September 19, 2024

Srikshetra Dharmasthala Village Development Yojana Trust: ಮಹಿಳೆಯರು ಕುಟುಂಬದ ಜವಬ್ದಾರಿ ನಡುವೆ ಒಂದು ಸಂಘಕ್ಕೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ- ಪಲ್ಲವಿ ಸಿ.ಟಿ. ರವಿ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಸಮಾಜದಲ್ಲಿರುವುದು ಎರಡೆ ಜಾತಿ ಒಂದು ಹೆಣ್ಣು ಮತ್ತೊಂದು ಗಂಡು. ಆದರೆ, ನಾವು ಬೇರೆ ಬೇರೆಯಾಗಿ ವಿಂಗಡಿಸಿದ್ದು, ಅದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ ಎಂದು ಪಲ್ಲವಿ ಸಿ.ಟಿ. ರವಿ ಅಭಿಪ್ರಾಯಿಸಿದರು.

ಬುಧವಾರ ನಗರದ ಪಾಂಚಜನ್ಯ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಗಂಡು ಸಮಾನವಾಗಿರಬೇಕೆನ್ನುವುದು ಈ ಸೃಷ್ಟಿಯ ನಿಯಮ. ಆದರೆ, ಕೆಲವು ಕಾರಣಗಳಿಂದ ಬದಲಾಗಿದೆ. ಹೆಣ್ಣು ಎನ್ನುವುದೇ ಒಂದು ದೊಡ್ಡ ಶಕ್ತಿಯಾಗಿದ್ದು ಮನಸ್ಸು ಮಾಡಿದರೇ ಯಾವುದು ಅ ಸಾಧ್ಯವಲ್ಲ ಎಂದ ಅವರು ನಾವೆಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು ಎಂದರು.

ಮಹಿಳೆಯರು ಕುಟುಂಬದ ಜವಬ್ದಾರಿ ನಡುವೆ ಒಂದು ಸಂಘಕ್ಕೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು, ಎರಡು ಕೈಗಳು ಸೇರಿದರೇ ಚಪ್ಪಾಳೆ ಎರಡು ಭಾವನೆಗಳು ಸೇರಿದರೇ ಒಂದು ಭಾವನೆ ಯಾಗುತ್ತದೆ. ನಮ್ಮ ಜವಬ್ದಾರಿಯನ್ನು ಅರಿತು ಈ ಸಮಾಜಕ್ಕೆ ಕೊಡುಗೆ ನೀಡಬೇಕು ಹಾಗೂ ಮುಂದಿನ ಪೀಳಿಗೆಗೆ ಒಳ್ಳೇದು ಮಾಡುವ ಅರಿವು ಮೂಡಿಸಿಕೊಂಡಲ್ಲಿ ಸ್ತ್ರೀಶಕ್ತಿಯಾಗಿ ಬೆಳೆಯಬಹುದು ಎಂದು ಹೇಳಿದರು.

ಎಲ್ಲ ಕ್ಷೇತ್ರಗಳಲ್ಲೂ ಏಳು ಬೀಳು ಇದ್ದೇ ಇರುತ್ತದೆ. ಅದನ್ನು ಎದುರಿಸಿ ನಿಲ್ಲಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮಹಿಳೆಯರು ಒಟ್ಟುಗೂಡಬೇಕು ಎಂದು ಕರೆ ನೀಡಿದರು.

ವೈದ್ಯಾಧಿಕಾರಿ ಡಾ| ರಶ್ಮಿ ರಮೇಶ್ ನಿತ್ಯ ಜೀವನದಲ್ಲಿ ಆರೋಗ್ಯದ ಪಾತ್ರ ಕುರಿತು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಅನೇಕ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದ ಅವರು, ಮಹಿಳೆಯಲ್ಲಿ ಧೈರ್ಯ ಸ್ಥೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಮಹಿಳೆಯರು ಆತ್ಮಸ್ಥೈಯವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಮಹಿಳೆಯರು ಯಾವುದೇ ಸಮಸ್ಯೆಗೆ ಒಳಗಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಪ್ರಾದೇಶಿಕ ನಿರ್ದೇಶಕರಾದ ಗೀತಾ ಮಾತನಾಡಿದರು. ಕೆಸರಿಕೆ ಸಿಂಧೂರ ಜ್ಞಾನವಿಕಾಸ ಕೇಂದ್ರದ ಅನಿತಾ ಅಧ್ಯಕ್ಷತೆವಹಿಸಿದ್ದರು. ವಕೀಲೆ ಮಮತಾ, ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಉಪಸ್ಥಿತರಿದ್ದರು.

Srikshetra Dharmasthala Village Development Yojana Trust

 

About Author

Leave a Reply

Your email address will not be published. Required fields are marked *

You may have missed