September 19, 2024

Children are the future of the country: ದೇಶಕಟ್ಟಲು ಬೇಕಾದ ಅತ್ಯಂತ ದೊಡ್ಡ ಶಕ್ತಿ ಎಂದರೇ ಅದು ಯುವಶಕ್ತಿ. ಮಕ್ಕಳೇ ದೇಶದ ಭವಿಷ್ಯ- ಜಿ.ಪ್ರಭು

0

ಚಿಕ್ಕಮಗಳೂರು: -ದೇಶಕಟ್ಟಲು ಬೇಕಾದ ಅತ್ಯಂತ ದೊಡ್ಡ ಶಕ್ತಿ ಎಂದರೇ ಅದು ಯುವಶಕ್ತಿ. ಮಕ್ಕಳೇ ದೇಶದ ಭವಿಷ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ಶುಕ್ರವಾರ ತಾಲ್ಲೂಕಿನ ಮೈಲಿಮನೆ ಶಾಲೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಶಿಕ್ಷಣ ಇಲಾಖೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆ ಕಾರ್ಯಕ್ರಮದಲ್ಲಿ ಪಾ ಲ್ಗೊಂಡು ಮಾತನಾಡಿದರು.

ಯಾರು ಈ ದೇಶವನ್ನು ಕಟ್ಟುವ, ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅವರು ಎಲ್ಲಾ ವರ್ಗಗಳಿಗೆ ನೀಡು ವ ಮಾನ್ಯತೆಯನ್ನು ತಪ್ಪಬಾರದು ಅನ್ನುವ ಉದ್ದೇಶದಿಂದ ದೇಶಕಟ್ಟಲು ಬೇಕಾದ ಶಕ್ತಿ ಅದು ಯುವಶಕ್ತಿ. ಯುವಶಕ್ತಿಯನ್ನು ಪ್ರತಿನಿಧಿಸುವ ರಾಯಬಾರಿಗಳು ನಮ್ಮ ಮಕ್ಕಳು ಎಂದರು.

ಮಕ್ಕಳಿಗೆ ಅಗತ್ಯವಾಗಿ ಬೇಕಾಗುವ ಸೌಲಭ್ಯಗಳ ಬಗ್ಗೆ ಆಡಳಿತ ನಡೆಸುವರಿಗೆ ಅರಿವು ಆಗಬೇಕು. ಅವರು ಗ್ರಹಿಸಬೇಕು. ಮಕ್ಕಳು ಆಡಳಿತದ ಮೂಲಕೇಂದ್ರವಾಗಬೇಕು. ಅವರ ಸುತ್ತಲೇ ಅಭಿವೃದ್ದಿಯಾಗಬೇಕು ಎನ್ನುವ ಉದ್ದೇಶದಿಂದ ಮಕ್ಕಳ ಗ್ರಾಮಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ದುಡಿಯುವ ಕೈಗಳಿಂದ, ವಿದ್ಯಾವಂತರಿಂದ ಈ ದೇಶ, ಗ್ರಾಮ, ಮನೆ ಅಭಿವೃದ್ದಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದೇಶದ ಭವಿಷ್ಯದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಏನುಬೇಕು. ಅವರ ಬೇಕು ಬೇಡಾಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ನೀಡಿ ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯು ತ್ತಿವೆ ಎಂದು ಹೇಳಿದರು.

ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಮುಕ್ತ ಮನಸ್ಸಿನಿಂದ ಪಾಲ್ಗೊಂಡು ಶಾಲಾ ಕೊಠಡಿ, ಶಾಲಾ ಆವರಣ, ಮನೆ, ಗ್ರಾಮ, ಸ್ವಚ್ಛತೆ ಸೇರಿದಂತೆ ಎಲ್ಲಾ ರಂಗಗಳಲ್ಲಿ ಮಕ್ಕಳಿಗೆ ಏನೇನು ಆಗಬೇಕು. ಯಾವ ಯೋಜನೆ ತರಬೇಕು ಎಂಬ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಚ್ಚಿಕೊಳ್ಳಬೇಕು ಎಂದ ಅವರು, ಮಕ್ಕಳು ಅಂಜಿಕೆ, ಅಳಕು ಇಲ್ಲದೆ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಂತೆ ಸಲಹೆ ನೀಡಿದರು.

ಮಕ್ಕಳ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಶಾಲೆಗೆ ಸಂಬಂಧಿಸಿದ ಸಮಸ್ಯೆಗಳು, ಗ್ರಾಮದಲ್ಲಿನ ಸಮಸ್ಯೆಗಳು, ಕುಡಿಯುವ ನೀರು, ಆಟದ ಮೈದಾನ, ಸ್ವಚ್ಛತೆ, ಮನೆಯ ವಾತವರಣ ಹೀಗೆ ಅನೇಕ ವಿಷಯಗಳ ಬಗ್ಗೆ ಗಂಭೀರವಾಗಿ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳ ಗಮನ ಸೆಳೆದರೂ. ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಪ್ರತಿನಿಧಿ ಕುಮಾರ್ ಆದಿತ್ಯ ವಹಿಸಿದ್ದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ರಂಗನಾಥ್, ತಾಲ್ಲೂಕು ಪಂಚಾಯತ್ ಮುಖ್ಯಕಾರ್ಯನಿರ್ವ ಹಣಾಧಿಕಾರಿ ತಾರಾನಾಥ್, ದಾನಿ ರಘುನಾಥ್‌ಗೌಡ, ಸಿಡಿಪಿಓ ಚರಣ್, ಸಿಎಂಸಿಎ ಸಹಾಯಕ ನಿರ್ದೇ ಶಕ ಮರುಳಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಹೊನ್ನಮ್ಮ ಮಂಜುನಾಥ್, ಉಪಾಧ್ಯಕ್ಷ ಸುನೀಲ್, ಡಾ| ವಿನಯ್‌ಕುಮಾರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಹೇಮಾವತಿ, ಸದಸ್ಯ ಎಂ.ಸಿ.ಚೇತನ್‌ಗೌಡ, ಮೈಲಿಮನೆ ಪೂರ್ಣೇಶ್, ರಮ್ಯಾ ಪೂರ್ಣೇಶ್, ಜಿ.ಆರ್.ಕಾರ್ತಿಕ್, ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು. ಚಂದ್ರೇಗೌಡ ಸ್ವಾಗತಿಸಿ, ನಿರೂಪಿಸಿದರು.

Children are the future of the country

About Author

Leave a Reply

Your email address will not be published. Required fields are marked *

You may have missed