September 16, 2024

ಹೌಸಿಂಗ್‌ಬೋರ್ಡ್ಸನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಆರಂಭ

0
ಹೌಸಿಂಗ್‌ಬೋರ್ಡ್ಸನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಆರಂಭ

ಹೌಸಿಂಗ್‌ಬೋರ್ಡ್ಸನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಆರಂಭ

ಚಿಕ್ಕಮಗಳೂರು: ಹೌಸಿಂಗ್‌ಬೋರ್ಡ್ ನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ತಿಂಗಳ ೧೬ ರಂದು ನೂತನವಾಗಿ ಪ್ರಾರಂಭವಾದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ನಗರಸಭೆ ಸದಸ್ಯೆ ಕವಿತಾಶೇಖರ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ ಉದ್ಘಾಟಿಸಿದರು.

ಶಾಲಾ ಮುಖ್ಯ ಶಿಕ್ಷಕ ಹೆಚ್.ಜಿ.ಶ್ರೀನಿವಾಸ್ ಮಾತನಾಡಿ ಬಹುದಿನಗಳ ಪೋಷಕರ ಹಾಗೂ ಎಸ್.ಡಿ.ಎಂ ರವರ ಒತ್ತಾಯದ ಮೇರೆಗೆ ಎಲ್.ಕೆ.ಜಿ ಮತ್ತು ಯುಕೆಜಿ ಯನ್ನು ಪ್ರಾರಂಭಿಸಲಾಗಿದೆ, ಎಲ್ಲರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ಈಗಾಗಲೇ ೧ ರಿಂದ ೫ನೇ ತರಗತಿ ವರೆಗೆ ಆಂಗ್ಲಮಾದ್ಯಮ ತರಗತಿಗಳು ನಡೆಯುತ್ತಿದ್ದು, ಈ ಶಾಲೆಯು ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಜಾನಕಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LKG and UKG classes start

About Author

Leave a Reply

Your email address will not be published. Required fields are marked *