಂಕರರು ಮೋಕ್ಷ ಹೊಂದಿರತಕ್ಕಂತಹ ಪುಣ್ಯವಾಗಿರುವ ಸಮ್ಮೇದಗಿರಿ ಸಿದ್ದಕ್ಷೇತ್ರವಾಗಿದೆ, ಇಂತಹ ಜೈನರ ಪವಿತ್ರ ಕ್ಷೇತ್ರದಲ್ಲಿ ಝಾರ್ಖಾಂಡ್ ರಾಜ್ಯ ಸರ್ಕಾರದ ಪ್ರಸ್ತಾವನೆ ಗೆ ಅನುಗುಣವಾಗಿ ಕೇಂದ್ರ ಸರ್ಕಾರದ ವನ ಮಂತ್ರಾಲಯವು ಜೈನ ಜಗತ್ತಿನ ಪರಮ ಪಾವನ ಪುಣ್ಯ ಭೂಮಿ ತೀರ್ಥ ರಾಜ ಸಮ್ಮೇದಗಿರಿಯನ್ನು ಪರ್ಯಟನ ಸ್ಥಳವಾಗಿ ಘೋಷಿಸಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ವಿಫುಲ್‌ಕುಮಾರ್ ಜೈನ್ ಮಾತನಾಡಿ ಹಿಂದುಗಳಿಗೆ ಕಾಶಿ, ಮುಸ್ಲೀಮರಿಗೆ ಮಕ್ಕಾಮದೀನ ಯಾವರೀತಿ ಪುಣ್ಯ ಕ್ಷೇತ್ರಗಳೊ, ಅದೇರೀತಿ ಜೈನರಿಗೆ ತೀರ್ಥರಾಜ ಸಮ್ಮೇದ ಶಿಖರ್ಜಿ ಪುಣ್ಯ ಕ್ಷೇತ್ರವಾಗಿದೆ, ಇದನ್ನು ಪ್ರವಾಸೋದ್ಯಮ ಇಲಾಖೆಯವರು ಅಭಿವೃದ್ಧಿ ಪಡಿಸಲು ಮುಂದಾಗಿರುವುದು ತಡೆಹಿಡಿಯಬೇಕು ಈ ಘೋಷಣೆಯಿಂದ ಜೈನ ಧಮಕ್ಕೆ ಅನ್ಯಾಯವಾಗಲಿದ್ದು, ಸಮ್ಮೇದಗಿರಿ ಕ್ಷೇತ್ರವು ಪ್ರವಾಸಿ ಸ್ಥಳವಾಗಿ ಪರಿಗಣಿಸಲ್ಪಟ್ಟಲ್ಲಿ, ಆ ಸ್ಥಳದಲ್ಲಿ ಹೋಟೆಲ್‌ಗಳು, ಅತಿಥಿಗೃಹಗಳು, ಮೋಜಿನ ಕೇಂದ್ರಗಳು, ರೇಸಾರ್ಟ್, ಜೂಜುಕೇಂದ್ರ, ಮೊಟ್ಟೆ ಮಾಂಸದ ಜತೆಗೆ ಹೆಂಡದ ಅಂಗಡಿಗಳನ್ನು ತೆರೆಯಲಾಗುವುದು, ಇದರಿಂದ ಹಲವು ಅನಾವುತಗಳಿಗೆ ಕಾರಣವಾಗುತ್ತದೆ, ಆದ್ದರಿಂದ ಜೈನರ ಪವಿತ್ರ ಭೂಮಿಯಾಗಿರುವ ಸಮ್ಮೇದ ಶಿಖರ್ಜಿಯನ್ನು ಜೈನರಿಗಾಗಿ ಉಳಿಸಿಕೊಡುವಂತೆ ಝಾರ್ಖಾಂಡ್ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

Appeal from Jain Women’s Society

 

About Author

Leave a Reply

Your email address will not be published. Required fields are marked *

You may have missed