September 16, 2024

ಸ್ವಚ್ಚ ನಗರ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ – ತಮ್ಮಯ್ಯ

0

????????????????????????????????????

ಚಿಕ್ಕಮಗಳೂರು: ನಗರ ಸ್ವಚ್ಚ ಹಾಗೂ ಸುಂದರೀಕರಣ ಮಾಡುವ ನಿಟ್ಟಿನಲ್ಲಿ ಪರಿಸರ ಆಸಕ್ತಿ ಹೊಂದಿರುವ ವಿವಿಧ ಸಂಘ-ಸಂಸ್ಥೆಗಳ ಸಹಕಾರ ಹಾಗೂ ಸಲಹೆಗಳನ್ನು ಪಡೆದುಕೊಂಡು ಸ್ವಚ್ಚತೆ ಬಗ್ಗೆ ಹೆಚ್ಚು ಗಮನಹರಿಸಲು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ರಾಮೇಶ್ವರ ನಗರದಲ್ಲಿ ಸ್ವಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ ನಗರ ಸುಂದರವಾಗಿಡಲು ಪ್ರಮುಖ ನಿರ್ಧಾರಗಳನ್ನು ಮುಂದಿನ ಸಭೆಗಳಲ್ಲಿ ಕೈಗೊಳ್ಳುವ ಮೂಲಕ ಸ್ವಚ್ಚಂಧ ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ದೇಶದ ಪ್ರಧಾನ ಮಂತ್ರಿಗಳಂತೆ ತಾವೊಬ್ಬ ಜನಸೇವಕನಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರವಾಸಿ ಗರನ್ನು ಹೆಚ್ಚು ಆಕರ್ಷಿಸುವ ಜಿಲ್ಲೆಯಾದ ಚಿಕ್ಕಮಗಳೂರನ್ನು ತಮ್ಮ ಅವಧಿಯೊಳಗೆ ಜನಸಾಮಾನ್ಯರು ನೆನಪಿಟ್ಟು ಕೊಳ್ಳುವ ಶಾಶ್ವತ ಕಾಮಗಾರಿ ರೂಪಿಸಲಾಗುವುದು. ಸಮಾಜದಲ್ಲಿ ಒಳ್ಳೆಯವನಾಗದಿದ್ದರೂ ಪರವಾಗಿಲ್ಲ, ಕೆಟ್ಟ ಸ್ಥಾನವನ್ನು ಪಡೆದುಕೊಳ್ಳದೇ ನಿಸ್ವಾರ್ಥದಿಂದ ಸಾರ್ವಜನಿಕ ಸೇವೆಯಲ್ಲಿ ತೊಡಲಾಗುವುದು ಎಂದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ತಮ್ಮ ಮೊದಲ ಆದ್ಯತೆ ಯಾಗಿದೆ. ಅದಲ್ಲದೇ ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ವಹಿಸುವ ಜೊತೆಗೆ ಇಂತಹ ಕಾಮಗಾರಿಗಳಲ್ಲಿ ಕೆಲವು ಅಮಾಯಕರನ್ನು ಬಳಕೆ ಮಾಡಿಕೊಂಡಿರುವುದು ದುರ್ದೈವ ಎಂದರು.

ಸ್ವಚ್ಚ ಚಾರಿಟಲ್ ಟ್ರಸ್ಟ್ ಅಧ್ಯಕ್ಷೆ ಡಾ|| ಶುಭವಿಜಯ್ ಮಾತನಾಡಿ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ಕಸ ಸಂಗ್ರಹಣೆ, ಗಿರಿಶ್ರೇಣಿಗಳಲ್ಲಿ ಪ್ಲಾಸ್ಟಿಕ್ ಬಾಟಲಗಳ ಹಾವಳಿ ತಪ್ಪಿಸಲು ಚೆಕ್‌ಪೋಸ್ಟ್ ನಿರ್ಮಾಣ ಹಾಗೂ ಕೋಟೆಕೆರೆಯಲ್ಲಿ ಬೆಳಿಗಿನ ಜಾವ ಸಾರ್ವಜನಿಕರು ಸಂಚರಿಸಲು ರಸ್ತೆ ಹಾಗೂ ಸಸಿಗಳನ್ನು ನೆಡುವುದು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮ ರೂಪಿಸಲಾಗಿತ್ತು ಎಂದರು.

ನಂತರ ದಿನಗಳಲ್ಲಿ ಪರಿಸರಕ್ಕೂ ಪೂರಕವಾಗುವ ಕಾರ್ಯಕ್ರಮವನ್ನು ನಗರಸಭಾ ಆಡಳಿತ ಮಂಡಳಿಗೆ ವಹಿಸುವ ಮೂಲಕ ಸರ್ಕಾರಕ್ಕೆ ಹಸ್ತಾಂತರಲಾಯಿತು. ಇದೀಗ ಇಂದಾವರ ಸಮೀಪ ನಗರದ ಅಂಗಡಿ ಮುಂಗಟ್ಟು ಗಳ ಕಸವನ್ನು ಹಾಕುವ ಮೂಲಕ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗುತ್ತಿರುವುದರಿಂದ ಈ ಬಗ್ಗೆ ಶಾಸಕರು ಸೂಕ್ತ ವಹಿಸಿ ಮಾಲಿನ್ಯಮುಕ್ತ ಜಿಲ್ಲೆಯನ್ನಾಗಿ ರೂಪಿಸಬೇಕು ಎಂದರು.

ಟ್ರಸ್ಟ್ ಕಾರ್ಯದರ್ಶಿ ಡಾ|| ಗೀತಾ ವೆಂಕಟೇಶ್ ಬಸವನಹಳ್ಳಿಕೆರೆಯ ಮಧ್ಯಭಾಗದಲ್ಲಿ ಪುತ್ಥಳಿ ನಿರ್ಮಿಸಿ ಅರ್ಧಂಬರ್ಧ ಮಾಡಿ ಅದನ್ನು ತೆರವು ಮಾಡಲಾಗಿದೆ. ಅದಲ್ಲದೇ ಕೆರೆಯನ್ನು ಇದೀಗ ಪೂರ್ಣ ಪ್ರಮಾಣದಲ್ಲಿ ಮುಚ್ಚುವ ಆತಂಕ ಎದುರಾಗಿದ್ದು ಇದನ್ನು ಹೊರತುಪಡಿಸಿ ವಿವಿಧ ಕಡೆಗಳಿಂದ ಆಗಮಿಸುವ ಪಕ್ಷಿಗಳಿಗೆ ತಂಗುವ ಜಾಗವನ್ನಾಗಿ ರೂಪುಗೊಳಿಸಿದರೆ ಇನ್ನಷ್ಟು ಸುಂದರಮಯವಾಗಲಿದೆ ಎಂದು ಅಭಿಪ್ರಾಯಿಸಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ ಪ್ರವಾಸಿಗರ ತವರೂರಾಗಿರುವ ಜಿಲ್ಲೆಗೆ ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ನಗರ ಸೇರಿದಂತೆ ವಿವಿದೆಡೆ ರೂಪಿಸಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ನೂತನ ಶಾಸಕರು ಸಾಮಾಜಿಕ ಪರಿಕಲ್ಪನೆ ಹೊಂದುವುದರ ಮೂಲಕ ನಗರದ ಪ್ರಮುಖ ಕೆರೆಗಳು ಹಾಗೂ ಗಿರಿಪರ್ವತ ಶ್ರೇಣಿಗಳಲ್ಲಿ ಹೆಚ್ಚು ಅಭಿವೃಧ್ದಿ ಕಾಮಗಾರಿಗಳನ್ನು ಪೂರೈಸಲು ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾಧಿಕಾರಿ ಕೆ.ಆರ್.ಶ್ರೀನಿವಾಸ್, ಸ್ವಚ್ಚ ಚಾರಿಟಬಲ್ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಪ್ರದೀಪ್‌ಗೌಡ, ಖಜಾಂಚಿ ಹರಿಣಾಕ್ಷಿ, ನಿರ್ದೇಶಕರುಗಳಾದ ಕೆ.ಕೆ.ಮನುಕುಮಾರ್, ಡಿ.ಹೆಚ್.ನಟ ರಾಜ್, ಸತ್ಯನಾರಾಯಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

A sincere effort in building a clean city

About Author

Leave a Reply

Your email address will not be published. Required fields are marked *