September 19, 2024

Chief Minister appeals: ಬಿಸಿಯೂಟ ತಯಾರಿಕರಿಗೆ ವೇತನ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

0
ಬಿಸಿಯೂಟ ತಯಾರಿಕರಿಗೆ ವೇತನ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಿರಸ್ತೇದಾರ್ ಮನು ಮೂಲಕ ಮನವಿ

ಬಿಸಿಯೂಟ ತಯಾರಿಕರಿಗೆ ವೇತನ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಿರಸ್ತೇದಾರ್ ಮನು ಮೂಲಕ ಮನವಿ

ಚಿಕ್ಕಮಗಳೂರು ಮುಂದಿನ ಜುಲೈ ತಿಂಗಳಿನಲ್ಲಿ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಬಿಸಿಯೂಟ ತಯಾಕರಿಗೆ ವೇತನವನ್ನು ಆರು ಸಾವಿರ ರೂ. ಹೆಚ್ಚಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹ, ಬಿಸಿಯೂಟ ಕಾರ್ಯಕರ್ತೆಯರ ಫೆಡರೇಷನ್ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಈ ಸಂಬಂಧ ಶಿರಸ್ತೇದಾರ್ ಮನು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದ ಫೆಡರೇಷನ್ ಜಿಲ್ಲಾ ಸಮಿತಿ ಕಾರ್ಯಕರ್ತೆಯರು ಬಿಸಿಯೂಟ ತಯಾರಕರಿಗೆ ವೇತನವನ್ನು ಹೆಚ್ಚಿಸುವ ಮೂಲಕ ಜೀವನಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಫೆಡರೇಷನ್ ಜಿಲ್ಲಾಧ್ಯಕ್ಷ ರಘು ಮಾತನಾಡಿ ರಾಜ್ಯ ಮಧ್ಯಾಹ್ನ ಬಿಸಿಯೂಟ ಉಪ ಹಾರ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿ ಅಡಿಗೆ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರಿಗೆ ೨೦೨೩ ಜುಲೈ ತಿಂಗಳಿನಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬಿಸಿಯೂಟ ತಯಾರಕರ ವೇತನವನ್ನು ಹೆಚ್ಚಸಬೇಕೆಂದು ಒತ್ತಾಯಿಸಿದರು.

ರಾಜ್ಯದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಎಐಟಿಯುಸಿ ನಾಯಕರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಬೆಳಗಾವಿಯಲ್ಲಿ ಚರ್ಚಿಸಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದರೆ ಸರ್ಕಾರವು ೬ನೇ ಗ್ಯಾರಂಟಿಯಾಗಿ ಬಿಸಿಯೂಟ ತಯಾರಕರಿಗೆ ಹೀಗಿರುವ ವೇತನವನ್ನು ಬದಲಾಗಿ ೬ ಸಾವಿರ ಹೆಚ್ಚಿಸಲಾಗುವುದು ಪ್ರಚಾರದ ವೇದಿಕೆಯಲ್ಲಿ ಘೋಷಿಸಿದ್ದರು ಎಂದರು.

ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರ ವಹಿಸಿಕೊಂಡು ಪ್ರಣಾಳಿಕೆಯ ಲ್ಲಿ ಆರನೇ ಗ್ಯಾರಂಟಿಯಾಗಿ ಘೋಷಿಸಿದಂತೆ ೨೦೨೩ರ ಜುಲೈ ತಿಂಗಳಲ್ಲಿ ಸರ್ಕಾರವು ಮಂಡಿಸುವ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ವೇತನವನ್ನು ಹೆಚ್ಚಳಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ತಾಲ್ಲೂಕು ಅಧ್ಯಕ್ಷೆ ಇಂದುಮತಿ, ಬೀರೂರು ಅಧ್ಯಕ್ಷೆ ಪುಷ್ಪಾವತಿ, ಕಡೂರು ಅಧ್ಯಕ್ಷೆ ಸ್ವಪ್ನ, ಅಜ್ಜಂಪುರ ಅಧ್ಯಕ್ಷೆ ಸುನಂದ, ಮೂಡಿಗೆರೆ ಅಧ್ಯಕ್ಷೆ ಮಮತ, ಸದಸ್ಯರುಗಳಾದ ಕುಸುಮ, ಶಬೀನಾ, ರುಕ್ಮಿಣಿ, ಭಾಗ್ಯ, ಜ್ಯೋತಿ, ವಿಜಯಮ್ಮ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.

Chief Minister appeals to the Central Government to increase the wages of the manufacturers of hot clothes

About Author

Leave a Reply

Your email address will not be published. Required fields are marked *

You may have missed