September 19, 2024

Chief Minister Siddaramaiah pointed at the central government: ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕೇಂದ್ರ ಸರ್ಕಾರದ ಮೇಲೆ ಬೊಟ್ಟು

0
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಕೈಯಲ್ಲಿ ಆಗದಿರುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಇದು ಇಷ್ಟು ಬೇಗ ಶುರುವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಈಗಲೇ ಆರೋಪ ಮಾಡಲು ಶುರು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಕ್ಕಿ ಕೊಡುತ್ತೀವಿ ನಾಳೆಯಿಂದ ನಿಮ್ಮ ಹೆಸರು ಹಾಕಿಕೊಂಡು ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರ ಕಮಿಟ್ಮೆಂಟ್ ಲೇಟರ್ ಕೊಟ್ಟಿಲ್ಲ, ಕೊಟ್ಟಿದ್ದರೇ ಎಲ್ಲಿದೆ ತೋರಿಸಲಿ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

’ಸುಳ್ಳುರಾಮಯ್ಯ’ ಅಲ್ಲಾ ಅನ್ನೋದಾ ದರೇ, ಕಮಿಟ್ಮೆಂಟ್ ಲೇಟರ್ ತೋರಿಸಲಿ ಎಂದು ಸವಾಲು ಹಾಕಿದ ಅವರು, ಎಫ್‌ಸಿಐ ನಿಮಗೆ ಅಗತ್ಯವಿರುವಷ್ಟು ಅಕ್ಕಿ ಕಳಿಸುತ್ತೇವೆಂದು ಹೇಳಿದ್ದಾರೆಯೇ ಲೇಟರ್ ತೋರಿಸಿ ಎಂದರು.

ಜು.೧ರಿಂದ ಉಚಿತ ಅಕ್ಕಿ ನೀಡುತ್ತೇವೆಂದು ಭಾಷಣದಲ್ಲಿ ಹೇಳಿದ್ದರು. ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವುದನ್ನು ಬಿಟ್ಟು ಬಿಪಿಎಲ್ ಪಡಿತದಾರರ ಖಾತೆಗೆ ಹಣ ಹಾಕಿ ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಹಣ ಕೊಟ್ಟರೇ ಅಕ್ಕಿ ಎಲ್ಲಿ ಬೇಕಾದರೂ ಸಿಗುತ್ತದೆ ಎಂದ ಅವ ರು ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಇಷ್ಟು ಸಣ್ಣ ಐಡಿಯಾ ಹೊಳೆಯು ವುದಿಲ್ಲವೇ ಎಂದರು.

ಕೇಂದ್ರ ಸರ್ಕಾರ ಅಕ್ಕಿ ಕೊಟ್ಟರೇ ತಾನೇ ಕೊಟ್ಟೆ ಎನ್ನುವುದು, ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೇ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಇದು ಸರಿಯಲ್ಲ ರಾಜ್ಯ ಸರ್ಕಾರ ಪಡಿತರದಾರರ ಖಾತೆಗೆ ಹಣ ಹಾಕಲಿ ಅಕ್ಕಿ ಬೇಕು ಎನ್ನುವವರು ಅಕ್ಕಿಕೊಂಡುಕೊಳ್ಳುತ್ತಾರೆ. ರಾಗಿ ಬೇಕು ಎಂದರೇ ಬೆಳೆ ಕೊಳ್ಳುತ್ತಾರೆ. ಅಗತ್ಯವಿರುವುದನ್ನು ಕೊಂಡುಕೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ವಿದ್ಯುತ್ ಬಳಕೆ ದರ ಏರಿಕೆ ಮಾಡಿದ್ದು, ಕೆಇಆರ್‌ಸಿ ತೀರ್ಮಾನ ಹಿಂದೆ ಆಗಿತ್ತು ಹೇಳುತ್ತಿದ್ದಾರೆ. ಹಿಂದೆ ಮುಂದೇ ನೋಡದೆ ಅನುಮತಿ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದ ಅವರು, ಕೆಇಆರ್‌ಸಿ ಪ್ರಸ್ತಾವನೆಯನ್ನು ಬಿಜೆಪಿ ಸರ್ಕಾರದ ಮುಂದೇ ಮಂಡಿಸಿತ್ತು. ಆದರೆ ಅನುಮತಿ ನೀಡಿರಲಿಲ್ಲ ಎಂದರು.

ಸರ್ಕಾರ ಸದ್ದಿಲ್ಲದೆ ಮದ್ಯದ ಬೆಲೆ ಏರಿಕೆ ಮಾಡಿದ್ದಾರೆ. ಆಸ್ತಿ ರಿಜಿಸ್ಟರ್, ಬೈಕ್ ದರ ಹೆಚ್ಚಿಗೆ ಮಾಡಲು ಹೊರಟ್ಟಿದ್ದಾರೆಂಬ ಸುದ್ದಿ ಇದ್ದು, ಇದೆಲ್ಲವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಒಂದು ಕಡೆ ಕಿತ್ತುಕೊಂಡು ಮತ್ತೊಂದು ಕಡೆ ಕೊಟ್ಟಂತೆ ಮಾಡುತ್ತಿದ್ದಾರೆ ಎಂದ ಅವರು ಕೊಟ್ಟಿದ್ದು ಬಾರೀ ಸದ್ದು ಮಾಡುತ್ತಿದೆ. ಕಿತ್ತು ಕೊಂಡಿದ್ದು ಗೊತ್ತಾಗದಂತೆ ಸೌಂಡ್‌ಲೆಸ್ ಎಂದು ವ್ಯಂಗ್ಯವಾಡಿದರು.

Chief Minister Siddaramaiah pointed at the central government

About Author

Leave a Reply

Your email address will not be published. Required fields are marked *

You may have missed