September 19, 2024

ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿ, ಪರಿಹಾರ ನೀಡಬೇಕೆಂದು ಕೆ.ಪಿ.ಸಿ.ಸಿ ವಕ್ತಾರ ಹೆಚ್.ಹೆಚ್.ದೇವರಾಜ್

0
ಕೆ.ಪಿ.ಸಿ.ಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಪತ್ರಿಕಾಗೋಷ್ಠಿ

ಕೆ.ಪಿ.ಸಿ.ಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಮುಂಗಾರು ಮಳೆ ವೈಫಲ್ಯದಿಂದಾಗಿಕಾಫಿ ಬೆಳೆ ಸರ್ವನಾಶದಅಂಚಿಗೆ ಬಂದಿದ್ದು,ಕೂಡಲೇ ಬೆಳೆಗಾರರ ನೆರವಿಗೆಕೇಂದ್ರ ಸರ್ಕಾರ ಧಾವಿಸಿ, ಪರಿಹಾರ ನೀಡಬೇಕೆಂದು ಕೆ.ಪಿ.ಸಿ.ಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಆಗ್ರಹಿಸಿದರು.

 

ಅವರುಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಜಿಲ್ಲೆಯಲ್ಲಿ ಮುಂಗಾರು ಮಳೆ ಸರಾಸರಿ ೨೦ ರಿಂದ ೩೦ ಇಂಚು ಮಳೆಯಾಗಬೇಕಿತ್ತು,ಆದರೆಒಂದೂವರೆಎರಡು ಇಂಚು ಮಳೆ ಬಿದ್ದಿರುವುದರಿಂದಕಾಫಿ ಬೆಳೆಯು ಉಳಿಯುತ್ತಿಲ್ಲಜೊತೆಗೆ ಉಪ ಬೆಳೆಗಳಾದ ಏಲಕ್ಕಿ, ಕಾಳುಮೆಣಸು ಸಹ ನೆಲ ಕಚ್ಚಿದೆಎಂದು ಹೇಳಿದರು.

 

ಆದುದರಿಂದರಾಜ್ಯದಎಲ್ಲಾ ಸಂಸದರು ಸಭೆ ನಡೆಸಿ, ನಷ್ಟದಅಂದಾಜು ಪಟ್ಟಿ ತಯಾರಿಸಿ ಕೇಂದ್ರಕ್ಕೆ ವರದಿ ನೀಡಿ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿದರು.

 

ಕೇಂದ್ರ ಸರ್ಕಾರ ಸಂಪೂರ್ಣರೈತ ವಿರೋಧಿಯಾಗಿದೆ ಸಾಲ ಮನ್ನಾ ಮಾಡುವುದಿಲ್ಲ, ಬದಲಾಗಿರೈತರು ಮಾಡಿರುವ ಬೆಳೆಸಾಲ, ಅಲ್ಪಾವಧಿ ಸಾಲವನ್ನುಮರುಪಾವತಿ ಮಾಡಲುಕೆಲ ತಿಂಗಳವರೆಗೆ ಮುಂದೂಡಬೇಕುಎಂದು ಒತ್ತಾಯಿಸಿದ ಅವರುಜಿಲ್ಲೆ ಸಂಸದೆ ಹಾಗೂಕೇಂದ್ರ ಕೃಷಿ ಸಚಿವೆ ಶೋಭಾಕರಂದ್ಲಾಜೆಅವರಿಗೆಜಿಲ್ಲೆಯಲ್ಲಿರುವ ಸಮಸ್ಯೆಗಳ ಅರಿವಿಲ್ಲ ಇದರಎಲ್ಲಾ ಸಂಪೂರ್ಣ ಹೊಣೆ ಹೊರಬೇಕೆಂದು ಹೇಳಿದರು.

 

ಜಿಲ್ಲೆಯಲ್ಲಿ ೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರುಆಯ್ಕೆಆಗಿರುವ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಸಂಸದರು ಕನಿಷ್ಠ ಪ್ರಗತಿಪರಿಶೀಲನೆ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.

 

ರಾಜ್ಯದಎಲ್ಲಾ ೨೫ ಸಂಸದರು ಬಡವರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅಮಿತ್ ಷಾ ಭೇಟಿ ಮಾಡಿ,ರಾಜ್ಯಕ್ಕೆ ಬೇಕಾಗಿರುವ ಅಕ್ಕಿ ಕೊಡಿಸುವಲ್ಲಿ ವಿಫಲರಾಗಿದ್ದಾರೆಆದರುಕಾಂಗ್ರೆಸ್‌ರಾಷ್ಟ್ರೀಯಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಡಿ.ಕೆಶಿವಕುಮಾರ್ ನೇತೃತ್ವದಲ್ಲಿ ಜು.೧ ರಂದು ಪ್ರತಿಕುಟುಂಬದ ಪ್ರತಿ ವ್ಯಕ್ತಿಗೆತಲಾ ೧೦ ಕೆ.ಜಿ ಅಕ್ಕಿ ನೀಡಿ ನುಡಿದಂತೆ ನಡೆಯುತ್ತಾರೆಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ,ಉಚಿತ ಬಸ್ ಪ್ರಯಾಣ ಘೋಷಿಸಿದ್ದು ಎಲ್ಲಾ ಪಕ್ಷದವರುಇದರ ಪ್ರಯೋಜನ ಪಡೆಯುತ್ತಿದ್ದಾರೆ,ಆದರೆ ಬಿಜೆಪಿ ಅಕ್ಕಿ ಕೊಡುವಕಾರ್ಯಕ್ಕೆ ಸ್ಪಂದಿಸದೆ ಬಡವರ ವಿರೋಧಿಯಾಗಿ ವರ್ತಿಸುತ್ತಿದೆಎಂದು ಟೀಕಿಸಿದರು.

 

ಕಾಂಗ್ರೆಸ್ ಪಕ್ಷ ಬಡಜನರಿಗಾಗಿ ನೀಡಿದಉಚಿತ ಕೊಡುಗಳ ಬಗ್ಗೆ ಬಿಜೆಪಿ ಮುಖಂಡರುಟೀಕೆ ಮಾಡುತ್ತಾಚೆಲ್ಲಾಟವಾಡುವುದನ್ನು ಬಿಟ್ಟು, ಬಡವರ ಬಗ್ಗೆ ನಿಜವಾದ ಕಾಳಜಿ ಇದ್ದರೆಕೇಂದ್ರ ಸರ್ಕಾರದಲ್ಲಿಒತ್ತಡತಂದು ಅಕ್ಕಿ ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿದರು.

 

ಸರ್ಕಾರ ೩೭ ರೂ.ಗೆ ೧ ಕೆ.ಜಿ ಅಕ್ಕಿ ಖರೀದಿಸಿ ರಾಜ್ಯದಜನರಿಗೆ ಅಕ್ಕಿ ಕೊಡುತ್ತಿರುವುದರಿಂದ ವಾರ್ಷಿಕ ೧೦ ಸಾವಿರಕೋಟಿರೂ.ಖರ್ಚು ಬರುತ್ತಿದೆ ಬಿಜೆಪಿ ನಮ್ಮಿಂದ ಬೆಳಕಾಗುತ್ತದೆ ಎಂಬ ಭ್ರಮೆಯಲ್ಲಿಇದ್ದಾರೆ.ಇದಕ್ಕೆ ನಮ್ಮ ನಾಯಕರುತಕ್ಕಉತ್ತರಕೊಡುತ್ತಾರೆಎಂದು ಭರವಸೆ ನೀಡಿದರು.

 

ಕಾಂಗ್ರೆಸ್‌ಜಾತ್ಯಾತೀತ, ಸಿದ್ದಾಂತದ ಪಕ್ಷವಾಗಿದೆ ಸರ್ವಜನಾಂಗದ ಶಾಂತಿಯತೋಟಎಂಬಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡುತ್ತಿದೆಆದರೆ ಬಿಜೆಪಿ, ಆರ್‌ಎಸ್‌ಎಸ್ ಗೆ ಸಂಸ್ಕಾರವಿಲ್ಲ ಬಡವರ ಬದುಕಿನ ಬಗ್ಗೆ ಕಾಳಜಿ ಇಲ್ಲಎಂದು ಟೀಕಿಸಿದರು.

 

ಜಿಲ್ಲೆಯ ಮಲೆನಾಡು-ಬಯಲು ಪ್ರದೇಶದಲ್ಲಿಎಲ್ಲಾ ನದಿಗಳ ಜಲ ಮೂಲಗಳು ಬತ್ತಿ ಹೋಗಿರುವುದರಿಂದಕುಡಿಯುವ ನೀರಿನ ಸಮಸ್ಯೆ ಮುಂದೆಎದುರಾಗಲಿದೆಎಂದು ಹೇಳಿದರು.

 

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ, ಜಿಲ್ಲಾಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಡಿರಮೇಶ್, ಮುಖಂಡರಾದ ಶಿವಾಜ್, ಸಿಮ್‌ಸಾದ್ ಇದ್ದರು.

The central government rushed to help the growers.

About Author

Leave a Reply

Your email address will not be published. Required fields are marked *

You may have missed