September 19, 2024

Inauguration of District Level Employees’ Games:  ಜಿಲ್ಲಾ ಮಟ್ಟದ ನೌಕರರ ಕ್ರೀಡಾಕೂಟ ಉದ್ಘಾಟನೆ

0

????????????????????????????????????

ಚಿಕ್ಕಮಗಳೂರು: ದೇಹದ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪ್ರತಿಯೊಬ್ಬರಿಗೂ ಬದುಕಿನ ಒಂದು ಭಾಗವಾಗಬೇಕು ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಚಿಕ್ಕಮಗಳೂರು ಇವರ ವತಿಯಿಂದ ಕುವೆಂಪು ಕಲಾಮಂದಿರದಲ್ಲಿ ಇಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಒಂದೊಂದು ಆಟಕ್ಕೂ ಒಂದೊಂದು ನಿಯಮ ಇರುತ್ತದೆ. ಪ್ರತಿ ಆಟಕ್ಕೂ ತನ್ನದೇ ಆದ ನಿಯಮವಿರುತ್ತದೆ. ಆಟ ಪ್ರತಿ ಮನಸ್ಸುಗಳನ್ನು ಜೋಡಿಸಬೇಕು, ಮನಸ್ಸು ಕಟ್ಟಬೇಕೆ ಹೊರೆತು, ಮನಸ್ಸು ಒಡೆಯುವುದಕ್ಕಲ್ಲ. ಮನುಷ್ಯನ ಜೀವನಕ್ಕೂ ಒಂದು ನಿಯಮವಿರಬೇಕು, ಆ ನಿಯಮದ ಒಳಗೆ ಪ್ರತಿಯೊಬ್ಬರು ಬದುಕಬೇಕು. ಜೀವನದ ನಿಯಮ ನೈತಿಕ ಮೌಲ್ಯಗಳ ಆಧಾರದ ಮೇಲೆ ಬದುಕಬೇಕು ಎಂಬುದು ಜೀವನದ ನಿಯಮ. ಸಂಸ್ಕೃತಿ ಎಂಬುದು ಇಲ್ಲದೆ ಇದ್ದರೆ ಮನುಷ್ಯರು ಯಂತ್ರಗಳಾಗುತ್ತಿದ್ದರು. ಒಂದು ಕಾಲದಲ್ಲಿ ಆಟ ಎಲ್ಲರ ಬದುಕಿನ ಭಾಗವಾಗಿತ್ತು. ಸಾಂಸ್ಕೃತಿಕ ಚಟುವಟಿಕೆಯು ಕೂಡ ಬದುಕಿನ ಒಂದು ಭಾಗವಾಗಿದ್ದು ಹಿಂದೆ ಕೆಲಸ ಮಾಡುತ್ತಾ ಒಂದೊಂದು ಪದ ಹೇಳುತ್ತಿದ್ದರು. ಇಂದು ನಾವು ಅನಾವಾಶ್ಯಕವಾಗಿರುವ ಒತ್ತಡವನ್ನು ಹೇರಿಕೊಂಡಿದ್ದೇವೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಕನ್ನಡ ನಾಡು ಕಂಡ ಅಪರೂಪದ ಸಂತ ಸಿದ್ದೇಶ್ವರ ಸ್ವಾಮಿಜಿಯವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಚಿಕ್ಕಮಗಳೂರು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ನೌಕರರ ಸಂಘದ ಗೌರವ ಉಪಾಧ್ಯಕ್ಷ ಓಂಕಾರ ಸ್ವಾಮಿ ಸೇರಿದಂತೆ ನೌಕರರ ಸಂಘದ ತಾಲ್ಲೂಕು ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.    

Inauguration of District Level Employees' Games

About Author

Leave a Reply

Your email address will not be published. Required fields are marked *

You may have missed