September 19, 2024

District level officials meeting: ಅಮೃತ ಕುಡಿಯುವ ನೀರು-ಒಳಚರಂಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

0
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

ಚಿಕ್ಕಮಗಳೂರು: ನಗರದಲ್ಲಿ ಅಮೃತ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಮೃತ್ ಕುಡಿಯುವ ನೀರು ಒಳಚರಂಡಿ ಕಾಮಗಾರಿಗಳು ಪ್ರಾರಂಭವಾಗಿ ತುಂಬಾ ವರ್ಷಗಳಾದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿರುವುದಿಲ್ಲ, ಕಾಮಗಾರಿಗಳ ವಿಳಂಬಕ್ಕೆ ಮಾಹಿತಿ ಪಡೆದ ಅವರು ಸಮಸ್ಯೆ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ ಅವರು ಪೈಪ್ ಲೈನ್ ಆಳವಡಿಸುವ ಸಂದರ್ಭದಲ್ಲಿ ರಸ್ತೆಗಳಿಗೆ ಹಾನಿಯಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರಿಂದ ಹಾನಿಯಾಗಿರುವ ರಸ್ತೆಗಳನ್ನು ದುರಸ್ತಿ ಪಡಿಸಲು ಕ್ರಮವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳಿಗೆ ಆಸ್ಪದವಾಗದಂತೆ ಕೆಲಸ ನಿರ್ವಹಿಸಿ ಎಂದರು.

ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮ ಭೂಕಂದಾಯಕ್ಕಾಗಿ ಕಲಂ ೯೪ಎ ನಮೂನೆ ೫೦ರಡಿ ೬೫,೦೮೭ ಅರ್ಜಿಗಳು ಸ್ವೀಕೃತವಾಗಿವೆ, ಇವುಗಳಲ್ಲಿ ೧೩,೯೭೫ ಅರ್ಜಿಗಳು ಮಂಜೂರಾಗಿದ್ದು, ೧೩,೭೨೨ ಪ್ರಕರಣಗಳಿಗೆ ಸಾಗುವಳಿ ಚೀಟಿ ನೀಡಲಾಗಿದೆ. ೨೪೮ ಜನರಿಗೆ ಸಾಗುವಳಿ ಚೀಟಿ ನೀಡಲು ಬಾಕಿಯಿದ್ದು, ೧೩,೬೪೨ ಖಾತೆ ದಾಖಲಿಸಿದ್ದು, ೮೦ ಖಾತೆ ದಾಖಲಿಸಲು ಬಾಕಿ ಇವೆ ಅಲ್ಲದೇ, ೯೪ಬಿ ನಮೂನೆ ೫೩ರಡಿ ೭೭,೧೭೮ ಅರ್ಜಿಗಳು ಸ್ವೀಕೃತವಾಗಿದ್ದು, ೧೪,೮೫೨ ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ, ೧೪,೧೪೬ ಜನರಿಗೆ ಸಾಗುವಳಿ ಚೀಟಿ ನೀಡಲಾಗಿದ್ದು, ೭೦೬ ಸಾಗುವಳಿ ಚೀಟಿ ನೀಡಲು ಬಾಕಿ ಇದೆ, ೧೨,೬೧೫ ಖಾತೆ ದಾಖಲಿಸಿದ್ದು, ೧,೫೩೧ ಖಾತೆ ದಾಖಲಿಸಲು ಬಾಕಿ ಇದೆ ಹಾಗೂ ೯೪ಎ (೪) ನಮೂನೆ ೫೭ರಡಿ ೧,೧೪,೨೬೬ ಅರ್ಜಿಗಳು ಸ್ವೀಕೃತವಾಗಿದ್ದು, ೧೯೭ ಪ್ರಕರಣಗಳು ಈಗಾಗಲೇ ಮಂಜೂರಾಗಿದ್ದು, ೧೪೨ ಜನರಿಗೆ ಸಾಗುವಳಿ ಚೀಟಿ ನೀಡಿದೆ, ೫೫ ಜನರಿಗೆ ಸಾಗುವಳಿ ಚೀಟಿ ನೀಡುವುದು ಬಾಕಿ ಇದೆ, ೧೨೫ ಖಾತೆ ದಾಖಲಿಸುವ ಪ್ರಕರಣಗಳಾಗಿವೆ, ೧೭ ಪ್ರಕರಣಗಳು ಖಾತೆ ದಾಖಲಾತಿಗೆ ಬಾಕಿ ಇವೆ ಎಂದರು.

ಭೂ ಕಂದಾಯ ಕಲಂ ೯೭ ಸಿಯಡಿ ಸರ್ಕಾರಿ ಭೂಮಿಯಲ್ಲಿ ಅನಧೀಕೃತವಾಗಿ ವಾಸದ ಮನೆ ನಿರ್ಮಾಣ ಮಾಡಿಕೊಂಡಿದ್ದು ಇವುಗಳ ಸಕ್ರಮಕ್ಕಾಗಿ ೬೮,೪೯೬ ಅರ್ಜಿಗಳು ಸ್ವೀಕೃತವಾಗಿದೆ, ೨೧,೪೩೦ ಪ್ರಕರಣಗಳು ಮಂಜೂರಾಗಿದ್ದು, ವಿವಿಧ ಕಾರಣಗಳಿಗಾಗಿ ೨೮,೯೪೫ ಅರ್ಜಿಗಳು ತಿರಸ್ಕೃತಗೊಂಡಿವೆ. ೧೯,೯೯೩ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗಿದೆ. ೧,೪೩೭ ಹಕ್ಕು ಪತ್ರ ನೀಡಲು ಬಾಕಿ ಇದ್ದು ಕ್ರಮವಹಿಸುವಂತೆ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರುಗಳಿಗೆ ನಿರ್ದೇಶನ ನೀಡಲಾಗಿದೆ ಹಾಗೂ ಭೂ ಕಂದಾಯ ಕಾಯಿದೆ ಕಲಂ ೯೪ ಸಿಸಿಯಡಿ ೨,೪೬೫ ಅರ್ಜಿಗಳು ಬಂದಿದ್ದು, ೨೪೮ ಪ್ರಕರಣಗಳಿಗೆ ಮಂಜೂರಾತಿ ನೀಡಲಾಗಿದೆ. ೧,೩೩೮ ಅರ್ಜಿಗಳು ತಿರಸ್ಕೃತವಾಗಿದ್ದು, ೨೨೫ ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ೨೩ ಜನರಿಗೆ ಹಕ್ಕು ಪತ್ರ ನೀಡಲು ಬಾಕಿ ಇದೆ ಎಂದು ತಿಳಿಸಿದ ಅವರು ಸಾರ್ವಜನಿಕ ಉದ್ದೇಶಕ್ಕಾಗಿ ಜಿಲ್ಲೆಯಲ್ಲಿ ೪೩೦.೨೫ ಎಕ್ಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಕುದುರೆಮುಖ ಅಧಿಸೂಚಿತ ಪ್ರದೇಶ ಸಮಿತಿಯ ನಿರಾಶ್ರಿತರ ಪುರ್ನವಸತಿ ಯೋಜನೆಯಡಿ ೧೬೩ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಕಳಸ ತಾಲ್ಲೂಕು ಮಾವಿನಕೆರೆ ಗ್ರಾಮದ ಸರ್ವೇ ನಂ ೮೫ ರಲ್ಲಿ ೫ ಎಕ್ಕರೆ ಪ್ರದೇಶದಲ್ಲಿ ೧೯೩ ನಿವೇಶನಗಳನ್ನು ರಚಿಸಲು ಉದ್ದೇಶಿಸಿದ್ದು ೫,೭೯ ಸಾವಿರ ರೂಗಳು ನಿವೇಶನ ರಚನೆಗಾಗಿ ಅನುದಾನ ಬಿಡುಗಡೆಯಾಗಿದೆ ಉದ್ದೇಶಿತ ಪ್ರದೇಶದ ಭೌಗೋಳಿಕ ಸ್ಥಿತಿಯಂತೆ ನಿವೇಶನ ರಚಿಸಲು ಅನುದಾನ ಸಾಕಾಗಾದ ಕಾರಣ ರಾಜೀವ್ ಗಾಂಧಿ ವಸತಿ ನಿಗಮದಿಂದ ರೂ. ೪೫,೧೦,೦೦೦ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದರೆ ಈ ಮೊತ್ತ ಬಿಡುಗಡೆ ಮಾಡಲು ಅವಕಾಶವಿಲ್ಲವೆಂದು ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರಸ್ತಾವನೆಯನ್ನು ಹಿಂದಿರುಗಿಸಿರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತಗಳಿಗೆ ಆಸ್ಪದವಾಗದಂತೆ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು, ೨೦೧೯ರಲ್ಲಿ ಸಂಭವಿಸಿದ ಮಳೆ ಹಾನಿಗೆ ಮೂಡಿಗೆರೆ, ಶೃಂಗೇರಿ ತಾಲ್ಲೂಕುಗಳಲ್ಲಿ ಮನೆ, ಜಮೀನು ಕಳೆದು ಕೊಂಡ ಸಂತ್ರಸ್ತರಿಗೆ ನೆರವು ನೀಡಬೇಕು, ಮೂಡಿಗೆರೆ, ಜಾಗರ ಕಸಬಾ, ಚಿಕ್ಕಮಗಳೂರು ಕಸಬಾ, ಶಿರವಾಸೆ ಕಸಬಾ, ಹುಲವತ್ತಿ ಗ್ರಾಮಗಳಲ್ಲಿ ತುಂಬಾ ಮಳೆಯಾಗುತ್ತದೆ ಈ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ವಿದ್ಯುತ್ ಅಡಚಣೆಯಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರುಗಳಾದ ಹೆಚ್.ಡಿ. ತಮ್ಮಯ್ಯ, ಶ್ರೀನಿವಾಸ್, ನಯನಾ ಮೋಟಮ್ಮ, ಆನಂದ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜಿ. ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಭದ್ರಾ ಹುಲಿ ಸಂರಕ್ಷಿತದ ನಿರ್ದೇಶಕ ಪ್ರಭಾಕರನ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕ್ರಾಂತಿ, ನಿಲೇಶ್ ಸಿಂಧೆ, ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ, ಉಪವಿಭಾಗಾಧಿಕಾರಿಗಳಾದ ಹೆಚ್.ಡಿ. ರಾಜೇಶ್, ಸಿದ್ಧಲಿಂಗರೆಡ್ಡಿ ಮುಂತಾದವರಿದ್ದರು.

District level officials meeting

 

About Author

Leave a Reply

Your email address will not be published. Required fields are marked *

You may have missed