September 19, 2024

Public should contribute to cleanliness: ಸಾರ್ವಜನಿಕರು ಸ್ವಚ್ಚತೆಗೆ ಸಹಕರಿಸಬೇಕು – ವರಸಿದ್ಧಿ ವೇಣುಗೋಪಾಲ್

0

ಚಿಕ್ಕಮಗಳೂರುಎಕ್ಸ್‌ಪ್ರೆಸ್; ನಗರದ ಸ್ವಚ್ಚತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ನಗರದ ೬೦ ಅಡಿ ರಸ್ತೆಯಲ್ಲಿ ನಗರಸಭೆಯ ಆಟೋ ಟ್ರಪ್ಪರ್‌ಗಳನ್ನು ನಿಲ್ಲಿಸುವ ನಿಲ್ದಾಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ಈ ಹಿಂದೆ ಸಂತೆ ಮಾರ್ಕೆಟ್, ಬಸವನಹಳ್ಳಿ ಕೆರೆ ಏರಿ ಇನ್ನಿತರ ಕಡೆಗಳಲ್ಲಿ ನಗರಸಭೆಯ ಆಟೋ ಟ್ರಿಪ್ಪರ್‌ಗಳನ್ನು ನಿಲ್ಲಿಸುತ್ತಿದ್ದು, ಕೊನೆಗೆ ಸುಮಾರು ೪೦ ವರ್ಷಗಳಿಂದ ಪಾಳು ಬಿದ್ದಿದ್ದ ಹಳ್ಳದ ಕರಾಬು ೩ ಸಾವಿರ ಸರ್ಕಾರಿ ಜಾಗವನ್ನು ಗುರುತಿಸಿ, ಸ್ಥಳಕ್ಕೆ ಎಸಿ, ತಹಸೀಲ್ದಾರ್ ಜತೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಇಂದು ಶಂಕುಸ್ಥಾಪನೆ ನೆರೆವೇರಿಸಲಾಗಿದೆ ಎಂದರು.

ಈಗಾಗಲೇ ಬೀದಿದೀಪ ಸಚಿವ ಸಂಪುಟದಲ್ಲಿ ಅನುಮೊದನೆ ದೋರೆತಿದ್ದು, ಜನವರಿ ತಿಂಗಳಿನಲ್ಲಿ ನಡೆಯುವ ಚಿಕ್ಕಮಗಳೂರು ಹಬ್ಬದ ಒಳಗಾಗಿ ಕೆಲವು ಮುಖ್ಯ ರಸ್ತೆಗಳಲ್ಲಿ ಎಲ್‌ಇಡಿ ಬಲ್ಪ್ ಅಳವಡಿಸಲಾಗುವುದು, ಹಬ್ಬ ಮುಗಿದ ತಕ್ಷಣ ನಗರದಲ್ಲಿ ಎಲ್‌ಇಡಿ ಬಲ್ಪ್ ಅಳವಡಿಕೆ ಮುಂದುವರೆದ ಕಾಮಗಾರಿ ಪ್ರಾರಂಭಿಸುವುದರ ಜತೆಗೆ ಕಣಿವೆ ರುದ್ರೇಶ್ವರ ದೇವಸ್ಥಾನದಿಂದ ಕತ್ರಿಮಾರಮ್ಮ ದೇವಸ್ಥಾನದ ವರೆಗೂ ಡಿವೈಡರ್ ಮದ್ಯಭಾಗದಲ್ಲಿ ೧ ಕೋಟಿ ೪೭ ಲಕ್ಷ ರೂ ವೆಚ್ಚದಲ್ಲಿ ಅಲಂಕೃತ ಎಲ್‌ಇಡಿ ಬಲ್ಪ್‌ಗಳ ಅಳವಡಿಕೆಯ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕೆಲವೇ ದಿನಗಳಲ್ಲಿ ಪ್ರಾಂರಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಮೃತೇಶ್‌ಚೆನ್ನಕೇಶವ್, ಭವ್ಯಮಂಜುನಾಥ್, ರಾಬರ್ಟ್, ಆಯುಕ್ತ ಬಸವರಾಜ್, ಇಂಜಿನಿಯರ್ ಚಂದನ್, ರಶ್ಮಿ, ಸ್ಥಳಿಯರಾದ ನವೀನ್ ಇತರರು ಉಪಸ್ಥಿತರಿದ್ದರು.

Public should contribute to cleanliness

About Author

Leave a Reply

Your email address will not be published. Required fields are marked *

You may have missed