September 19, 2024

There are authorities to prevent sexual violence against women: ಮಹಿಳೆಯರು ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪ್ರಾಧಿಕಾರಗಳಿವೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ನಡೆಯುವ ಲೈಗಿಂಕ ಕಿರುಕುಗಳು, ಮಾನಸಿಕ ದೌರ್ಜನ್ಯ, ಬ್ಲಾಕ್ ಮೇಲ್ ತಂತ್ರಗಳನ್ನು ತಡೆಗಟ್ಟು ನಿಟ್ಟಿನಲ್ಲಿ ಅನೇಕ ಪ್ರಾಧಿಕಾರಗಳಿವೆ ಅವುಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದೆಬರಬೇಕು ಎಂದು ನಗರಭೆ ಆಯುಕ್ತ ಬಿ.ಸಿ.ಬಸವರಾಜು ಸಲಹೆ ಮಾಡಿದರು.
ನಗರಸಭೆ ವತಿಯಿಂದ ಮಹಿಳೆಯರ ಹಕ್ಕು ರಕ್ಷಣೆ, ಸಮಾನತೆ ಬಗ್ಗೆ ಸ್ತ್ರೀ ಶಕ್ತಿ ಸಂಘದ ಸದಸ್ಯರು, ನಗರಸಭೆ ಮಹಿಳಾ ಸದಸ್ಯರು, ಇನ್ನಿತರೆ ಮಹಿಳೆಯರಿಗೆ ನಗರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶ ಹಾಗೂ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನ ಸಮಾಜ ಎನ್ನುವ ದೂರುಗಳಿರುವ ಸಂದರ್ಭದಲ್ಲಿ ಮಹಿಳೆಯರು ಪುರುಷರಿಗೆ ಯಾವುದರಲ್ಲೂ ಕಡಿಮೆ ಇಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ಹಲವಾರು ಸೌಲಭ್ಯಗಳನ್ನು ಬಳಸಿಕೊಂಡು ಕುಟುಂಬ ಉನ್ನತಿ ಸಾಧಿಸಬೇಕು. ಈ ಸಂಬಂಧ ಕಾನೂನಿನ ಅರಿವನ್ನೂ ಮಹಿಳೆಯರು ಪಡೆದಿರಬೇಕು ಎಂದರು.

ಸಾಮಾಜಿಕ ಜಾಲತಾಣಗಳು ಸಹ ಸಾಕಷ್ಟು ಮುಂಚೂಣಿಯಲ್ಲಿವೆ. ಯಾವುದೇ ಮುಲಾಜಿಲ್ಲದೆತಮ್ಮ ರಕ್ಷಣೆಯನ್ನು ತಾವು ಮಾಡಿಕೊಳ್ಳಬೇಕು. ತಮ್ಮ ಕುಟುಂಬವನ್ನೂ ರಕ್ಷಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಗರ ಆಶ್ರಯ ಸಮತಿ ಅಧ್ಯಕ್ಷ ನಾರಾಯಣ ಸ್ವಾಮಿ ಮಾತನಾಡಿ, ಲಿಂಗ ತಾರತಮ್ಯದ ಬಗ್ಗೆ ಸರ್ಕಾರಗಳು ಈಗಾಗಲೇ ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಹಿಳೆಯರಿಗೆ ಶೇ.೫೦ ರಷ್ಟು ಮೀಸಲಾತಿ ನಿಗಧಿಪಡಿಸಲು ಮುಂದಾಗಿದೆ. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯನ್ನೂ ಮಹಿಳೆಯೇ ವಹಿಸಿರುವುದು ಹೆಮ್ಮೆಯ ವಿಚಾರ. ಮಹಿಳೆಯರು ಎಲ್ಲಾ ವಿಚಾರದಲ್ಲೂ ಸಮಾನರು ಎನ್ನುವುದನ್ನು ತಿಳಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಗರಸಭೆ ಸಮುದಾಯ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ದೈಹಿಕವಾಗಿ ನೀಡುವ ಹಿಂಸೆ ಮಾತ್ರ ಮಹಿಳಾ ದೌರ್ಜನ್ಯ ಎನಿಸುವುದಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಮಾನಸಿಕ ಹಿಂಸೆ ಆಗುತ್ತಿದೆ. ಇದೆಲ್ಲವನ್ನೂ ಹೋಗಲಾಡಿಸುವ ಸಲುವಾಗಿ ಕೇಂದ್ರ ಸರ್ಕಾರ ಬಹಳಷ್ಟು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ನಗರ ಪ್ರದೇಶದಲ್ಲಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲೂ ಸಮುದಾಯದಲ್ಲಿ ನಡೆಯುವ ತಾರತಮ್ಯ ಹಾಗೂ ದೌರ್ಜನ್ಯಗಳನ್ನು ನಿಯಂತ್ರಿಸುವ ಅಗತ್ಯವಿದೆ. ಈ ಕಾರಣಕ್ಕೆ ಇಂತಹ 1ಜಾಥಾ, ಸಮಾವೇಶಗಳಲ್ಲಿ ಭಾಗವಹಿಸಿ ಅರಿವು ಮೂಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಸ್ತ್ರೀ ಶಕ್ತಿ ಸಂಘಗಳು, ಮಹಿಳಾ ಒಕ್ಕೂಟಗಳು, ಉದ್ಯೋಗಸ್ಥ ಮಹಿಳೆಯರನ್ನೊಳಗೊಂಡ ನೂರಾರು ಮಹಿಳೆಯರು ಕ್ಯಾಂಡಲ್ ಹಿಡಿದು, ಮಹಿಳಾ ಹಕ್ಕುಗಳ ರಕ್ಷಣೆ ಕುರಿತಂತೆ ಘೊಷಣೆಗಳನ್ನು ಕೂಗುತ್ತಾ ನಗರದ ಹನುಮಂತಪ್ಪ ವೃತ್ತದಿಂದ ನಗರಸಭೆ ವರೆಗೆ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ, ಸದಸ್ಯರಾದ ರೂಪಕುಮಾರ್, ಅನುಮಧುಕರ್, ಸುಜಾತಶಿವಕುಮಾರ್, ಉಪಸ್ಥಿತರಿದ್ದರು.

There are authorities to prevent sexual violence against women

About Author

Leave a Reply

Your email address will not be published. Required fields are marked *

You may have missed