September 19, 2024

Taluk Quarterly KDP Meeting at Zilla Panchayat Hall: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ

0
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ

ಚಿಕ್ಕಮಗಳೂರು; ರಾಗಿ ಬೆಂಬಲ ಬೆಲೆ ಯೋಜನೆಯಡಿ ಚಿಕ್ಕಮಗಳೂರು ತಾಲೂಕಿ ನಲ್ಲಿ ೨ಕೋಟಿ ಹಣ ಸರ್ಕಾರದಿಂದ ಬರುವುದು ಬಾಕೀ ಇದೆ. ಹಾಗೇ ಜಿಲ್ಲೆಯಲ್ಲಿ ೮ ಕೋಟಿ ಬಾಕೀ ಇದೆ. ನಾನು ರೈತನ ಮಗ ರೈತರ ಕಷ್ಟಗಳು ನನಗೂ ಗೊತ್ತು. ರೈತರಿಗೆ ದುಡ್ಡು ಬಂದಿಲ್ಲ ಎಂದರೇ ಎಷ್ಟು ಕಷ್ಟವಾಗುತ್ತದೆ. ಇಲ್ಲಿಯವರೆಗೂ ಏನು ಮಾಡುತ್ತೀದ್ದೀರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಪ್ರಶ್ನಿಸಿದರು.

ಬುಧವಾರ ನಗರದ ಜಿ.ಪಂ. ಸಭಾಂಗಣದಲ್ಲಿ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಯಾಕೆ ಹಣ ಬಿಡುಗಡೆಯಾಗಿಲ್ಲ ಕೇಳಿ ಸಮಸ್ಯೆ ಪರಿಹರಿಸಬೇಕು. ಇಲ್ಲವೇ ನಾನೇ ಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು. ಎಸ್.ಎಲ್.ಭೋಜೇಗೌಡ ಮಾತನಾಡಿ, ಸಭೆ ನಡೆದು ೧ವರ್ಷ ಕಳೆದಿದೆ. ಸಮಸ್ಯೆ ಪರಿಹರಿಸಲು ೧ವರ್ಷ ಬೇಕಾ ಎಂದ ಅವರು, ರೈತರ ಕಷ್ಟ ಅಧಿಕಾರಿಗಳಿಗೆ ತಿಳಿದಿಲ್ಲ ಎಂದರು.

ಹಿಂದಿನ ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯ ರಾಜು ಮಲ್ಲೇನಹಳ್ಳಿ ಅವರು ಕುಡಿಯುವ ನೀರಿಗೆ ಬೋರ್ ಕೊರೆಸಿದ್ದರು ವಿದ್ಯುತ್ ಸಂಪರ್ಕ ನೀಡಿಲ್ಲವೆಂಬ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅಧಿಕಾರಿ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಶುಲ್ಕವನ್ನು ಪಾವತಿ ಸಬೇಕಾಗುತ್ತದೆ. ಕಂಪನಿಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ ನಂತರ ವಿದ್ಯುತ್ ನೀಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅಧಿಕಾರಿಯನ್ನು ತರಾಟೆಗೆ ತಗೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಉತ್ತರಿಸಿದರು. ಒಮ್ಮೆ ಕೊಟ್ಟಿದ್ದೇನೆ ಅನ್ನುತ್ತೀರಾ? ಅನುಪಾಲನಾ ವರದಿಯಲ್ಲಿ ಸಂಪರ್ಕ ನೀಡಲಾಗುವುದು ಎನ್ನುತ್ತೀರಾ? ಎಂದು ಭೋಜೇ ಗೌಡ ಪ್ರಶ್ನಿಸಿದ ಅವರು, ನಿವೆಲ್ಲ ಅಧಿಕಾರಿಗಳು ನಿಮ್ಮ ಮೇಲೆ ಜವಬ್ದಾರಿ ಇದೆ. ಅನುಪಾಲನಾ ವರದಿಯನ್ನು ಸರಿಯಾಗಿ ಬರೆಯಿರಿ, ಆಗಿದೆ ಎಂದರೇ ಆಗಿದೆ ಎನ್ನಿ, ಆಗಿಲ್ಲದಿದ್ದರೇ ಆಗಿಲ್ಲ ಎನ್ನಿ ಎಂ ದರು.

ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಚಿಕ್ಕಮಗಳೂರು ತಾಲೂಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಭಿವೃದ್ದಿ ಸಂಸ್ಥೆಯಿಂದ ಅಂಬಳೆ ಕೃಷಿ ಯಂತ್ರಧಾರೆ ಕೇಂದ್ರ, ವರ್ಷ ಅಸೋಸಿಯೇಟ್ಸ್ ಚಿತ್ರದುರ್ಗ ಸಂಸ್ಥೆ ವತಿಯಿಂದ ಲಕ್ಯಾ, ಕಸಬಾ, ಆಲ್ದೂರು ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಎಸ್.ಎಲ್.ಭೋಜೇಗೌಡ ಮಾತನಾಡಿ, ಅನುಪಾಲನಾ ವರದಿ ನಡವಳಿ ಸರಿಯಿಲ್ಲ. ಯಂತ್ರಧಾರೆ ಕೇಂದ್ರದಿಂದ ಎಷ್ಟು ಲಾಭ ಬಂದಿದೆ. ಎಷ್ಟು ನಷ್ಟ ಆಗಿದೆ. ಎಷ್ಟು ರೈತರಿಗೆ ಅನುಕೂಲವಾಗಿದೆ ಎಂಬ ಮಾಹಿತಿ ಇರಬೇಕು ಎಂದು ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು.

ತಹಶೀಲ್ದಾರ್ ವಿನಾಯಕ ಸಾಗರ್ ಮಾತನಾಡಿ, ಅಲ್ಲಂಪುರದಲ್ಲಿನ ಪಿಎಚ್‌ಸಿ ೪ಎಕರೆ ಮಂಜೂರಾಗಿದ್ದು, ಜಾಗ ಒತ್ತುವರಿಯಾಗಿರುವ ಬಗ್ಗೆ ಕಳೆದ ಸಭೆಯಲ್ಲಿ ತಿಳಿಸಲಾಗಿತ್ತು. ಅದರಂತೆ ಸರ್ವೇ ಕಾರ್ಯ ನಡೆಸಿದ್ದು, ಪಿಎಚ್‌ಸಿಗೆ ೪ ಎಕರೆ ಮಂಜೂರಾಗಿದ್ದು, ಸರ್ವೇ ಮಾಡಿದಾಗ ಅಲ್ಲಿ ೪ ಎಕರೆ ಜಾಗ ಇಲ್ಲ. ೨ ಎಕರೆ ೨೦ಗುಂಟೆ ಜಾಗವಿದೆ ಎಂದು ತಿಳಿದು ಬಂದಿದ್ದು, ಸರ್ವೇ ಇಲಾಖೆ ಲಿಖಿತವಾಗಿ ನೀಡಿಲ್ಲ. ಸರ್ವೇ ಇಲಾಖೆ ಸ್ಕೇಚ್ ನೀಡಿದ್ದಾರೆ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಬಾಕೀ ಜಾಗ ಎಲ್ಲಿಗೆ ಹೋಯ್ತು ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತೇನೆ. ನಮ್ಮಗೆ ಸಾರ್ವಜನಿಕರ ಕೆಲಸ ಆಗಬೇಕು. ಸರ್ಕಾರ ಬದಲಾಗಿದೆ ಎಂಬುದು ಅಧಿಕಾರಿಗಳ ಗಮನದಲ್ಲಿ ಇರಲಿ. ನಾವು ಬಂದಿರುವುದು ಜನರ ಕೆಲಸ ಮಾಡಲು ಎಂದು ಮಾತಿನ ಮೂಲಕ ಅಧಿಕಾರಿಗಳ ಕಿವಿ ಹಿಂಡಿದರು.

೨೦೨೧-೨೨ನೇ ಸಾಲಿನಲ್ಲಿ ತಾಲೂಕಿನಲ್ಲಿ ೨೬೫೧ ರೈತರು ಹವಮಾನ ಆಧಾರಿತ ಬೆಳೆ ವಿಮೆ ಮಾಡಿಸಿದ್ದು, ೧೮೧೫ ರೈತರ ಇದರ ಪ್ರಯೋಜನ ಪಡೆದಿದ್ದಾರೆ. ೨೦೨೨-೨೩ನೇ ಸಾಲಿನಲ್ಲಿ ೨೪೬೦ ರೈತರು ವಿಮೆ ಮಾಡಿಸಿದ್ದು ಡಿಸೆಂಬರ್ ತಿಂಗಳಲ್ಲಿ ವಿಮಾ ಮೊತ್ತ ಪಾವತಿಯಾಗಲಿದೆ ಎಂದು ಅಧಿಕಾರಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ವಿಮಾ ಸೌಲಭ್ಯಕ್ಕೆ ಹಿಂದಿನ ಸಾಲಿ ಗಿಂತ ವಿಮಾಧಾರರ ಸಂಖ್ಯೆ ಕಡಿಮೆಯಾಗಿದೆ ಎಂದರೇ, ಸೌಲಭ್ಯದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂಬುದು ಅರ್ಥವಾಗುತ್ತದೆ ಎಂದು ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು.

ಸಭೆಯಲ್ಲಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Taluk Quarterly KDP Meeting at Zilla Panchayat Hall

 

About Author

Leave a Reply

Your email address will not be published. Required fields are marked *

You may have missed