September 19, 2024

Booth Vijay Abhiyan: ಬೂತ್ ವಿಜಯ ಅಭಿಯಾನದ ಪ್ರಯತ್ನ ಪ್ರಜಾ ತಂತ್ರದ ಬೇರನ್ನೇ ಗಟ್ಟಿಗೊಳಿಸುವ ಕಾರ್ಯ ಆಯನೂರು ಮಂಜುನಾಥ್

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಪೇಜ್ ಪ್ರಮುಖರನ್ನು ಮಾಡಿ, ಸರಾಸರಿ ೧೦ ಮನೆಗಳನ್ನು ಸಂಪರ್ಕ ಮಾಡಿ, ಸಂಘಟನೆ ಉದ್ದೇಶವನ್ನು ಮನವರಿಕೆ ಮಾಡಿ ಮತಗಟ್ಟೆಗೆ ಕರೆತರುವ ಬೂತ್ ವಿಜಯ ಅಭಿಯಾನದ ಪ್ರಯತ್ನ ಪ್ರಜಾ ತಂತ್ರದ ಬೇರನ್ನೇ ಗಟ್ಟಿಗೊಳಿಸುವ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.

ಅವರು ಸೋಮವಾರ ನಗರದ ಕೋಟೆ ಬಡಾವಣೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆವರಣದಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕರ್ತರ ಆಧರಿತವಾದ ಸಂಘಟನೆ ಚುನಾವಣೆಯನ್ನು ದೋಷ ಮುಕ್ತವಾಗಿ ಎದುರಿಸಬೇಕು ಎನ್ನುವುದಾದರೆ ಬುಡಮಟ್ಟದಲ್ಲಿ ಸಂಘಟನೆಯ ಬೇರನ್ನು ಆಳವಾಗಿ ಇಳಿಸಬೇಕು. ಇಂದು ಹಣ, ಜಾತಿ ಇತ್ಯಾದಿ ಬೇರೆ ಬೇರೆ ದೋಷಗಳು ಆವರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಬೂತ್ ವಿಜಯ ಅಭಿಯಾನ ವಿಶಿಷ್ಠ ಕಾರ್ಯಕ್ರಮ ಎಂದರು.

ಈ ರೀತಿಯ ಕೆಲಸವನ್ನು ಬಿಜೆಪಿ ಮಾಡಲು ಸಾಧ್ಯವಿದೆ. ಪೇಜ್ ಪ್ರಮುಖರನ್ನು ಮಾಡಲು ಅಗತ್ಯವಿರುವ ಕಾರ್ಯಕರ್ತರ ಸಮೂಹ ಇರುವುದು ನಮ್ಮಲ್ಲಿ ಮಾತ್ರ ಆ ದಿಶೆಯಲ್ಲಿ ಇಂದು ಪೇಜ್ ಪ್ರಮುಖರು ಕಾರ್ಯಕರ್ತರನ್ನು ಭೇಟಿ ಮಾಡಿ ಮನೆ ಮನೆಗೆ ತೆರಳಿ ಮತಗಳಿಸುವುದು ಕೇವಲ ರಾಜಕೀಯ ಉದ್ದೇಶಕ್ಕಲ್ಲ ಸಮಾಜ ಕಟ್ಟುವ ಪ್ರಕ್ರಿಯೆ ಒಂದು ಭಾಗ ಎನ್ನುವ ಮನವರಿಕೆ ಮಾಡುವ ಕೆಲಸ ರಾಜ್ಯಾದ್ಯಂತ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ೧೨೨೨ ಬೂತ್‌ಗಳಲ್ಲಿ ಆರಂಭವಾಗುತ್ತಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಬೂತ್ ವಿಜಯ ಅಭಿಯಾನದ ಉದ್ದೇಶ ಪ್ರತಿ ಬೂತ್‌ನಲ್ಲಿ ಅಧ್ಯಕ್ಷರು ತಂಡವನ್ನು ಸಕ್ರಿಯಗೊಳಿಸಬೇಕು. ೩೦ ಮತದಾರರಿಗೆ ಓರ್ವ ಪೇಜ್ ಪ್ರಮುಖರನ್ನು ನೇಮಿಸಬೇಕಾಗುತ್ತದೆ. ೧೨೨೨ ಬೂತ್‌ಗಳಲ್ಲಿ ಈ ಅಭಿಯಾನ ಮುಂದಿನ ೧೦ ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದರು.

ಸಧ್ಯದಲ್ಲೇ ಪ್ರತಿ ಬೂತ್‌ನಲ್ಲಿ ವಾಟ್ಸ್ ಆಪ್ ಗ್ರೂಪ್ ರಚಿಸಿ ಎಲ್ಲಾ ಕಾರ್ಯಕರ್ತರು, ಮತದಾರರಿಗೆ ಮಾಹಿತಿ ತಿಳಿಸುತ್ತೇವೆ. ಪ್ರತಿ ಬೂತ್ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವ ಕೆಲಸ ಮಾಡಲಾಗುವುದು ಎಂದರು.

ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ ರಾಜ್‌ಅರಸ್ ಮಾತನಾಡಿ, ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಸಂಘಟನೆ ದೃಷ್ಠಿಯಿಂದ ತುಂಬಾ ಉಪಯುಕ್ತವಾದದ್ದು, ಬಿಜೆಪಿ ಹಲವಾರು ವರ್ಷಗಳಿಂದ ಪೇಜ್ ಪ್ರಮುಖ್ ಸೇರಿ ನಾನಾ ರೀತಿಯ ಸಂಘಟನಾ ಪೂರ್ವಕವಾದ ವಸ್ತುಗಳನ್ನು ಬಳಸಿಕೊಂಡು ವಿಶ್ವಾಸದಿಂದ ಕೆಲಸ ಮಾಡುತ್ತಿದೆ. ಚುನಾವಣೆ ಕೆಲವೇ ತಿಂಗಳು ಇರುವಾಗ ಆರಂಭವಾಗಿರುವ ಈ ಅಭಿಯಾನಕ್ಕೆ ಕೈಜೋಡಿಸಿ ನಗರದ ೧೦೯ ಬೂತ್‌ಗಳಲ್ಲೂ ಪಕ್ಷದ ಸೂಚನೆ ಪ್ರಕಾರ ೧೦ ದಿನಗಳ ಕಾಲಕ್ಕಿಂತಲೂ ಮೊದಲೇ ಗುರಿಯನ್ನು ಸಾಧಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಭಾರಿ ಚನ್ನಬಸಪ್ಪ, ಗ್ರಾಮಾಂತರ ಮಂಡಳ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಭಿಯಾನದ ಸಂಚಾಲಕರಾದ ರವೀಂದ್ರ ಬೆಳವಾಡಿ, ಬಿ.ಬಿ.ರಾಜಪ್ಪ, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಬೂತ್ ಅಧ್ಯಕ್ಷರಾದ ವೀಣಾ, ಪಕ್ಷದ ಮುಖಂಡರಾದ ಕೋಟೆ ರಂಗನಾಥ್ ಇತರರು ಇದ್ದರು

Booth Vijay Abhiyan

About Author

Leave a Reply

Your email address will not be published. Required fields are marked *

You may have missed