September 19, 2024

Re-conversion should be done: ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು

0
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

ಚಿಕ್ಕಮಗಳೂರು: ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು, ದೇಶ, ಹಿಂದೂ ಸಮಾಜವನ್ನ ಉಳಿಸಿಕೊಳ್ಳಲು ಅನಿವಾರ್ಯವಾಗಿ ಮಹಾಪಂಚಾಯಿತ್ ಕರೆಯಬೇಕು ಮಾಜಿ ಶಾಸಕ ಸಿ.ಟಿ.ರವಿ ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಮಠಾಧೀಶರು, ಸಮಾಜದ ಮುಖಂಡರು, ಜಗದ್ಗುರುಗಳು ಸನ್ಯಾಸಿಗಳ ಮಹಾಪಂಚಾಯತ್ ಕರೆಯಬೇಕು. ನಮ್ಮನ್ನ ನಾವು ಹಾಗೂ ದೇಶದ ರಕ್ಷಣೆ ಮಾಡಿಕೊಳ್ಳಲು ಸ್ವರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು.

ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡಬೇಕೆಂಬುದು ಕಾಂಗ್ರೆಸ್ ಉದ್ದೇಶವಾಗಿದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನ ರದ್ದು ಮಾಡುವುದು ರೈತರನ್ನ ಉದ್ದಿಮೆದಾರರಾಗುವ ಅವಕಾಶವನ್ನ ತಪ್ಪಿಸುತ್ತೆ. ರೈತರಿಗೆ ಸತ್ಯದ ಅರಿವಾಗುವ ಕಾಲ ದೂರ ಇಲ್ಲ. ಇದರ ಅಡ್ಡ ಪರಿಣಾಮ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ. ಆಗ ಕಾಂಗ್ರೆಸ್ ಕೂಡ ಅಡ್ಡಡ್ಡ ಮಲಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೃಷಿ ಕಾಯ್ದೆ ವಾಪಸ್  ಪಡೆದಿರುವ ಸರ್ಕಾರ ಕ್ರಮದ ಬಗ್ಗೆ ಮಾತನಾಡಿ ರೈತರನ್ನ ಹೇಗೆ ದಿಕ್ಕು ತಪ್ಪಿಸುತ್ತಿದ್ದಾರೆ, ಹೇಗೆ ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ರೈತರಿಗೆ ಅರಿವಾಗುತ್ತೆ.

ರೈತ ತಾನು ಬೆಳೆದ ಬೆಳೆಗೆ ಎಲ್ಲಿ ಹೆಚ್ಚು ಬೆಲೆ ಸಿಗುತ್ತೋ ಅಲ್ಲೇ ಮಾರಾಟ ಮಾಡಬಹುದಿತ್ತು. ಮುಕ್ತ ಮಾರಾಟಕ್ಕೆ ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಅವಕಾಶವಿದ್ದು, ಬಿಜೆಪಿ ರೈತರನ್ನ ದಲ್ಲಾಳಿಗಳ ಕಪಿಮುಷ್ಠಿಯಿಂದ ಮುಕ್ತ ಮಾಡಿತ್ತು. ಆದರೆ, ಕಾಂಗ್ರೆಸ್ ಈಗ ಮತ್ತೆ ರೈತರನ್ನ ದಲ್ಲಾಳಿಗಳ ಕಪಿಮುಷ್ಟಿಗೆ ಕೊಡುತ್ತಿದೆ ಎಂದು ಕಿಡಿಕಾರಿದ್ದಾರೆ. ರೈತ ತಾನು ಬೆಳೆದ ಬೆಳೆಯನ್ನ ತನ್ನ ಹೊಲ, ಅಹಮದಾಬಾದ್, ಲಕ್ನೋ, ತಿರುವನಂತಪುರಂ ಎಲ್ಲಿ ಹೆಚ್ಚು ಬೆಲೆ ಇರುತ್ತದೆಯೋ ಅಲ್ಲೇ ಮಾರಬಹುದಿತ್ತು. ಗ್ರಾಹಕರ ಸಂಘಟನೆಗಳಿಗೂ ನೇರವಾಗಿ ಸರಬರಾಜು ಮಾಡುವ ಅವಕಾಶವಿತ್ತು. ಈಗ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಿದರೆ ರೈತರು ಲೈಸೆನ್ಸ್ಡ್ ದಲ್ಲಾಳಿಗಳಿಗೆ ಮಾರಬೇಕು. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ, ಇಂದಲ್ಲ ನಾಳೆ ರೈತರಿಗೆ ಸತ್ಯದ ಅರಿವಾಗುತ್ತೆ ಎಂದಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಜೊತೆ ರಾಹುಲ್ ಗಾಂಧಿಯ ಒಪ್ಪಂದ ದೇಶಭಕ್ತಿಗೆ ವಿರೋಧದ ಒಪ್ಪಂದ ಎಂದು ಅನುಮಾನ ಕಾಡುತ್ತಿದೆ. ಯಾಕಂದ್ರೆ, ಭಾರತ್ ತೆರೇ ತುಕ್ಕುಡೆ ಹೂಂಗೆ ಇನ್ಸಾ ಅಲ್ಲಾ ಅಂತ ಘೋಷಣೆ ಕೂಗಿದ ತುಕಡೆ ಗ್ಯಾಂಗಿಗೆ ಬೆಂಬಲ ಕೊಡ್ತಾರೆ ಆದ್ರೆ, ದೇಶಭಕ್ತಿಯ ಪ್ರೇರಣೆಯಿಂದ ಕೂಡಿದ ಪಾಠವನ್ನು ಹಿಂದೆ ತೆಗೆಯುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿರುವ ಸರ್ಕಾರದ ಕ್ರಮ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸಿಗರಿಗೆ ದೇಶಭಕ್ತಿ ಅಂದರೆ ಅಲರ್ಜಿ ಅನ್ನೋದು ಸ್ಪಷ್ಟವಾಗುತ್ತೆ. ನಾವು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿರೋ ಸರ್ಕಾರದ ವಿರುದ್ಧ ಅದೇ ಪಠ್ಯವನ್ನು ಜನರ ಮುಂದೆ ಇಡುತ್ತೇವೆ. ಅದರಲ್ಲಿ ಏನು ತಪ್ಪು ಇದೆ ಎಂದು ತಪ್ಪನ್ನ ಹುಡುಕಲು ಜನರನ್ನ ಕೇಳುತ್ತೇವೆ ಎಂದಿದ್ದಾರೆ.

ಚಕ್ರವರ್ತಿ ಸೂಲಿಬೆಲೆ, ಭಗತ್ ಸಿಂಗ್-ಸುಖದೇವ್-ರಾಜಗುರು ಬಗ್ಗೆ ದೇಶಭಕ್ತಿ ಪ್ರೇರಿತ ಲೇಖನ ಬರೆದಿದ್ದರು. ಕಾಂಗ್ರೆಸಿಗೆ ಅಂಬೇಡ್ಕರ್ ಅವರನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಭಾವಿಸಿದ್ದೆ. ಆದರೆ, ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಕಂಡರು ಆಗಲ್ಲ ಅನ್ನೋದು ಸ್ಪಷ್ಟವಾಗಿದೆ. ಕಾಂಗ್ರೆಸ್ಸಿಗೆ ಯಾವುದೇ ಕ್ರಾಂತಿಕಾರಿಗಳನ್ನ ಕಂಡರೂ ಆಗೋದಿಲ್ಲ. ಕಾಂಗ್ರೆಸ್ ತೆಗೆದಿರುವುದು ಕ್ರಾಂತಿಕಾರಿಗಳ ಪಾಠ. ಲೇಖಕರು ಚಕ್ರವರ್ತಿ ಸೂಲೆಬೆಲೆ. ಅದರಲ್ಲಿ ಇದ್ದದ್ದು ಚಕ್ರವರ್ತಿ ಸೂಲೆಬೆಲೆ ಅವರ ಜೀವನದ ಪಠ್ಯ ಅಲ್ಲ. ಕಾಂಗ್ರೆಸಿಗೆ ಅಂಬೇಡ್ಕರ್ ಅವರನ್ನ ಕಂಡರೂ ಆಗುತ್ತಿರಲಿಲ್ಲ. ಭಗತ್ ಸಿಂಗ್, ರಾಜ್ಗುರು, ಸುಖದೇವ್ ಅವರನ್ನೂ ಕಂಡರೂ ಆಗುತ್ತಿಲ್ಲ. ಅಂದರೆ, ಕಾಂಗ್ರೆಸ್ಸಿಗೆ ಕ್ರಾಂತಿಕಾರಿಗಳನ್ನ ಕಂಡರೆ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿ, ಅಂಬೇಡ್ಕರ್ ಬದುಕಿದ್ದಾಗಲೂ ವಿರೋಧ ಮಾಡಿದರು. ಚುನಾವಣೆಯಲ್ಲಿ ಸೋಲಿಸಿ, ಸತ್ತಾಗಲು ಅವಮಾನಿಸಿದರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

Re-conversion should be done

About Author

Leave a Reply

Your email address will not be published. Required fields are marked *

You may have missed