September 20, 2024

Additional school room at a cost of Rs 50 lakh: 50 ಲಕ್ಷ ರೂ ವೆಚ್ಚದಲ್ಲಿ ಹೆಚ್ಚುವರಿ ಶಾಲಾ ಕೊಠಡಿ ಕಾಮಗಾರಿಗೆ ಶಂಕುಸ್ಥಾಪನೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಲಕ್ಯಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ೫೦ ಲಕ್ಷ ರೂ ವೆಚ್ಚದ ಕೊಠಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಸಿ.ಟಿ.ರವಿ ಶಂಕುಸ್ಥಾಪನೆ ನೆರೆವೇರಿಸಿದರು.

ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಲಕ್ಯಾ ಗ್ರಾಮದಲ್ಲಿ ೫೦ ಲಕ್ಷ ರೂ ವೆಚ್ಚದಲ್ಲಿ ನಾಲ್ಕು ಶಾಲಾ ಕೊಠಡಿ ನಿರ್ಮಾಣವಾಗುತ್ತಿದೆ, ಗ್ರಾಮಸ್ಥರ ಬೇಡಿಕೆಯಾದ ರಸ್ತೆ ಮತ್ತು ಕೆರೆ ನೀರು ತುಂಬಿಸುವ ಯೋಜನೆಯನ್ನು ೧೦ ತಿಂಗಳಿನೊಳಗಾಗಿ ಪೂರ್ಣಗೊಳಿಸಿದ್ದು, ಅದರ ಪರಿಣಾಮ ಅಪರೂಪಕ್ಕೋಮ್ಮೆ ತುಂಬುತ್ತಿದ್ದ ಕೆರೆಗಳು ಸಹ ಇಂದು ಜೀವ ತುಂಬುವಂತಾಗಿದೆ, ಸಮೃದ್ಧಿಯ ನೆಲೆಸಬೇಕೆಂಬುದು ನಮ್ಮ ಉದ್ದೇಶವಾಗಿದೆ, ಈ ಭಾಗದಲ್ಲಿ ಮತ್ತಷ್ಟು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.

ಎಲ್ಲಾ ವರ್ಗದ ಸಮುದಾಯಗಳಿಗು ಅನುದಾನವನ್ನು ನೀಡಿ ಆದ್ಯತೆ ಸಿಗುವಂತೆ ಮಾಡಲಾಗಿದೆ, ಯಾವುದೇ ಜಾತಿ ಬೇದ ಮಾಡದೆ, ರಾಜಕೀಯ ವಾತವರಣವನ್ನು ಬದಲಾಯಿಸಿ ಎಲ್ಲರನ್ನು ಒಂದೆಡೆ ಸೇರಿಸುವ ಕೆಲಸವನ್ನು ಮಾಡಿದ್ದೇವೆ, ೨೦೧೮ ರಿಂದ ಇಲ್ಲಿಯ ವರೆಗೂ ಲಕ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೫೦ ಕೋಟಿ ರೂ ವೆಚ್ಚದ ಅಭಿವೃದ್ಧಿಯನ್ನು ಮಾಡಲಾಗಿದೆ, ಪ್ರಜಾಪ್ರಭುತ್ವದಲ್ಲಿ ಜನರಿಗೆ ಬೇಕಾದ ಕೆಲಸವನ್ನು ನಾವು ಮಾಡಿದ್ದೇವೆ, ಇದು ಅಭಿವೃದ್ಧಿ ಮತ್ತು ವಿಶ್ವಾಸದ ಕಾಲ ವಿಶ್ವಾಸವನ್ನು ತುಂಬುವುದರ ಮೂಲಕ ರಾಜಕರಣ ಮಾಡುತ್ತಿದ್ದೇವೆ ಎಂದರು.

ಲಕ್ಯಾ ಗ್ರಾಮಕ್ಕೆ ಅಗತ್ಯ ಇರುವ ಎಂಇಎಸ್‌ಎಸ್ ಸ್ಟೇಷನನ್ನು ಸಚಿವ ಸುನೀಲ್‌ಕುಮಾರ್ ಬಳಿ ಮಾತನಾಡಿ ೧೨ ಕೋಟಿ ರೂ ವೆಚ್ಚದಲ್ಲಿ ಶೀಘ್ರದಲ್ಲಿಯೇ ತೀರ್ಮಾನ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮಾಜಿ ಗ್ರಾಪಂ ಅಧ್ಯಕ್ಷ ಲಕ್ಯಾ ಈಶಣ್ಣ, ಲಕ್ಷ್ಮೀಶಚಾರಿ, ದಿನೇಶ್, ಪಾದಮನೆ ದಿನೇಶ್, ಮಹೇಶ್, ಎಲ್.ವಿ.ರಾಜು, ಬಸವರಾಜು, ಪ್ರಸನ್ನಚಾರಿ, ರಾಜಶೇಖರ್, ರಾಜು, ಬೂತ್ ಅಧ್ಯಕ್ಷರಾದ ಮಹೇಂದ್ರ, ಮಂಜು, ಎಸ್.ಇ ಮೋರ್ಚಾಧ್ಯಕ್ಷ ಪರಶುರಾಮು ಮತ್ತಿತರರು ಉಪಸ್ಥಿತರಿದ್ದರು

Additional school room at a cost of Rs 50 lakh

About Author

Leave a Reply

Your email address will not be published. Required fields are marked *