September 19, 2024

National Consumer Day: ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡಲಾಗಿದೆ- ಎನ್. ಆರ್. ಕನ್ನಕೇಶವ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಡಿಸೆಂಬರ್ ೨೪ ನ್ನು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎನ್. ಆರ್. ಕನ್ನಕೇಶವ ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ, ಕಾನೂನು ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇವರುಗಳ ಸಂಯುಕ್ತಶ್ರಯದಲ್ಲಿ ಇಂದು ವಾರ್ತಾ ಭವನದಲ್ಲಿ ನಡೆದ, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಸಮಾರಂಭದ ಅಧುನಿಕತೆಯನ್ನು ವಹಿಸಿ ಮಾತಾನಾಡುತ್ತಿದ್ದರು.

ದೇಶದ ಆರ್ಥಿಕ ವ್ಯವಸ್ಥೆಯನ್ನು ಸಧೃಡ ಮಾಡುವಲ್ಲಿ ಗ್ರಾಹಕರು ಬಹಳ ಮುಖ್ಯ ಎಂದ ಅವರು ವ್ಯಾಪಾರಸ್ಥರು ಮಾಡುವ ಮೋಸದಿಂದ ಜಾಗೃತಿ ಹೊಂದಬೇಕಾಗಿದೆ ಅಲ್ಲದೆ ಕಾತ್ರಿ ಪಡೆದ ವಸ್ತುವಿನ ರಸೀದಿ ಮತ್ತೀತರ ದಾಖಲೆಗಳನ್ನು ಕೇಳಿ ಪಡೆದುಕೊಳ್ಳಬೇಕು ಮತ್ತು ಗ್ರಾಹಕರಿಗೆ ಮಾಹಿತಿ ಕೊರತೆಯಿಂದ ಹಲವಾರು ಸಮಸ್ಯೆಗಳಿಗೆ ತುತ್ತಾಗಿದ್ದರೆ ಅಂತಹ ಗ್ರಾಹಕರು ಪರಿಹಾರಕ್ಕಾಗಿ ದಾಖಲಾತಿ ಕೊಠಡಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ನೀಡಬಹುದು ಎಂದರು. ಕೇವಲ ಪ್ರಚಾರಕ್ಕೆ ಮಾರು ಹೋಗಿ ವಸ್ತುಗಳನ್ನು ಖರೀದಿಸಲು ಅವುಗಳ ಗುಣಮಟ್ಟದ ಬಗ್ಗೆ ಜಾಗೃತಿ ವಹಿಸುವುದು ಮುಖ್ಯವಾಗಿದೆ.

ಅತಿಯಾದ ಲಾಭದ ಆಸೆಯಿಂದ ವ್ಯಪಾರಸ್ಥರು ಹಾಗೂ ಉಧ್ಯಮಿದಾರರು ಗ್ರಹಕರಿಗೆ ಒಂದಿಲ್ಲ ಒಂದು ರೀತಿ ವಂಚಿಸುತ್ತಿರುವುದು ಕಂಡು ಬರುತ್ತಿದೆ. ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ಗುಣಮಟ್ಟದ ವಸ್ತುಗಳ ಹೆಸರಿನಲ್ಲಿ ಮೋಸದಂತಹ ಪ್ರಕರಣಗಳು ನಿತ್ಯವು ನಡೆಯುತ್ತಿದ್ದು ಇದಕ್ಕೆ ಪರಿಹಾರ ಶಿಕ್ಷಣ ಹಾಗೂ ಜಾಗೃತಿಯಿಂದ ಮಾತ್ರ ವಂಚನೆಯನ್ನು ತಡೆಯಬಹುದು ಎಂದು ಹೇಳಿದರು.

ವಕೀಲ ಡಿ. ನಟರಾಜ್ ಅವರು ಮಾತನಾಡಿ ಜಗತ್ತಿನಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿದು, ಸಮಾಜದಲ್ಲಿ ಒಬ್ಬರನ್ನೊಬ್ಬರು ಅವಲಂಬಿಸಿರುವುದರಿಂದ ದಿನನಿತ್ಯದ ಜೀವನಕ್ಕೆ ಅವ
ಶ್ಯವಾದ ವಸ್ತುಗಳನ್ನು ಖರೀದಿಸುವಾಗ ಜಾಗೃತಿ ವಹಿಸಬೇಕು ಪಡೆದ ವಸ್ತುವಿನ ಹಣಕ್ಕೆ ರಸೀದಿಯನ್ನು ಪಡೆಯಬೇಕು, ಎಂದ ಅವರು ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ ಜಾರಿಗೆ ಬಂದಿದೆ ಈ ಕಾಯ್ದೆಯಿಂದ ಮಾರವವನು ಎಚ್ಚರ ಎಂಬ ದ್ಯಾಯದೊಂದಿಗೆ ಗ್ರಾಹಕರನ್ನು ರಕ್ಷಿಸಲು ೨೦೧೯-೨೦ ರ ಕನೂನು ಗ್ರಾಹಕರನ್ನು ಸಂರಕ್ಷಿಸಲು ಅನೂಕೂಲವಾಗಿದೆ. ಗ್ರಾಹಕರ ವೇದಿಕೆಗೆ ದಾಖಲೆಯೊಂದಿಗೆ ದೂರು ನೀಡಿದರೆ ೯೦ ದಿನಗಳ ಒಳಗಾಗಿ ನ್ಯಾಯಸಮ್ಮತ ತೀರ್ಮಾನ ಹಾಗೂ ನ್ಯಾಯ ಪಡೆಯಬಹುದಾಗಿದೆ ಎಂದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಮಂಜುನಾಥ್ ಎಂ. ಬಮ್ಮನ ಕಟ್ಟಿ ಅವರು ಮಾತನಾಡಿ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಷ್ಟೇ ಜಾಗರೂಕರಾದರು ಮೋಸ ಹೋಗುವುದು ಸಹಾಜ ಇಂತಹ ಸಂದರ್ಭದಲ್ಲಿ ಮೋಸ ಹೋದ ಯಾವುದೇ ಗ್ರಾಹಕರು ತನಗಾದ ನಷ್ಟವನ್ನು ಹಿಂಪಡಿಯಲು ಗ್ರಾಹಕ ವೇದಿಕೆಗೆ ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಬಹುದು ಎಂದರು.

ವಕೀಲರಾದ ಡಿ. ನಟರಾಜ್ ಉಪನ್ಯಾಯ ನೀಡಿದರು. ಬಿ.ಆರ್ ಇಂದುಮತಿ, ಮಹೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ಮತ್ತಿತರರು ವೇದಿಕೆಯಲ್ಲಿದ್ದರು. ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಉಪನಿರ್ದೇಶಕ ಬಿ.ಎಂ. ಸುಬ್ರಮಣ್ಯ ಎಲ್ಲರನ್ನು ಸ್ವಾಗತಿಸಿದರು.

National Consumer Day

Community-verified icon

About Author

Leave a Reply

Your email address will not be published. Required fields are marked *

You may have missed