September 19, 2024

ಆಧ್ಮಾತ್ಮದ ಕಡೆ ಹೆಚ್ಚು ಗಮನಹರಿಸಲು ಯೋಗ, ಧ್ಯಾನ ಮುಖ್ಯ : ತಮ್ಮಯ್ಯ

0
ಬ್ರಹ್ಮಾಕುಮಾರೀಸ್ ಸಂಸ್ಥೆಯ ಸಂಯುಕ್ತಾಶ್ರಯದೊಂದಿಗೆ ಅಂತರರಾಷ್ಟ್ರೀಯ ಅಭಿಯಾನ ಯುವ ಜನತೆಗಾಗಿ- ಸ್ವಾಸ್ಥ್ಯ ಆರೋಗ್ಯ ಮತ್ತು ಕ್ರೀಡೆ ಎಂಬ ಧ್ಯೇಯದೊಂದಿಗೆ ಶಾಂತಿ ನಡಿಗೆ

ಬ್ರಹ್ಮಾಕುಮಾರೀಸ್ ಸಂಸ್ಥೆಯ ಸಂಯುಕ್ತಾಶ್ರಯದೊಂದಿಗೆ ಅಂತರರಾಷ್ಟ್ರೀಯ ಅಭಿಯಾನ ಯುವ ಜನತೆಗಾಗಿ- ಸ್ವಾಸ್ಥ್ಯ ಆರೋಗ್ಯ ಮತ್ತು ಕ್ರೀಡೆ ಎಂಬ ಧ್ಯೇಯದೊಂದಿಗೆ ಶಾಂತಿ ನಡಿಗೆ

ಚಿಕ್ಕಮಗಳೂರು: ಇಂದಿನ ಕಾಲಘಟ್ಟದ ಜನಸಾಮಾನ್ಯರು ಆಧ್ಮಾತ್ಮದ ಕಡೆ ಹೆಚ್ಚು ಗಮನ ಹರಿಸಲು ಯೋಗ, ಧ್ಯಾನ ಮತ್ತು ಶಾಂತಿ ನಡಿಗೆಯ ಹೆಚ್ಚು ಕಾಳಜಿ ವಹಿಸಬೇಕು. ಇದನ್ನು ಪ್ರತಿಯೊಬ್ಬರು ಜೀವನ ದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಬ್ರಹ್ಮಾಕುಮಾರೀಸ್ ಸಂಸ್ಥೆಯ ಸಂಯುಕ್ತಾಶ್ರಯದೊಂದಿಗೆ ಅಂತರರಾಷ್ಟ್ರೀಯ ಅಭಿಯಾನ ಯುವ ಜನತೆಗಾಗಿ- ಸ್ವಾಸ್ಥ್ಯ ಆರೋಗ್ಯ ಮತ್ತು ಕ್ರೀಡೆ ಎಂಬ ಧ್ಯೇಯದೊಂದಿಗೆ ಶಾಂತಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಇಂದಿನ ಯುವಜನಾಂಗವು ಸ್ವಾಸ್ಥ್ಯ ಆರೋಗ್ಯ ಹಾಗೂ ಶಾಂತಿ ನಡಿಗೆಯ ಕಡೆ ಚಿಂತಿಸಬೇಕು. ಭೂಮಿಯಲ್ಲಿ ನಮ್ಮ ಜನ್ಮವು ಯಾಕಾಗಿದೆ, ಮುಂದೆ ಏನಾಗಲಿದೆ ಎಂಬುದನ್ನು ಅರಿಯಲು ಬ್ರಹ್ಮಕುಮಾರೀಸ್ ಸಂಸ್ಥೆ ಉತ್ತಮವಾಗಿ ತಿಳಿಸಿಕೊಡಲಿದೆ. ಜೀವನದಲ್ಲಿ ಒಮ್ಮೆಯಾದರೂ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಆಧ್ಮಾತ್ಮದ ಅರಿವು ಮೂಡಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜೀವನದಲ್ಲಿ ಎಷ್ಟೇ ಆಸ್ತಿ, ಅಧಿಕಾರ ಸಂಪಾದಿಸಿದರೂ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾಮರಸ್ಯ ಇಲ್ಲದಿದ್ದರೆ ವ್ಯರ್ಥವಾದಂತೆ. ಆ ನಿಟ್ಟಿನಲ್ಲಿ ಬ್ರಹ್ಮಕುಮಾರೀಸ್ ಸೇರಿದಂತೆ ಹಲವಾರು ಸಂಘ- ಸಂಸ್ಥೆ ಗಳು ಆಯೋಜಿಸುವ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಬದುಕು ಸುಂದರವಾಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ ಮಾನವ ಸಮೂಹಕ್ಕೆ ಶಾಂತಿ ನೆಲೆಸುವ ನಿಟ್ಟಿನಲ್ಲಿ ಪ್ರಪಂಚ ದಲ್ಲೇ ಭಾರತ ವಿಶೇಷ ಸ್ಥಾನ ಹೊಂದಿದೆ. ಭಾರತೀಯರಲ್ಲಿರುವ ಶಾಂತಿ ಸ್ಥಾಪನೆಯ ಮನೋಭಾವವು ಬೇರೆ ಯಾವ ದೇಶದಲ್ಲಿ ಕಾಣಲು ಸಿಗುವುದಿಲ್ಲ ಎಂದು ತಿಳಿಸಿದರು.

ಸಾವಿರಾರು ವರ್ಷಗಳ ಸಂಸ್ಕೃತಿಯನ್ನು ಹೊಂದಿರುವ ಭಾರತೀಯರಲ್ಲಿ ಗುರುಹಿರಿಯರಿಗೆ ಗೌರವಿಸುವುದು, ಕೌಟುಂಬಿಕ ಪದ್ಧತಿ ಹಾಗೂ ಹಬ್ಬದ ಆಚರಣೆಗಳಲ್ಲಿ ಒಟ್ಟಾಗಿ ಸಂಭ್ರಮಿಸುವುದು ಪ್ರಸ್ತುತ ಯುವಸಮೂಹದಲ್ಲಿ ಕಾಣಿಸುತ್ತಿಲ್ಲ. ಆ ನಿಟ್ಟಿನಲ್ಲಿ ಬ್ರಹ್ಮಕುಮಾರೀಸ್ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದಾಯಕ ಎಂದರು.

ಬ್ರಹ್ಮಾಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಮಾತನಾಡಿ ವಿಶ್ವದಲ್ಲಿ ಶಾಂತಿ ನೆಲೆಸುವ ಸಲುವಾಗಿ ಪ್ರಪಂಚದ ೨೦ ದೇಶಗಳಲ್ಲಿ ಸಂಸ್ಥೆ ವತಿಯಿಂದ ಶಾಂತಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇಂದಿನ ಆಧ್ಮಾತ್ಮದ ಕೊರತೆಯಿಂದ ಯುವಪೀಳಿಗೆಯ ಪರಿಸ್ಥಿತಿ ಅನೇಕ ದುಶ್ಚಟಗಳಿಂದ ಬಲಿಯಾಗುತ್ತಿರುವುದು ತೀವ್ರ ಬೇಸರ ಮೂಡಿಸಿದೆ ಎಂದರು.

ಮುಂದಿನ ಜನಾಂಗಕ್ಕೆ ಸಂಸ್ಕೃತಿ, ಯುವಪೀಳಿಗೆಯನ್ನು ಉಳಿಸುವುದು ಹಾಗೂ ಆಧ್ಮಾತ್ಮದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಲ್ಲಿ ಶಾಂತಿ ಸ್ಥಾಪನೆ ಅತಿಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಶಾಂತಿ ಪಡೆಯಲು ಅವಲಂಬಿಸಿದಷ್ಟು ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಶಾಂತಿ ಮಾರ್ಗದಲ್ಲಿ ಸಾಗಿದರೆ ಮಾತ್ರ ಸಾತ್ವಿಕ ಜೀವನ ನಡೆಸಲು ಸಾಧ್ಯ ಎಂದರು.

ಇದೇ ವೇಳೆ ಶಾಂತಿ ನಡಿಗೆಯಲ್ಲಿ ಕಾರ್ಯಕ್ರಮದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಕಾಲೇ ಜಿನ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಯುವ ಪ್ರತಿಭೆಗಳು ನಗರದ ಐ.ಜಿ.ರಸ್ತೆ ಮೂಲಕ ಹಾದು ಎಂ.ಜಿ.ರಸ್ತೆ ಸಾಗಿ ಪುನಃ ಆಟದ ಮೈದಾನಕ್ಕೆ ವಾಪಸ್ಸಾಗಿ ನಡಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿ ಸಿದರು. ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಆಯುಷ್ ಇಲಾಖೆ ಅಧಿಕಾರಿ ಡಾ|| ಗೀತಾ, ಪ್ರಬೋದಿನಿ ಯೋಗ ಟ್ರಸ್ಟ್ ಮುಖ್ಯಸ್ಥರುಗಳಾದ ಎಂ.ಆರ್.ನಾಗರಾಜ್, ಸುರೇಂದ್ರ, ಜ್ಞಾನರಶ್ಮಿ ಶಾಲೆ ಸಂಸ್ಥಾಪಕ ನಂದಕು ಮಾರ್, ಭಾರತ ಸ್ವಾಭಿಮಾನ್ ಟ್ರಸ್ಟ್ ಮುಖ್ಯಸ್ಥೆ ಶ್ರೀಮತಿ ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.

Yoga and meditation are important to focus more on spirituality

 

About Author

Leave a Reply

Your email address will not be published. Required fields are marked *

You may have missed