September 19, 2024

Trees should be planted and greenery should be cultivated: ಮರಗಳನ್ನು ನೆಟ್ಟು ಹಸಿರನ್ನು ಬೆಳೆಸಬೇಕು

0
ಭಾರತ ಸೇವಾದಳದ ಜಿಲ್ಲಾಕಚೇರಿಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಭಾರತ ಸೇವಾದಳದ ಜಿಲ್ಲಾಕಚೇರಿಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಚಿಕ್ಕಮಗಳೂರು:  ನಮ್ಮ ಮುಂದಿನ ಪೀಳಿಗೆ ಮಳೆ, ಬೆಳೆ, ಸಮೃದ್ಧವಾಗಿ ನೆಮ್ಮದಿಯಿಂದ ಬದುಕಬೇಕಾದರೆ. ನಾವು ಈಗಿನಿಂದಲೇಗಿಡ ಮರಗಳನ್ನು ನೆಟ್ಟು ಹಸಿರನ್ನು ಬೆಳೆಸಬೇಕು ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಸಲಹೆ ಮಾಡಿದರು.

ನಗರದ ಭಾರತ ಸೇವಾದಳದ ಜಿಲ್ಲಾಕಚೇರಿಆವರಣದಲ್ಲಿ ಬುಧವಾರಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಿಕರು ಪರಿಸರವನ್ನುದೇವರೆಂದು ಪೂಜಿಸುತ್ತಿದ್ದರು.ಗಿಡ ಮರಗಳನ್ನು ನೆಟ್ಟುದಟ್ಟ ಕಾಡುಗಳನ್ನು ಬೆಳೆಸಿದ್ದರು. ಹಾಗಾಗಿ ಆ ಕಾಲದಲ್ಲಿ ಸಕಾಲಕ್ಕೆ ಮಳೆ, ಬೆಳೆಯಾಗಿ ನಾಡು ಸಮೃದ್ಧಿಯಾಗಿತ್ತುಎಂದರು.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಮಿತಿಮೀರಿದದುರಾಸೆ ಮತ್ತು ಸ್ವಾರ್ಥದಿಂದಾಗಿ ಕಾಡುಗಳನ್ನು ಕಡಿದು ನಾಶ ಮಾಡಿದ್ದೇವೆ. ಜಲ ಮೂಲಗಳನ್ನು ಹಸಿರನ್ನು ಇಲ್ಲವಾಗಿಸಿದ್ದೇವೆ.ಇದರಿಂದಾಗಿ ವಾಯು ಮಾಲಿನ್ಯ, ಜಲ ಮಾಲಿನ್ಯ, ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿವೆಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಎಚ್.ನರೇಂದ್ರ ಪೈ, ನಾವು ಈಗಿನಿಂದಲೇ ಗಿಡಮರಗಳನ್ನು ನೆಟ್ಟು ಹಸಿರನ್ನು ಬೆಳೆಸದಿದ್ದರೆ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಸುಂದರ ಹಸಿರು ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂಗಿಡ ಮರಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕುಎಂದು ಕಿವಿಮಾತು ಹೇಳಿದರು.

ಪರಿಸರ ದಿನಾಚರಣೆ ಅಂಗವಾಗಿ ಕಚೇರಿಆವರಣದಲ್ಲಿವಿವಿಧಜಾತಿಯಗಿಡಗಳನ್ನು ನೆಡಲಾಯಿತು.ಇದೇ ವೇಳೆ ಭಾರತ ಸೇವಾದಳದ ಜಿಲ್ಲಾಕಾರ್ಯಕಾರಿ ಸಮಿತಿಯಯೋಜನಾ ಸಭೆ ನಡೆಯಿತು

ಭಾರತ ಸೇವಾದಳದ ಜಿಲ್ಲಾಉಪಾಧ್ಯಕ್ಷ ಬಸವರಾಜಪ್ಪ,ಖಜಾಂಚಿಜಗದೀಶಾಚಾರ್, ಕಾರ್ಯದರ್ಶಿ ಹಂಪಯ್ಯ,ಜಿಲ್ಲಾ ಸಂಘಟಕಚಂದ್ರಕಾಂತ, ತಾಲೂಕುಅಧ್ಯಕ್ಷ ಜಿ.ಶಂಕರ್, ಸದಸ್ಯೆಉಮಾ ಐ.ಬಿ.ಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀಕ್ಷಕಿಅರುಣಕುಮಾರಿ ಉಪಸ್ಥಿತರಿದ್ದರು.

Trees should be planted and greenery should be cultivated

About Author

Leave a Reply

Your email address will not be published. Required fields are marked *

You may have missed