September 19, 2024

ದತ್ತಪೀಠ, ಮುಳ್ಳಯ್ಯಗಿರಿಯ ತಪ್ಪಲಿನಲ್ಲಿ ಕಾಡು ಪ್ರಾಣಿಗಳ ಉಪಟಳ

0

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಾಡು ಪ್ರಾಣಿಗಳ ಭೀತಿ ಶುರುವಾಗಿದೆ. ದತ್ತಪೀಠ, ಮುಳ್ಳಯ್ಯಗಿರಿಯ ತಪ್ಪಿನಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಮೊನ್ನೆ ಹುಲಿ ಕಾಣಿಸಿ ಆಂತಕ ಮೂಡಿಸಿದ್ರೆ ಇಂದು ಕಾಡಾನೆಗಳು ಪ್ರತ್ಯಕ್ಷವಾಗಿ ಕೆಲಕಾಲ ಭಯದ ವಾತಾರಣವನ್ನು ಸೃಷ್ಠಿಮಾಡಿತ್ತು.

ದತ್ತಪೀಠದ ಸಮೀಪ ಎರಡು ಕಾಡಾನೆಗಳು ಕಾಣಿಸಿಕೊಂಡಿರುವುದು ಪ್ರವಾಸಿಗರಲ್ಲಿ ಅತಂಕ ಮೂಡಿಸಿದೆ. ಗಾಳಿಕೆರೆಗೆ ತೆರಳುವ ಮಾರ್ಗದಲ್ಲಿ  ಎರಡು ಕಾಡಾನೆಗಳು ರಸ್ತೆಯಲ್ಲಿ ನಿಂತಿದ್ದವು, ಸ್ಥಳೀಯರ ಯುವಕರು ಹಾಗೂ ಪ್ರವಾಸಿಗರು ಗಮನಿಸಿ ಕೂಗಾಟ ನಡೆಸಿದ್ದರಿಂದ ರಸ್ತೆಯಿಂದ ಶೋಲಾ ಅರಣ್ಯದ ಕಡೆಗೆ ತೆರಳಿದ್ದು ಕೆಲ ಹೊತ್ತು ಅಲ್ಲೇ ಓಡಾಟ ನಡೆಸಿ ನಂತರ ಮರಗಳಿರುವ ಸ್ಥಳಕ್ಕೆ ಆನೆಗಳು ತೆರಳಿದೆ.

ಆನೆಗಳು ಆಹಾರ ಅರಸಿ ಬಂದಿರುವ ಸಾಧ್ಯತೆಯಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೊನ್ನೆ ಮುಳ್ಳಯ್ಯಗಿರಿಯ ಪಂಡರವಳ್ಳಿಯಲ್ಲಿ ಹುಲಿದಾಳಿ ಮಾಡಿ ಕಾರ್ಮಿಕರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಈ ಪ್ರಕರಣದ ಬೆನ್ನಲ್ಲೆ ಇಂದು ಜೋಡಿಕಾಡಾನೆಗಳು ಕಾಣಿಸಿಕೊಂಡು ಕೆಲ ಕಾಲ ಭಕ್ತರು ಹಾಗೂ ಸ್ಥಳೀಯರಿಗೆ ಆತಂಕ ಮೂಡಿಸಿದ ಘಟನೆ ದತ್ತಪೀಠದಲ್ಲಿ ನಡೆದಿದೆ.

ಈ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡ ಉದಾಹರಣೆಗಳು ಬಹಳ ವರ್ಷಗಳಿಂದ ಇರಲಿಲ್ಲ. ಮಳೆ ಆಭಾವ, ಆಹಾರದ ಕೊರತೆ, ಮುಂಗಾರು ಪ್ರಾರಂಭ ವಿಳಂಬವಾಗಿರುವ ಹಿನ್ನೆಲೆಯಲ್ಲಿ ದಟ್ಟರಾಣ್ಯದಿಂದ ಈ ಭಾಗಕ್ಕೆ ವಲಸೆ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.ಪ್ರತ್ಯಕ್ಷದರ್ಶಿ ಬಜರಂಗದಳದ ನಗರ ಸಂಯೋಜಕ ಶ್ಯಾಮ್ ಮಾತನಾಡಿ, ಎರಡು ಆನೆಗಳು ಬಲಿಷ್ಟವಾಗಿದ್ದವು. ನಾವು ಗಾಳಿಕೆರೆ ಮಾರ್ಗದ ರಸ್ತೆಯಲ್ಲಿ ನಿಂತಿದ್ದನ್ನು ನೋಡಿ ಭಯವೂ ಅಗುವಂತಿತ್ತು. ಚಿರಾಟ, ಕೂಗಾಟ ನಡೆಸಿದ್ದರಿಂದ ರಸ್ತೆಯಿಂದ ಕಾಡಿನತ್ತ ತೆರಳಿದೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸುವ ಕಾರ್ಯಕ್ಕೆ ಮುಂದಾಗುವಂತೆ ಮನವಿ ಮಾಡಿದರು.

A wild animal sanctuary in the foothills of Dattapeeth, Mullayyagiri

About Author

Leave a Reply

Your email address will not be published. Required fields are marked *

You may have missed