September 19, 2024

Give first priority to development work: ಜಾತಿಧರ್ಮ ನೋಡಿ ರಾಜಕಾರಣ ಮಾಡುವುದಿಲ್ಲ, ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇವೆ – ಶೋಭಕರಂದ್ಲಾಜೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಅಜ್ಜಂಪುರ: ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ ಯಾವುದೇ ಜಾತಿಧರ್ಮ ನೊಡದೆ ಎಲ್ಲಾ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ತಿಳಿಸಿದರು.

ಬುಧವಾರ ಅಜ್ಜಂಪುರದ ಕೈಲಾಸಂ ಕಲಾಕ್ಷೇತ್ರ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ತರೀಕೆರೆ ತಾಲ್ಲೂಕಿನ ಬೇಲೇನಹಳ್ಳಿ ಹಾಗೂ ಇತರೆ ೨೦ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಅಜ್ಜಂಪುರ ಪಟ್ಟಣಕ್ಕೆ ನೀರು ಸರಬರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ದೇಶದಅಭಿವೃದ್ದಿ ವಿಚಾರದಲ್ಲಿರಾಜಕಾರಣ ಸಲ್ಲದು. ಜಾತಿ, ಧರ್ಮ ಮುಂದಿಟ್ಟುಯಾವುದೇ ಪಕ್ಷಅಭಿವೃದ್ದಿಯನ್ನುತಡೆಯಬಾರದು ಎಂದರು.

೨೦೦೯ ರಲ್ಲಿಬಹುಗ್ರಾಮ ಕುಡಿಯುವ ನೀರಿನಯೋಜನೆಗೆ ಬಿಜೆಪಿ ಸರ್ಕಾರಅನುಮೋಧನೆ ನೀಡಿತ್ತು.ಕಾಮಗಾರಿಗೆ ಚಾಲನೆ ಸಿಗುವ?ರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರಯೋಜನೆ ಬಗ್ಗೆ ಸಂಪೂರ್ಣ ನಿರ್ಲಕ್ಷ ತಾಳಿತು.ಯೋಜನೆ ಲೋಕಾರ್ಪಣೆಗೊಳ್ಳಲು ಮತ್ತೆ ಬಿಜೆಪಿ ಶಾಸಕರೇ ಅಸ್ತಿತ್ವಕ್ಕೆ ಬರಬೇಕಾಯಿತುಎಂದರು.

ಚುನಾವಣೆ ಸಂಧರ್ಭದಲ್ಲಿ ಮಾತ್ರ ಪಕ್ಷರಾಜಕೀಯ, ಹೋರಾಟಗಳು ಮಾಡಲಿ.ತದನಂತರ ಅಸ್ತಿತ್ವಕ್ಕೆ ಬರುವ ಸರ್ಕಾರ ಕೈಗೊಳ್ಳುವ ಅಭಿವೃದ್ದಿ ಕೆಲಸಗಳಿಗೆ ವಿರೋಧ ಪಕ್ಷಗಳು ಸಹಕಾರ ನೀಡಬೇಕು. ಇದರಿಂದ ಮಾತ್ರದೇಶದ ಸರ್ವತೋಮುಖಅಭಿವೃದ್ದಿ ಸಾಧ್ಯಎಂದರು.

ನರೇಂದ್ರ ಮೋಧಿ ಸರ್ಕಾರಜನರಿಗೆಔ?ಧ, ಶುದ್ದಕುಡಿಯುವ ನೀರು, ರಸ್ತೆ, ವಸತಿ, ಕಿಸಾನ್ ಸಮ್ಮಾನ್‌ಯೋಜನೆ, ಆಯು?ನ್‌ಯೋಜನೆ ನೀಡುವಲ್ಲಿಧರ್ಮ, ಜಾತಿ, ಪಕ್ಷ ಮೀರಿಯೋಜನೆ ರೂಪಿಸಿದೆ.
ನರೇಂದ್ರ ಮೋಧಿ ಪ್ರಧಾನಿಯಾದ ಬಳಿಕ ದೇಶದ ಮಾನವ ಸಂಪತ್ತು, ಬುದ್ದಿಮತ್ತೆಯನ್ನು ಬಳಸಿಕೊಂಡು ಆರೋಗ್ಯ, ವಿಜ್ಞಾನಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಕೊರೊನಾ ಸಂಧರ್ಭದಲ್ಲಿ ವಿಶ್ವಕ್ಕೆ ವ್ಯಾಕ್ಸಿನ್ ಪೂರೈಸಿದ ಹೆಗ್ಗಳಿಕೆಯನ್ನು ತಂದು, ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.

ನರೇಂದ್ರ ಮೋಧಿಅವರುಆಯು?ನ್‌ಯೋಜನೆಜಾರಿಗೆತಂದಿದ್ದಾರೆ.ಇದರಲ್ಲಿರೂ ೫ ಲಕ್ಷದವರೆಗೆಉಚಿತಚಿಕಿತ್ಸೆಗೆಅವಕಾಶವಿದ್ದು, ಎಲ್ಲರೂಇದರ ಸದುಪಯೋಗಪಡಿಸಿಕೊಳ್ಳಬೇಕು. ಜತೆಗೆಕಡಿಮೆದರಕ್ಕೆಔ?ಧ ಪೂರೈಸುವಜನೌ?ಧಕೇಂದ್ರದ ಲಾಭ ಪಡೆದುಕೊಳ್ಳಬೇಕು ಎಂದರು.

ನಮ್ಮದೇಶದಲ್ಲಿಅಗಾಧವಾದಅರಣ್ಯ, ಗಣಿ, ಮಾನವ ಸಂಪತ್ತಿದೆ.ಆದರೆಎಲ್ಲದರಲ್ಲೂರಾಜಕೀಯ ಮಾಡಿದ್ದರ ಪರಿಣಾಮದೇಶ ಸಂಪೂರ್ಣಅಭಿವೃದ್ದಿ ಸಾಧಿಸಲು ಸಾಧ್ಯವಾಗಿಲ್ಲ.ಒಬ್ಬರು ಮಾಡುವಅಭಿವೃದ್ದಿಯೋಜನೆಯನ್ನುತಡೆಯುವುದೇರಾಜಕೀಯಇಂದುದೇಶದಲ್ಲಿ ಭಾವಿಸಿದ್ದರ ಪರಿಣಾಮವೇ ಯೋಜನೆಗಳ ವಿಳಂಭಕ್ಕೆ ಕಾರಣವಾಗಿದೆ.ಈ ಮನಸ್ಥಿತಿಯಿಂದ ಪಕ್ಷ ಬೇಧ ಮರೆತುಎಲ್ಲರೂ ಹೊರಬರಬೇಕಾದ ಅನಿವಾರ್ಯತೆಯಿದೆಎಂದರು.

ಈ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ ಬೆಳೆಯುವವರ ಸಂಖ್ಯೆ ಹೆಚ್ಚಿದ್ದು, ದರಕಡಿಮೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಈರುಳ್ಳಿ ಸಂಗ್ರಹಿಸಿಡಲು ಅಗತ್ಯವಾದ ಶಿಥಲೀಕರಣ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು. ರೈತರುಆಧುನಿಕತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ಲಾಭ ಗಳಿಸಬೇಕು ಎಂಬ ಉದ್ದೇಶದಿಂದಕೇಂದ್ರ ಮತ್ತುರಾಜ್ಯ ಸರ್ಕಾರ ಹಲವಾರುಯೋಜನೆಜಾರಿಗೆತಂದಿದೆಎಂದರು.

ಸರ್ಕಾರದ ಯೋಜನೆಗಳು ಸಮಾಜದಕಟ್ಟಕಡೆಯ ವ್ಯಕ್ತಿಗೂತಲುಪಿದಾಗ ಮಾತ್ರಅಭಿವೃದ್ದಿಗೆ ನಿಜವಾದಅರ್ಥ ಬರುತ್ತದೆ. ಅಜ್ಜಂಪುರ ಭಾಗದ ಬಹುದಿನಗಳ ಬೇಡಿಕೆಯಾದರೈಲ್ವೆ ನಿಲ್ದಾಣಅಭಿವೃದ್ದಿ, ರೈಲ್ವೆ ಮೇಲ್ಸೇತುವೆ ನಿರ್ಮಾಣ, ಹೆಚ್ಚುವರಿರೈಲು ನಿಲುಗಡೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಅಭಿವೃದ್ದಿ ಮಾಡಿದವರಿಗೆ ಮತ ನೀಡುವ ಮೂಲಕ ಮಾದರಿಕ್ಷೇತ್ರ ನಿರ್ಮಾಣಕ್ಕೆ ಕೈಜೋಡಿಸಿ ಎಂದುಕರೆನೀಡಿದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಯಡಿಯೂರಪ್ಪ ಮತ್ತು ಶೋಭಕರಂದ್ಲಾಜೆಅವರ ಸಹಕಾರದಿಂದ ಬಹುಗ್ರಾಮಕುಡಿಯುವ ನೀರುಯೋಜನೆ ಪೂರ್ಣಗೊಂಡಿದೆ.ಈ ಮೂಲಕ ಅಜ್ಜಂಪುರಜನರ ಬಹುದಿನಗಳ ಬೇಡಿಕೆಈಡೇರಿದಂತಾಗಿದೆಎಂದರು.

ಅಜ್ಜಂಪುರಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದೇವೆ. ಕ್ಷೇತ್ರಾದ್ಯಂತ ಸಿಸಿ ರಸ್ತೆ, ಚರಂಡಿ ನಿರ್ಮಿಸಿದ್ದೇವೆ. ಕೆರೆಗಳಿಗೆ ನೀರು ಪೂರೈಸಿದ್ದೇವೆ. ಈ ಹಿಂದೆ ಪಟ್ಟಣಕ್ಕೆ ಪ್ರಥಮದರ್ಜೆಕಾಲೇಜುಕಟ್ಟಡ ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಶುದ್ದ ನೀರು ನೀಡುವಜಲಜೀವನ್ ಮಿ?ನ್‌ಯೋಜನೆ ಜಾರಿಗೊಳಿಸಿದ್ದೇವೆ. ಅಭಿವೃದ್ದಿ ಕೇವಲ ಮಾತಲ್ಲ, ಅದೊಂದು ಸಂಕಲ್ಪಎಂಬುದನ್ನು ಸಾಭೀತುಪಡಿಸಿದ್ದೇನೆ ಎಂದರು.

ಸ್ತ್ರೀಶಕ್ತಿ ಸಂಘಗಳ ಪರಿಕಲ್ಪನೆತಂದಿದ್ದವರುಅಟಲ್ ಬಿಹಾರಿ ವಾಜಪೇಯಿ. ಪ್ರಸ್ತುತ ಸರ್ಕಾರ, ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ಸ್ವಸಹಾಯ ಸಂಘಗಳಿಗೆ ಸಂಜೀವಿನಿ ಯೋಜನೆ ಮೂಲಕ ಆರ್ಥಿಕ ಸಹಾಯಕ್ಕೆ ಮುಂದಾಗಿದೆ.ತರೀಕೆರೆತಾಲ್ಲೂಕಿನ ೪೭೩ ಮತ್ತುಅಜ್ಜಂಪುರತಾಲ್ಲೂಕಿನ ೪೭೫ ಸಂಘಗಳಿಗೆ ತಲಾ ೧.೫ ಲಕ್ಷ ಸಹಾಯಧನ ನೀಡಲಾಗಿದೆಎಂದರು.

ಅಜ್ಜಂಪುರ ಹೊಸ ತಾಲ್ಲೂಕುಕೇಂದ್ರವಾಗಿದ್ದು, ಎಲ್ಲಾಇಲಾಖೆಯನ್ನುಒಂದೇ ಸೂರಿನಡಿತರುವ ನಿಟ್ಟಿನಲ್ಲಿಗೌರಾಪುರ ಬಳಿ ೧೭ ಎಕರೆಜಾಗಗುರುಸಲಾಗಿದೆ.ಆದರೆ ಸ್ಥಳೀಯರ ವಿರೋಧದಿಂದಾಗಿಕಾಮಗಾರಿ ವಿಳಂಭವಾಗಿದೆ.ಅಜ್ಜಂಪುರ ಭಾಗದಲ್ಲಿಯೇ ಭೂಮಿ ನೀಡಿದರೆ, ಪಟ್ಟಣ ವ್ಯಾಪ್ತಿಯಲ್ಲಿಯೇ ಇಲಾಖೆಗಳ ಕಟ್ಟಡ ನಿರ್ಮಿಸಲಾಗುವುದುಎಂದರು.

ತರೀಕೆರೆಯಲ್ಲಿ ೧೦೦ ಹಾಸಿಗೆಯ ತಾಯಿ-ಮಗು ಆಸ್ಪತ್ರೆ ಮಂಜೂರಾಗಿದ್ದು, ಸಂಕ್ರಾತಿ ವೇಳೆಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅಜ್ಜಂಪುರದಲ್ಲಿ ೧೦೦ ಹಾಸಿಗೆಯ ಆಸ್ಪತ್ರೆಗೆ ಮಂಜೂರಾತಿ ಸಿಕ್ಕಿದ್ದು, ಸ್ಥಳೀಯ ಮಟ್ಟದಲ್ಲಿಜಾಗದಕೊರತೆಯಿಂದಕಾಮಗಾರಿ ವಿಳಂಭವಾಗುತ್ತಿದೆ ಎಂದರು.

ಅಧಿಕಾರದಲ್ಲಿದ್ದ ಸಂಧರ್ಭದಲ್ಲಿಅಭಿವೃದ್ದಿ ಕೆಲಸ ಮಾಡದೇ , ಕೇವಲ ಆಶ್ವಾಸನೆಯಲ್ಲಿ ಕಾಲ ಕಳೆದ ಜನಪ್ರತಿನಿಧಿಗಳು ಚುನಾವಣೆ ಸಮೀಪಿಸುತ್ತಿದ್ದಂತೆಹುಟ್ಟು ಹಬ್ಬಆಚರಣೆ ಸೇರಿದಂತೆ ಸಣ್ಣ ಪುಟ್ಟಕಾರ್ಯಕ್ರಮಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಮತದಾರರೇತಕ್ಕ?ತ್ತರ ನೀಡಲಿದ್ದಾರೆಎಂದರು.

೬೦ ವ?ಅಂಬೇಡ್ಕರ್ ಹೆಸರು ಹೇಳಿ ಮತ ಪಡೆಯುತ್ತಿದ್ದ ಪಕ್ಷ, ತರೀಕೆರೆಯಲ್ಲಿಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಹಿಂದೇಟು ಹಾಕಿತ್ತು.ಆದರೆ ನಾವು ಕಂಚಿನ ಪುತ್ಥಳಿ ಸ್ಥಾಪಿಸುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನುಎತ್ತಿ ಹಿಡಿದಿದ್ದೇವೆ. ಜಾತಿ-ಮತ-ಧರ್ಮ ಮೀರಿ ನಾವು ಕ್ಷೇತ್ರದಲ್ಲಿ ಮಾಡಿರುವಅಭಿವೃದ್ದಿ ಕೆಲಸಗಳನ್ನು ಗುರುತಿಸಿ, ಮತ್ತೊಮ್ಮೆ ನನಗೆ ಕ್ಷೇತ್ರದ ಸೇವೆ ಮಾಡಲು ಆಶೀರ್ವಧಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ, ಸೊಕ್ಕೆಯಿಂದ ಪಟ್ಟಣದವರೆಗೆ ಬೈಕ್‌ರ್ಯಾಲಿ ನಡೆಸಿದರು.ಸಂಸದೆ ಶೋಭಕರಂದ್ಲಾಜೆ ಮತ್ತು ಶಾಸಕ ಡಿ.ಎಸ್. ಸುರೇಶ್‌ಅವರನ್ನು ಮೆರವಣಿಗೆಯಲ್ಲಿ ವೇದಿಕೆವರೆಗೆಕರೆತರಲಾಯಿತು.ಇದಕ್ಕೆಜಾನಪದ ಕಲಾತಂಡಗಳು ಮೆರಗುತುಂಬಿದ್ದವು.ಬಳಿಕ ನಗರೋತ್ಥಾನಯೋಜನೆಯಡಿ ೧.೦೯ ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯಕೆ.ಆರ್. ಆನಂದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಶಂಬೈನೂರುಆನಂದಪ್ಪ, ಜಿಲ್ಲಾಧ್ಯಕ್ಷಕಲ್ಮರಡಪ್ಪ, ಡಿಸಿಸಿ ಬ್ಯಾಂಕ್‌ಉಪಾಧ್ಯಕ್ಷಟಿ.ಎಲ್. ರಮೇಶ್, ನಿರ್ದೇಶಕಗಿರೀಶ್‌ಚೌವ್ಹಾಣ್, ಬಿಜೆಪಿ ಮಂಡಲಾಧ್ಯಕ್ಷ ಪ್ರತಾಪ, ತಾಲ್ಲೂಕು ಪಂಚಾಯಿತಿ ಮಾಜಿಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್, ಪ.ಪಂ. ಮುಖ್ಯಾಧಿಕಾರಿ ನಾಗರತ್ನ, ಮುಖಂಡ ಎ.ಸಿ.ಚಂದ್ರಪ್ಪ, ಸ್ವಾತಂತ್ರ್ಯ ಹೋರಾಟಗಾರಏಕೋರಾಮಸ್ವಾಮಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವಿನಾಯಕ್.ಜಿ.ಹುಲ್ಲೂರು, ಸಹಾಯಕ ಇಂಜಿನಿಯರ್‌ಗಳಾದ ಚಿದಾನಂದಪ್ಪ, ತಹಸಿಲ್ದಾರ್ ವೈ.ವಿಶ್ವೇಶ್ವರ ರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.ಗ್ರಾಮಸ್ಥರು ಉಪಸ್ಥಿತರಿದ್ದರು.

Give first priority to development work

About Author

Leave a Reply

Your email address will not be published. Required fields are marked *

You may have missed