September 19, 2024

District Civil Engineers Association appeal to District Collector: ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಸಿಯೇಷನ್ ಜಿಲ್ಲಾಧಿಕಾರಿಗಳಿಗೆ ಮನವಿ

0

ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಸಿಯೇಷನ್ ಜಿಲ್ಲಾಧಿಕಾರಿಗಳಿಗೆ ಮನವಿ

ಕಟ್ಟಡ ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ದೊರಕಿಸುವಂತೆ ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗಳಾದ ಕೆ.ಎನ್.ರಮೇಶ್ ರವರಿಗೆ ಬುಧವಾರ ಮನವಿ ನೀಡಿದರು.

ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಪಿ.ಸುರೇಶ್ ಮನವಿ ನೀಡಿ ಮಾತನಾಡಿ ಕಟ್ಟಡ ಕಾಮಗಾರಿಗೆ ಅಗತ್ಯವಾಗಿ ಬೇಕಾದ ಎಂ.ಸ್ಯಾಂಡ್, ಜಲ್ಲಿ, ಸಾಲಿಡ್ ಬ್ಲಾಕ್, ಹಾಲೋ ಬ್ಲಾಕ್ ಮತ್ತು ಆರ್.ಎಂ.ಸಿ ಕಾಂಕ್ರೀಟ್ ಸಿಗದೇ ತೊಂದರೆಯಾಗುತ್ತಿದ್ದು, ಕಟ್ಟಡ ಕಾಮಗಾರಿಗಳನ್ನು ನಂಬಿಕೊಂಡು ಬದುಕುವ ಕೂಲಿ ಕಾರ್ಮಿಕರು, ಗುತ್ತಿಗೆದಾರರು, ಇಂಜಿನಿಯರ್‌ಗಳ ಬದುಕು ದುಸ್ತರವಾಗಿದೆ, ಈ ವೃತ್ತಿಯನ್ನೆ ಬದುಕನ್ನಾಗಿ ಮಾಡಿಕೊಂಡಿರುವ ಸೆಂಟ್ರಿಂಗ್, ಬಾರ್‌ಬೆಂಡಿಂಗ್, ಪ್ಲಂಬಿಂಗ್, ಗಾರೆ, ಕೂಲಿ, ಪೈಟಿಂಗ್ ಮುಂತಾದ ಅನೇಕ ಕಾಮಗಾರಿಗಳ ವಿಭಾಗಗಳಲ್ಲಿ ಕೆಲಸ ಮಾಡುವವರು ಕೆಲಸವಿಲ್ಲದೆ ಮನೆಯಲ್ಲಿ ಕೂರುವಂತಾಗಿದೆ, ಇದೆ ಪರಿಸ್ಥಿತಿ ಮುಂದುವರೆದಲ್ಲಿ ಎಲ್ಲರ ಬದುಕು ಶೋಚನೀಯ ಸ್ಥಿತಿ ತಲುಪಲಿದೆ, ಅದಕ್ಕಿಂತ ಮುಂಚಿತವಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.

ಕ್ರಷರ್ ಮಾಲೀಕರು ಅವರ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿರುವುದರಿಂದ, ಅವರ ಉತ್ಪಾದನೆಯನ್ನು ನಿಲ್ಲಿಸಿರುವುದರಿಂದ ಈ ಎಲ್ಲಾ ಏರುಪೇರುಗಳಿಗೆ ಮೂಲಭೂತ ಕಾರಣವಾಗಿದೆ, ಇದರಿಂದ ಎಲ್ಲರ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡು ಇದರಿಂದ ಎಲ್ಲಾ ರೀತಿಯ ತೊಂದರೆಗಳು ಶ್ರಿಸಾಮಾನ್ಯರಿಗೆ ತಲುಪಿದೆ, ಈ ಬಗ್ಗೆ ಘನ ಸರ್ಕಾರವು ತಕ್ಷಣವೇ ಸ್ಪಂದಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಸಿಯೇಷನ್ ಈ ಮೂಲಕ ಒತ್ತಾಯಿಸುತ್ತಿದೆ

ಒಂದು ವೇಳೆ ಸರ್ಕಾರ ವಿಳಂಬದೋರಣೆ ಅನುಸರಿಸಿದಲ್ಲಿ ನಾವೂ ಸಹ ತೀವ್ರ ರೀತಿಯ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಬುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಎನ್.ದೊಡ್ಡೇಗೌಡ, ಟಿ.ನಾರಾಯಣ್ ಸ್ವಾಮಿ, ಜಗಧೀಶ್, ಕೆ.ಪಿ.ನಾಗೇಂದ್ರ, ನಂಧೀಶ್, ಕೆ.ಎಸ್.ಸತೀಶ್, ಮತ್ತಿತರರು ಉಪಸ್ಥಿತರಿದ್ದರು.

District Civil Engineers Association appeal to District Collector

About Author

Leave a Reply

Your email address will not be published. Required fields are marked *

You may have missed