September 19, 2024

Atalji is a personality who does not compromise with national interest: ಅಟಲ್‌ಜಿ ರಾಷ್ಟ್ರೀಯ ಹಿತದ ಜೊತೆಗೆ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ,- ಸಿ.ಟಿ.ರವಿ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಅಟಲ್‌ಜಿ ಅವರನ್ನು ಅಜಾತ ಶತ್ರು ಎಂದು ಕರೆಯುತ್ತಿದ್ದರು. ರಾಷ್ಟ್ರೀಯ ಹಿತದ ಜೊತೆಗೆ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ, ಹೂವಿನಷ್ಟು ಮೃಧುವೂ ಹೌದು ವಜ್ರದಷ್ಟು ಕಠಿಣವೂ ಹೌದು ಎನ್ನುವಂತಿತ್ತು ಅವರ ಸ್ವಭಾವ. ಅವರು ಭಾವುಕ ಜೀವಿ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ತಿಳಿಸಿದರು.

ಅವರು ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಅಟಲ್ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ನಂತರ ಮಾತನಾಡಿದರು.

ನುಡಿದರೆ ಮಾತು ಮುತ್ತಿನಂತೆ ಇರಬೇಕು ಎನ್ನುವಂತೆ ಹೃದಯ ಭಾವ ತುಂಬಿ ಮಾತನಾಡುತ್ತಿದ್ದರು. ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಯುವ ಮೋರ್ಚಾ ವಾಜಪೇಯಿ ಜನ್ಮ ದಿನವನ್ನು ನೆಪವಾಗಿಟ್ಟುಕೊಂಡು ಅಟಲ್ ಭಾಷಣ ಸ್ಪರ್ಧೆ ಏರ್ಪಡಿಸಿದೆ. ಮಾತನಾಡುವವರು ವಿಷಯವನ್ನು ಗ್ರಹಿಸಿಕೊಂಡು ಆತ್ಮವಿಶ್ವಾಸದಿಂದ ಮಾತನಾಡಬೇಕು. ಕೇವಲ ಹುರುಹೊಡೆದು ಮಾತನಾಡುವುದಲ್ಲ. ಅನುಭವಿಸಿ ಮಾತನಾಡಬೇಕು. ನಾವು ಅಧ್ಯಯನ ಮಾಡಿದಾಗ ಅನುಭವಿಸಿ ಮಾತನಾಡಲು ಸಾಧ್ಯ. ಅದರ ಮೂಲಕ ನಾಯಕತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಅಟಲ್‌ಜಿ, ಮೋದಿ ಅವರ ರೀತಿಯ ನಾಯಕತ್ವದ ಗುಣಗಳು ಬೆಳೆಯಬೇಕು ಅದರಲ್ಲಿ ರಾಷ್ಟ್ರೀಯತೆಯ ಹಿತಾಸಕ್ತಿ ಇರಬೇಕು. ಆ ರೀತಿ ನಾಯಕತ್ವ ಭವಿಷ್ಯದಲ್ಲಿ ಭಾರತವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ ಎಂದರು.
ಯಾವುದನ್ನೇ ಆದರೂ ತಪಸ್ಸನ್ನಾಗಿ ತೆಗೆದುಕೊಂಡರೆ ಮಾತ್ರ ಯಶಸ್ಸು ಸಾಧ್ಯ. ನಮ್ಮ ಜೀವನದ ಸಾಧನೆ ವ್ಯಕ್ತಿಗತ ಪ್ರತಿಷ್ಠೆಯನ್ನು ಹೆಚ್ಚಿಸುವುದು ಮಾತ್ರವಲ್ಲ ಸಮಾಜವನ್ನು ದಡಕ್ಕೆ ಮುಟ್ಟಿಸುವಂತಿರಬೇಕು ಎಂದರು.
ಜಿಲ್ಲಾ ಯುವ ಮೊರ್ಚಾ ಪ್ರಭಾರಿ ಅನೂಪ್ ಮಾತನಾಡಿ, ಜೀವನದಲ್ಲಿ ಕೆಲವು ಒಳ್ಳೆ ವ್ಯಕ್ತಿಗಳಿಂದ ಪ್ರೇರಿತರಾಗಲು ಅವಕಾಶಗಳಿರುತ್ತವೆ. ಅಟಲ್ ಭಾಷಣ ಸ್ಪರ್ಧೆಯನ್ನು ಈ ಕಾರಣಕ್ಕೆ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಅಟಲ್‌ಜಿ ಎಂದರೆ ಕೇವಲ ರಾಜಕಾರಣಿ ಅಷ್ಟೇ ಅಲ್ಲ. ಅವರ ನಡೆ, ನುಡಿ, ಹಾವ ಭಾವ, ಮಾತು ಎಲ್ಲವೂ ನಮ್ಮನ್ನು ಉತ್ತೇಜನಗೊಳಿಸಿದೆ. ದೇಶವನ್ನು ಆಂತರಿಕವಾಗಿ ಬಲಗೊಳಿಸುವುದು ಹಾಗೂ ದೇಶದ ವರ್ಚಸ್ಸನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯುವುದು ಹೇಗೆ ಎನ್ನುವುದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದರು ಎಂದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್‌ಕೋಟ್ಯಾನ್ ಮಾತನಾಡಿ, ಕೇವಲ ರಾಜಕೀಯ ಮಾಡುವುದೊಂದೇ ಬಿಜೆಪಿ ಉದ್ದೇಶವಲ್ಲ. ಎಲ್ಲಾ ಸ್ಥರದಲ್ಲೂ ಜನರನ್ನು ತಲುಪಬೇಕು ಎನ್ನುವುದು ಧ್ಯೇಯ. ಬೆಂಗಳೂರಿನಲ್ಲಿ ಜ. ೫ ರಂದು ರಾಜ್ಯ ಮಟ್ಟದ ಸ್ಪರ್ಧೆ ನಡೆಯುತ್ತದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿದರು. ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಚಿಕ್ಕದೇವನೂರು ರವಿ, ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರದೀಪ್, ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ ರಾಜ್ ಅರಸ್ ಇತರರು ಭಾಗವಹಿಸಿದ್ದರು.

Atalji is a personality who does not compromise with national interest

About Author

Leave a Reply

Your email address will not be published. Required fields are marked *

You may have missed