September 19, 2024

UGD work should be completed by next March: ಅಮೃತ್ ಕುಡಿಯುವ ನೀರಿನ ಯೊಜನೆ ಯುಜಿಡಿ ಕಾಮಗಾರಿಯನ್ನು ಮುಂದಿನ ಮಾರ್ಚ್ ವೇಳಗೆ ಪೂರ್ಣಗೊಳಿಸಬೇಕು- ಬೈರತಿ ಬಸವರಾಜು

0

????????????????????????????????????

ಚಿಕ್ಕಮಗಳೂರುಎಕ್ಸ್‌ಪ್ರೆಸ್: ನಗರದ ಅಮೃತ್ ಕುಡಿಯುವ ನೀರಿನ ಯೊಜನೆ ಈ ತಿಂಗಳಾಂತ್ಯಕ್ಕೆ ಹಾಗೂ ಯುಜಿಡಿ ಕಾಮಗಾರಿಯನ್ನು ಮುಂದಿನ ಮಾರ್ಚ್ ವೇಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿ ಮಾಹಿತಿ ನೀಡಿದರು.
ಇಂದು ಕಟ್ಟು ನಿಟ್ಟಾಗಿ ಕೊನೆಯ ಅವಕಾಶ ನೀಡಲಾಗಿದೆ. ಅಮೃತ್ ಯೋಜನೆ ಸಣ್ಣ ಪುಟ್ಟ ಕಾಮಗಾರಿ ಇದೆ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.

ಈ ವೇಳೆ ಶಾಸಕ ಸಿ.ಟಿ. ರವಿ ಮಾಹಿತಿ ನೀಡಿ ಹಿಂದೆ ಆಂಧ್ರಪ್ರದೇಶ ಮೂಲದ ಅಭಿರಾಂ ಕನ್ಸಟ್ರಕ್ಷನ್ ಎನ್ನುವ ಕಂಪನಿಯು ಟೆಂಡರ್ ಪಡೆದು ಪೂರ್ಣಗೊಳಿಸದ ಕಾರಣ ಅವರ ಟೆಂಡರ್ ವಜಾ ಮಾಡಿ, ನಷ್ಟವನ್ನು ಅವರೇ ಭರಿಸಬೇಕು ಎನ್ನುವ ಷರತ್ತಿನ ಮೇಲೆ ಹೊಸದಾಗಿ ಟೆಂಡರ್ ಕರರೆಯಲಾಗಿದ್ದು, ಈಗ ಮೈಕಾನ್ ಕನ್ಸಟ್ರಕ್ಷನ್ ಕಂಪನಿಯು ಎಲ್ಲೆಲ್ಲಿ ಕೈಬಿಟ್ಟುಹೋದ ಲಿಂಕ್‌ಗಳಿವೆ ಅದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅಗತ್ಯ ಇರುವ ಕಾರ್ಮಿಕರು ಮತ್ತು ಸಲಕರಣೆಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಉಸ್ತುವಾರಿ ಸಚಿವರು ಇಂದು ಸೂಚನೆ ನೀಡಿದ್ದಾರೆ ಎಂದರು.

ಮುಂಚೆ ಮನೆ ಸಂಪರ್ಕವನ್ನು ನಿವಾಸಿಗಳೇ ವ್ಯಕ್ತಿಗತವಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿತ್ತು. ನಾವು ಉಸ್ತುವಾರಿ ಸಚಿವರ ಗಮನಕ್ಕೆ ತಂದು ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಅವರಲ್ಲಿ ಮನವಿ ಮಾಡಿ ಅದನ್ನೂ ಇಲಾಖೆ ಕಡೆಯಿಂದ ಮಾಡಿಸಲು ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಒಳಚರಂಡಿ ಕಾಮಗಾರಿ ಆರಂಭದಲ್ಲಿ ೫೭ ಕೋಟಿ ರೂ.ನ ಯೋಜನೆಯಾಗಿತ್ತು. ಈಗ ಹೊಸ ಬಡಾವಣೆಗಳನ್ನೂ ಸೇರಿಸಿಕೊಂಡು ೮೭ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ. ಸಿಇಓ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಆನಂದ್, ಇದ್ದರು.

UGD work should be completed by next March-

About Author

Leave a Reply

Your email address will not be published. Required fields are marked *

You may have missed