September 20, 2024

Devotees of Ayyappa Swamy: ಕರ್ನಾಟಕ ರಾಜ್ಯದ ಸಂಸ್ಕೃತಿಯನ್ನು ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಉಳಿಸಿ ಬೆಳಸುತ್ತಿದ್ದಾರೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ನಗರದ ತಮಿಳು ಕಾಲೋನಿಯ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿ ವತಿಯಿಂದ ೧೮ನೇ ವರ್ಷದ ಪೂಜಾ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಯಿತು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅನ್ನದಾನಕ್ಕೆ ಚಾಲನೆ ನೀಡಿ ಮಾತನಾಡಿ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿ ಕಠಿಣ ವ್ರತವನ್ನು ಆಚರಿಸಿ, ಸ್ವಾಮಿಯ ದರ್ಶನವನ್ನು ಮಾಡಿ ಕರ್ನಾಟಕ ರಾಜ್ಯದ ಸಂಸ್ಕೃತಿಯನ್ನು ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಉಳಿಸಿ ಬೆಳಸುತ್ತಿದ್ದಾರೆ, ನಗರದ ತಮಿಳು ಕಾಲೋನಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಪೂಜಾ ಕಾರ್ಯ ಮತ್ತು ಸಾರ್ವಜನಿಕರಿಗೆ ಅಯ್ಯಪ್ಪ ಸ್ವಾಮಿ ಅನ್ನ ಸಂತರ್ಪಣೆಯನ್ನು ಮಾಡಲಾಗುತ್ತಿದೆ, ಈ ಆಚರಣೆಯು ನಿರಂತರವಾಗಿ ನಡೆದು ಅಯ್ಯಪ್ಪ ಸ್ವಾಮಿ ಭಕ್ತರಿಗೆ ಶುಭವಾಗಲಿ ಎಂದರು.

ನಗರಸಭೆ ಸದಸ್ಯ ರವಿ ಮಾತನಾಡಿ ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯ, ಮತ್ತು ಅನ್ನದಾನವನ್ನು ಗುರು ಸ್ವಾಮಿಗಳು ೧೮ ವರ್ಷಗಳಿಂದ ಯಶಸ್ವಿಯಾಗಿ ನಡೆಸುಕೊಂಡು ಬಂದಿದ್ದು, ಅದೇ ರೀತಿಯಲ್ಲಿ ಎಲ್ಲಾ ಸ್ವಾಮಿಗಳು ಸೇರಿ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಅಯ್ಯಪ್ಪ ಸ್ವಾಮಿಯವರಿಗೆ ಅಭಿಷೇಕ ಮತ್ತು ವಿಶೇಷ ಪೂಜೆ, ಭಜನೆ ನಂತರ ಮಹಾ ಮಂಗಳಾರತಿ, ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಸ್ಥಳಿಯರ ಸಹಕಾರದಿಂದ ಯಶಸ್ವಿಯಾಗಿ ಮುಂದುವರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿವಕುಮಾರ್, ಮುನಿ, ಜಿ.ರಘು, ಎಸ್.ಎಲ್.ಮಂಜು, ಪಿ.ಪ್ರವೀಣ್, ವಿನೀತ್, ನವೀನ್, ದಿಲೀಪ್, ಪ್ರಶಾಂತ್, ಉಪೇಂದ್ರ, ಸುನಿಲ್, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Devotees of Ayyappa Swamy

Community-verified icon

About Author

Leave a Reply

Your email address will not be published. Required fields are marked *

You may have missed