September 19, 2024

CT Ravi is a party man: ಸಿ.ಟಿ.ರವಿ ಪಾರ್ಟಿ ಮ್ಯಾನ್‌, ಅವರಿಗೆ ಅಕ್ಕಿ ವಿತರಣೆ ಬಗ್ಗೆ ಹೇಗೆ ಗೊತ್ತಾಗುತ್ತೆ: ಸಚಿವ ಜಾರ್ಜ್‌

0
ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಸುದ್ದಿಗೋಷ್ಠಿ

ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಸುದ್ದಿಗೋಷ್ಠಿ

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಿಯನ್ನ ನಾವು ಫ್ರೀ ಕೇಳ್ತಿಲ್ಲ, ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಅಂತಿರೋದು. ಎಫ್‌ಸಿಐ ಅವರೇ ಹೇಳಿದ್ದಾರೆ, ಸ್ಟಾಕ್‌ ಇದೆ ಕೊಡ್ತೀವಿ ಅಂತ ಎಂದು ಹೇಳಿದರು. ಅಕ್ಕಿ ವಾಪಸ್‌ ಹೋಗಿದೆ ಅಲ್ಲಾ, ಕೊಳೆಯಲು ಬಿಟ್ಟಿದ್ದೀರಾ, ಸಿ.ಟಿ.ರವಿ ಅವರೇ, ಅಕ್ಕಿ ಇದೆ ಕೊಡ್ತೀವಿ ಅಂತ ಅವರೇ ಲೆಟರ್‌ ಬರೆದು ಕೊಟ್ಟಿದ್ದಾರೆ. ಪಾಪ, ಸಿ.ಟಿ.ರವಿ ಅವರಿಗೆ ಅದೆಲ್ಲಾ ಗೊತ್ತಾಗುತ್ತಾ, ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ಛೇಡಿಸಿದರು. ಅಕ್ಕಿಗಾಗಿ ಸಿಎಂ, ಸಚಿವ ಮುನಿಯಪ್ಪ ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಕಿ ಇರೋದೆ ಬಡವರಿಗೆ, ದುಡ್ಡು ಕೊಡಿ ಅಂದ್ರೆ ಹೇಗೆ. ಜನರಿಗೆ ಅಕ್ಕಿ ಬೇಕಾಗಿರೋದು, ದುಡ್ಡಲ್ಲ ಎಂದು ಸಿ.ಟಿ. ರವಿಗೆ ಟಾಂಗ್‌ ಕೊಟ್ಟರು.
ಬಿಜೆಪಿಯವರ ಕೆಲಸವೇ ವಿರೋಧ ಮಾಡೋದು, ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧ ವ್ಯಕ್ತಪಡಿಸೋದು ಅವರ ಕೆಲಸ. ಅವರು ಪ್ರತಿ ಪಕ್ಷ ಅಲ್ಲ, ವಿರೋಧ ಪಕ್ಷ ಎಂದು ಸಚಿವ ಜಾರ್ಜ್‌ ಹೇಳಿದರು. ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು ಬಲವಂತವಾಗಿ, ಆಶ್ವಾಸನೆ ಕೊಟ್ಟು ಮತಾಂತರ ಮಾಡೋದು ತಪ್ಪು, ಹಳೇ ಕಾಯ್ದೆಯೇ ಇದೆ ಎಂದ ಅವರು, ಆರೋಪ ಮಾಡಿದವರು ಸಾಭೀತು ಪಡಿಸಬೇಕು. ಆರೋಪ ಮಾಡುವವರು ಸಾಕ್ಷಿ ಕೊಟ್ಟು ಹೇಳಬೇಕು. ನನ್ನ ಮೇಲೆ ಆರೋಪ ಮಾಡಿದ್ರೆ ನಾನೇ ಸಾಬೀತು ಮಾಡ್ಬೇಕಾ. ಇದು, ಯಾವ ಕಾನೂನಿನಲ್ಲಿ ಇದೆ ಈ ರೀತಿ ತುಂಬಾ ತಪ್ಪು ಮಾಡಿದ್ದಾರೆ, ನಾವು ಸರಿ ಮಾಡ್ತೀವಿ ಎಂದರು. ಇಷ್ಟುದಿನ ಇದ್ರಲ್ಲ, ಹೊಸದಾಗಿ ಏನು ಕಂಡು ಹಿಡಿದಿದ್ದಾರೆ, ನಮ್ಮ ಜವಾಬ್ದಾರಿ ಇದೆ. ಎಲ್ಲರಿಗೂ ಸರಿ ಆಗುವ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ಮಾತನಾಡಿ, ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮ ಭೂ ಕಂದಾಯಕ್ಕಾಗಿ ಕಲಂ 94ಎ ನಮೂನೆ 50ರಡಿ 65,087 ಅರ್ಜಿ ಗಳು ಸ್ವೀಕೃತವಾಗಿವೆ. ಇವುಗಳಲ್ಲಿ 13,975 ಅರ್ಜಿಗಳು ಮಂಜೂರಾಗಿದ್ದು, 13,722 ಪ್ರಕರಣಗಳಿಗೆ ಸಾಗುವಳಿ ಚೀಟಿ ನೀಡಲಾಗಿದೆ. 248 ಜನರಿಗೆ ಸಾಗುವಳಿ ಚೀಟಿ ನೀಡಲು ಬಾಕಿ ಇದ್ದು, 13,642 ಖಾತೆ ದಾಖಲಿಸಿದ್ದು, 80 ಖಾತೆ ದಾಖಲಿಸಲು ಬಾಕಿ ಇವೆ ಅಲ್ಲದೇ, 94ಬಿ ನಮೂನೆ 53ರಡಿ 77,178 ಅರ್ಜಿಗಳು ಸ್ವೀಕೃತವಾಗಿವೆ. 14,852 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 14,146 ಜನರಿಗೆ ಸಾಗುವಳಿ ಚೀಟಿ ನೀಡಿದ್ದು, 706 ಸಾಗುವಳಿ ಚೀಟಿ ನೀಡಲು ಬಾಕಿ ಇದೆ. 12,615 ಖಾತೆ ದಾಖಲಿಸಿದ್ದು, 1,531 ಖಾತೆ ದಾಖಲಿಸಲು ಬಾಕಿ ಇದೆ ಹಾಗೂ 94ಎ (4) ನಮೂನೆ 57ರಡಿ 1,14,266 ಅರ್ಜಿಗಳು ಸ್ವೀಕೃತವಾಗಿದ್ದು, 197 ಪ್ರಕರಣಗಳು ಈಗಾಗಲೇ ಮಂಜೂರಾಗಿದ್ದು, 142 ಜನರಿಗೆ ಸಾಗುವಳಿ ಚೀಟಿ ನೀಡಿದೆ, 55 ಜನರಿಗೆ ಸಾಗುವಳಿ ಚೀಟಿ ನೀಡುವುದು ಬಾಕಿ ಇದೆ, 125 ಖಾತೆ ದಾಖಲಿಸುವ ಪ್ರಕರಣಗಳಾಗಿವೆ, 17 ಪ್ರಕರಣಗಳು ಖಾತೆ ದಾಖಲಾತಿಗೆ ಬಾಕಿ ಇವೆ ಎಂದು ವಿವರಿಸಿದರು.

CT Ravi is a party man

About Author

Leave a Reply

Your email address will not be published. Required fields are marked *

You may have missed