September 19, 2024

Congratulations to the MLA from the residents of Vikasnagar barangay: ವಿಕಾಸನಗರದ ಬಡಾವಣೆಯ ನಿವಾಸಿಗಳಿಂದ ಶಾಸಕರಿಗೆ ಅಭಿನಂದನೆ

0
ವಿಕಾಸನಗರದ ಬಡಾವಣೆಯ ನಿವಾಸಿಗಳಿಂದ ಶಾಸಕರಿಗೆ ಅಭಿನಂದನೆ

ವಿಕಾಸನಗರದ ಬಡಾವಣೆಯ ನಿವಾಸಿಗಳಿಂದ ಶಾಸಕರಿಗೆ ಅಭಿನಂದನೆ

ಚಿಕ್ಕಮಗಳೂರು: ವಿಕಾಸನಗರದ ಬಡಾವಣೆಯ ನಿವಾಸಿಗಳಿಗೆ ತಾವು ನಗರಸಭಾ ಅಧ್ಯಕ್ಷರಾದ ಸಮಯದಲ್ಲಿ ಹಲವು ಜನಪರ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದ್ದು ಮುಂದಿನ ದಿನಗಳಲ್ಲೂ ಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ವಿಕಾಸನಗರ ಕ್ಷೇಮಾಭಿವೃಧ್ದಿ ಸಂಘ ಹಾಗೂ ಬಡಾವಣೆಯ ನಿವಾಸಿಗಳಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಅವರು ಮಾತನಾಡಿ ಅಂದಿನ ಸಮಯದಲ್ಲಿ ಬಡಾವಣೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು ಎಂದರು.

ಇದೀಗ ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿ ಅತಿಹೆಚ್ಚು ಜವಾಬ್ದಾರಿಯನ್ನು ಮತದಾರರು ನೀಡಿದ್ದು ಮುಂದೆ ಎಲ್ಲಾ ಸಮುದಾಯದವರನ್ನು ಸಾಮರಸ್ಯದಿಂದ ತೆಗೆದುಕೊಳ್ಳುವ ಮೂಲಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಪಂದಿಸುವ ಕಾರ್ಯದಲ್ಲಿ ತೊಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಬ್ಬ ಜನಸಾಮಾನ್ಯರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಸೂಚನೆ ನೀಡುವ ಮೂಲಕ ಸುಗಮವಾಗಿ ಕೆಲಸಗಳಾಗುವ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಬಿ.ತಿಪ್ಪೇರುದ್ರಪ್ಪ ಮಾತನಾಡಿ ನಗರ ಅಭಿವೃದ್ಧಿ ವಿಚಾರದಲ್ಲಿ ಶಾಸಕರಿಗೆ ಆಗು-ಹೋಗು ಗಳ ಬಗ್ಗೆ ಅಪಾರ ಅನುಭವಿದೆ. ಈ ಹಿಂದೆ ನಗರಸಭಾ ಅಧ್ಯಕ್ಷರಾಗಿ ಶಾಸಕರಾಗಿದ್ದ ಸಗೀರ್ ಅಹ್ಮದ್ ಅವರ ನಂತರ ತಮ್ಮಯ್ಯನವರು ಶಾಸಕತ್ವ ಸ್ಥಾನಕ್ಕೇರಿರುವುದು ಅತ್ಯಂತ ಖುಷಿ ತಂದಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಬಡಾವಣೆಯ ಕೆಲವು ಮೂಲಸೌಕರ್ಯಗಳಿಂದ ನಿವಾಸಿಗಳಿಗೆ ತೀವ್ರ ಸಮಸ್ಯೆ ಯಾಗಿದೆ. ಸಂಜೀವಿನಿ ಶಾಲೆಯ ಮುಖ್ಯರಸ್ತೆಯಿಂದ ಮನೆಗಳಿಗೆ ಮಹಿಳೆಯರು ತೆರಳಲು ರಸ್ತೆಯಲ್ಲಿ ಬೀದಿ ದೀಪವಿಲ್ಲದೇ ಸಮಸ್ಯೆಯಾಗಿದೆ. ಬಡಾವಣೆಯಲ್ಲಿ ಒಂದು ಉದ್ಯಾನವನವಿದೆ, ಅದು ನಾಗರೀಕರ ಬಳಕೆಗೆ ಉಪಯೋಗವಿಲ್ಲದಂತಾಗಿದೆ ಎಂದು ಮನವಿ ಮಾಡಿದರು.

ಸಂಘದ ಸದಸ್ಯ ರಮೇಶ್ ನಾರಿನಿಂಗಜ್ಜಿ ಮಾತನಾಡಿ ಶಾಸಕರಿಗೆ ಬಡಾವಣೆಯ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಅವರು ಮುಂದಿನ ಕೆಲವು ದಿನಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು,

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಹೆಚ್.ಆರ್.ಷಡಕ್ಷರಿ, ಶಿವಶಂಕರ್, ಸೋಮಶೇಖರ್, ಉಮಾ ಮಹೇಶ್, ಹಾಲಪ್ಪ, ಡಾ.ಮೂರ್ತಿ, ಕರಿಸಿದ್ದಯ್ಯ, ಸುರೇಶ್, ನಿವಾಸಿಗಳಾದ ಶಿವನಂಜಪ್ಪ, ಲತಾ ಉಮಾಮಹೇಶ್ವರ್, ಗೀತಾ ರಮೇಶ್ ನಾರಿನಿಂಗಜ್ಜಿ, ಲೋಹಿತ್, ವೀರು ಮತ್ತಿತರರು ಹಾಜರಿದ್ದರು.

Congratulations to the MLA from the residents of Vikasnagar barangay

About Author

Leave a Reply

Your email address will not be published. Required fields are marked *

You may have missed