September 19, 2024

The literature books of Vishwamanava Kuvempu should be practiced: ವಿಶ್ವಮಾನವ ಕುವೆಂಪು ಅವರ ಸಾಹಿತ್ಯ ಪುಸ್ತಕಗಳನ್ನು ಅಭ್ಯಾಸಿಸಬೇಕು – ಸವಿತರಮೇಶ್

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ರಾಷ್ಟ್ರಕವಿ ಕುವೆಂಪು ರವರ ಸಾಹಿತ್ಯ, ಕಾವ್ಯ, ಕಾದಂಬರಿ, ನಾಟಕ ವಿಮರ್ಶೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು ಎಂದು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಸವಿತರಮೇಶ್ ತಿಳಿಸಿದರು.

ನಗರದ ವಿಜಯಪುರ ಒಕ್ಕಲಿಗರ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ರವರ ಬಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿ ಕುವೆಂಪು ರವರ ವಿಶ್ವ ಮಾನವ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ರೂಡಿಸಿಕೊಂಡು ಬಂದಲ್ಲಿ ಬದುಕು ಸಾರ್ಥಕವಾಗಲಿದೆ ವಿಶ್ವಮಾನವರಾಗಿ ಬೆಳೆದ ರಾಷ್ಟ್ರಕವಿ ಕುವೆಂಪು ಅವರ ಜೀವನ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿದ್ದು ಅವರ ಸಾಹಿತ್ಯವನ್ನು ಓದಿ ಅರ್ಥೈಹಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ವಿಶ್ವ ಮಾನವ ದಿನಾಚರಣೆ ಹೆಚ್ಚು ಅರ್ಥಪೂರ್ಣವಾಗಲಿದೆ ಎಂದರು.

ಕನ್ನಡ ಸಾಹಿತ್ಯವನ್ನು ಮೇರು ಶಿಖರಕ್ಕೇರಿಸಿದ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಅವರು ಸಣ್ಣ ಗ್ರಾಮದಲ್ಲಿ ಜನಿಸಿದರೂ ತಮ್ಮ ನಿರಂತರ ಪ್ರಯತ್ನ ಹಾಗೂ ಸಾಧನೆಯಿಂದಾಗಿ ವಿಶ್ವ ಮಾನವರಾಗಿದ್ದಾರೆ, ಕುವೆಂಪು ಅವರು ಚಿಕ್ಕಮಗಳೂರಿನ ಮಡಿಲಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದ್ದು ಮಲೆನಾಡಿನ ಸೊಬಗನ್ನು ತಮ್ಮ ಸಾಹಿತ್ಯದ ಮೂಲಕ ಎಳೆ ಎಳೆಯಾಗಿ ಬಣ್ಣಿಸಿದ್ದಾರೆ ಅವರ ಪ್ರತಿಯೊಂದು ಬರಹವು ಓದುಗರನ್ನು ಸೆಳೆಯುವುದು ಈ ಮೂಲಕ ಅಪಾರ ಸಾಹಿತ್ಯ ಕೃಷಿಯ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆಯ ಕವಿ ಅವರ ಚಿಂತನೆಗಳ ಹಾದಿಯಲ್ಲಿ ಇಂದಿನ ಯುವ ಸಮುದಾಯ ಸಾಗುವ ಮೂಲಕ ಅವರ ಅಸ್ಮಿತಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.

ಮಾನವರಲ್ಲಿ ಪರಸ್ಪರ ಧರ್ಮ ಜಾತಿ, ರಾಷ್ಟ್ರಗಳ ನಡುವಿನ ದ್ವೇಷ ಮನಸುಗಳನ್ನು ಕಂದಕ ದೂರವಾಗುವಂತೆ ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ ಎಲ್ಲಡೆ ಸಾಕಾರಗೊಳ್ಳಬೇಕು ಮನುಜಮತ ವಿಶ್ವಪಥದಲ್ಲಿ ನಡೆಯುವಂತಾಗಬೇಕು ಕುವೆಂಪು ಅವರು ಸಾರಸತ್ವ ಲೋಕದ ಅಪೂರ್ವನಕ್ಷತ್ರ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸೃಷ್ಟಿಜಯರಾಮ್, ಹರ್ಷಿತಮಹೇಂದ್ರ ವಿಶೇಷ ಉಪನ್ಯಾಸ ನೀಡಿದರು, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಕಾರ್ಯದರ್ಶಿ ಎಂ.ಎಲ್ ಜಾನವಿಜಯರಾಮ್, ಖಜಾಂಚಿ ಶಿಲ್ಪ ವಿಜಯ್, ಉಪಾಧ್ಯಕ್ಷೆ ಬಿ.ಎಂ.ಸ್ಮಿತಾಸುರೇಶ್, ನಿರ್ದೇಶಕರುಗಳಾದ ಕೃಷ್ಣವೇಣಿರಮೇಶ್, ಚಂಪಾಸುದರ್ಶನ್, ವೇದಾಶ್ರೀಸತೀಶ್, ಎಂ.ಆರ್ ಶಾಲಿನಿಸುಭ್ರಹ್ಮಣ್ಯ, ನಾಗರತ್ನಜಗದೀಶ್, ಅಂಜನಾರವಿ, ಭಾಗ್ಯಮಹೇಂದ್ರ, ಸುಭದ್ರನಾರಾಯಣ್, ಸಂಧ್ಯಾನಾಗೇಶ್, ಮಂಜುಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The literature books of Vishwamanava Kuvempu should be practiced

About Author

Leave a Reply

Your email address will not be published. Required fields are marked *

You may have missed