September 20, 2024

Details of the government’s achievements should be given: ಮನೆ-ಮನೆಗಳಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯ ವಿವರಗಳನ್ನು ನೀಡಬೇಕು – ಸಿ.ಟಿ.ರವಿ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಬೂತ್ ಮಟ್ಟದ ಕಾರ್ಯಕರ್ತರು ಮನೆ-ಮನೆಗೆ ತೆರಳಿ ತಿಳಿಸುವುದರ ಜತೆಗೆ, ೧ ಕೋಟಿ ಬಿಜೆಪಿ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಲಕ್ಯಾ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮನೆ-ಮನೆಗೆ ತೆರಳಿ ಬಿಜೆಪಿಯ ಸ್ಟಿಕ್ಕರ್ ಮತ್ತು ಸಾಧನೆಗಳ ಕರಪತ್ರಗಳನ್ನು ವಿತರಿಸಿ ಮಾತನಾಡಿ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಇರುವ ೫೯ ಸಾವಿರ ಬೂತ್‌ಗಳಲ್ಲಿಯೂ ಬೂತ್ ವಿಜಯ ಅಭಿಯಾನ ಮಾಡುವ ಸಂಕಲ್ಪದಿಂದ ಜ.೨೧ ರಂದು ಹಲವೆಡೆ ಉದ್ಘಾಟನೆಯನ್ನು ಮಾಡಿದ ಪ್ರಯುಕ್ತ ಬೂತ್ ಮಟ್ಟದ ಕಾರ್ಯಕರ್ತರು ಮನೆ-ಮನೆಗಳಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯ ವಿವರಗಳನ್ನು ಹೊಂದಿರುವ ಕರಪತ್ರಗಳನ್ನು ಹಂಚುವುದು ಮತ್ತು ಬೂತ್‌ಗಳ ಹಲವೆಡೆ ಭಾರತೀಯ ಜನತಾ ಪಾರ್ಟಿ ಚಿಹ್ನೆಗಳನ್ನು ಅಂಟಿಸಲಾಯಿತು, ಪ್ರತಿ ಮನೆಗಳಿಗೂ ತೆರಳಿ ಸದಸ್ಯರನ್ನು ನೊಂದಾಯಿಸಿಕೊಳ್ಳಲಾಗುತ್ತಿದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ ಮಾತನಾಡಿ ಇಡೀ ರಾಜ್ಯದಲ್ಲಿ ೫೦ ಸಾವಿರಕ್ಕೂ ಹೆಚ್ಚು ಬೂತ್‌ಗಳನ್ನು ಹೊಂದಿದ್ದು, ವಿಜಯ ಸಂಕಲ್ಪ ಅಭಿಯಾನವನ್ನು ಜ.೨೯ ಒಳಗಾಗಿ ಅದ್ಧೂರಿಯಾಗಿ ನಡೆಸಲಾಗುವುದು, ಕರ್ನಾಟಕದಲ್ಲಿ ೧ ಕೋಟಿ ಸದಸ್ಯರನ್ನು ಹೋಂದುವ ಸಲುವಾಗಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗು ಬೇಟಿ ನೀಡಿ ಕರಪತ್ರವನ್ನು ನೀಡುವುದರ ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮತ್ತು ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿ ರವರ ಮತ್ತು ಶಾಸಕರ ಸಾಧನೆಗಳನ್ನು ಕರಪತ್ರದ ಮೂಲಕ ತಿಳಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಹೋಬಳಿ ಅಧ್ಯಕ್ಷ ಲಕ್ಯಾ ಈಶಣ್ಣ, ಲಕ್ಷ್ಮೀಶಚಾರಿ, ದಿನೇಶ್, ಪಾದಮನೆ ದಿನೇಶ್, ಮಹೇಶ್, ಎಲ್.ವಿ.ರಾಜು, ಬಸವರಾಜು, ಪ್ರಸನ್ನಚಾರಿ, ರಾಜಶೇಖರ್, ರಾಜು, ಬೂತ್ ಅಧ್ಯಕ್ಷರಾದ ಮಹೇಂದ್ರ, ಮಂಜು, ಎಸ್.ಇ ಮೋರ್ಚಾಧ್ಯಕ್ಷ ಪರಶುರಾಮು ಮತ್ತಿತರರು ಉಪಸ್ಥಿತರಿದ್ದರು

Details of the government’s achievements should be given

About Author

Leave a Reply

Your email address will not be published. Required fields are marked *