September 19, 2024

Life without achievement is nothing: ಸಾಧನೆ ಇಲ್ಲದ ಬದುಕು ಶೂನ್ಯ-ಆದರ್ಶಗಳಿಲ್ಲದೆ ಬದುಕಿದರೇ ಬದುಕಿಗೆ ಅಪಮಾನ

0
ರತ್ನಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಅಭಿನಂದನಾ ಮತ್ತು ಅತಿಥಿ ಕೊಠಡಿಗಳ ಶಂಕುಸ್ಥಾಪನೆ

ರತ್ನಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಅಭಿನಂದನಾ ಮತ್ತು ಅತಿಥಿ ಕೊಠಡಿಗಳ ಶಂಕುಸ್ಥಾಪನೆ

ಚಿಕ್ಕಮಗಳೂರು:  ಸ್ಪೋಟ್ಸ್ ಕ್ಲಬ್ ಅಥವಾ ಸಾಂಸ್ಕೃತಿಕ ಸಂಘಗಳು ಕ್ರೀಯಾಶೀಲವಾಗಿರಬೇಕಾದರೇ ಸದ ಸ್ಯರು ಚಟುವಟಿಕೆಯಿಂದ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಸದಸ್ಯರೇ ಜೀವನಾಡಿಗಳು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

ಭಾನುವಾರ ನಗರದ ಕುರುವಂಗಿ ರಸ್ತೆ, ಜ್ಯೋತಿನಗರದಲ್ಲಿನ ರತ್ನಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಅಭಿನಂದನಾ ಮತ್ತು ಅತಿಥಿ ಕೊಠಡಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನೊಬ್ಬ ಸಾಮಾನ್ಯ ರೈತನ ಮಗ, ನಗರಸಭೆ ’ಡಿ’ ದರ್ಜೆ ನೌಕರ ಮಗ. ನಾಲ್ಕು ಬಾರೀ ನಗರಸಭೆ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದೇನೆ. ಕ್ಷೇತ್ರದ ಶಾಸಕನಾಗುತ್ತೇನೆಂದು ಕನಸ್ಸಿನಲ್ಲಿಯೂ ಕಂಡಿರಲಿಲ್ಲ. ಇಂದು ಶಾಸಕನಾಗಿದ್ದೇನೆ ಎಂದರೇ ಕ್ಷೇತ್ರದ ಮತದಾರು ಸೇರಿ ದಂತೆ ನಿಮ್ಮೆಲ್ಲರ ಪರಿಶ್ರಮದಿಂದ ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಾಧನೆ ಇಲ್ಲದ ಬದುಕು ಶೂನ್ಯ. ಆದರ್ಶಗಳಿಲ್ಲದೆ ಬದುಕಿದರೇ ಬದುಕಿಗೆ ಅಪಮಾನ ಎಂದ ಅವರು, ನನ್ನ ರಾಜಕೀಯ ಜೀವನದಲ್ಲಿ ಎಲ್ಲಿಯವರೆಗೂ ರಾಜಕಾರಣದಲ್ಲಿ ಇರುತ್ತೇನೆ ಅಲ್ಲಿಯವರೆಗೂ ಆದರ್ಶ ಪ್ರಾಯವಾದ ರಾಜಕೀಯ ಮಾಡುತ್ತೇನೆಂದು ಹೇಳಿದರು.

ಹುಟ್ಟುವಾಗ ಉಸಿರು ಇರುತ್ತೇ, ಹೆಸರು ಇರುವುದಿಲ್ಲ. ಸಾಯುವಾಗ ಹೆಸರು ಇರುತ್ತೇ ಉಸಿರುವ ಇರುವುದಿಲ್ಲ. ನಾವು ಮಾಡುವ ಒಳ್ಳೇಯ ಕೆಲಸಗಳು ಮಾತ್ರ ಉಳಿದುಕೊಳ್ಳುತ್ತದೆ ಎಂದು ೧೨ನೇ ಶತಮಾನ ದಲ್ಲಿ ಬಸವಣ್ಣನವರು ಹೇಳಿದ್ದಾರೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಜಾಗೃತೆಯಿಂದ ಕೆಲಸ ಮಾಡುತ್ತೇನೆ ಎಂದರು.

ಎರಡು ತಿಂಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿನ ವ್ಯವಸ್ಥೆಯನ್ನು ಬಿಗಿ ಮಾಡಿ ಸಾರ್ವಜನಿಕರಿಗೆ ಜನಸ್ನೇಹಿ ಸರ್ಕಾರಿ ಕಚೇರಿಗಳಾಗುವಂತೆ ಮಾಡುತ್ತೇನೆ. ಸಾರ್ವಜನಿಕರಿಗೆ ಗೌರವ ಸಿಗುವ ಕೆಲಸವನ್ನು ಪ್ರಾಮಾಣಿಕ ವಾಗಿ ಮಾಡುತ್ತೇನೆಂದು ಭರವಸೆ ನೀಡಿದರು.

ರತ್ನಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಕೆ.ನಟರಾಜ ಮಾತನಾಡಿ, ರತ್ನಗಿರಿ ಸಂಘ ಉನ್ನತ ಮಟ್ಟಕ್ಕೆ ಬೆಳೆದಿದೆ ಎಂದರೇ ಅದಕ್ಕೆ ಕಾರಣ ನಮ್ಮ ಹಿರಿಯರ ಪರಿಶ್ರಮದಿಂದ ಮತ್ತು ಸದಸ್ಯರಿಂದ ಸಾಧ್ಯವಾಗಿದೆ ಎಂದರು.
ಸಂಘದ ಅಭಿವೃದ್ದಿಗೆ ಶಾಸಕರು ಆರ್ಥಿಕ ನೆರವು ನೀಡುವ ಭರವಸೆ ಇದೆ ಎಂದ ಅವರು, ಸಂಘದ ಆವರಣದಲ್ಲಿ ಗ್ರಂಥಾಲಯ ತೆರೆಯುವ ಚಿಂತನೆ ಇದೆ. ಮನೆಗಳಲ್ಲಿ ಅನುಪಯುಕ್ತ ಪುಸ್ತಕಗಳಿದ್ದರೇ, ಅವು ಗಳನ್ನು ಸಂಘಕ್ಕೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಎಲ್.ಮಂಜುನಾಥ್ ಗೌಡ, ನಿರ್ದೇಶಕರುಗಳಾದ ಎಂ.ವಿ.ಶಾಂತಿನಾಥ್, ಜಿ.ಪುಟ್ಟಣ್ಣ, ವೆಂಕಟೇಶ್.ಎಸ್.ಎಚ್, ಗೋಪಿ, ಸೇರಿದಂತೆ ಅನೇಕರು ಇದ್ದರು. ಮಂಜುನಾಥ್ ಜೋಷಿ ಸ್ವಾಗತಿಸಿ ಚಂದ್ರಶೇಖರ್ ತೆರದಾಳ್ ವಂದಿಸಿದರು.

Life without achievement is nothing

About Author

Leave a Reply

Your email address will not be published. Required fields are marked *

You may have missed