September 19, 2024

ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ

0
ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ

ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ

ಚಿಕ್ಕಮಗಳೂರು:  ನಗರ ಹೊರವಲಯದ ಕದ್ರಿಮಿದ್ರಿ ಬಳಿ ನಿರ್ಮಾಣಗೊಳ್ಳುತ್ತಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಬುಧವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀರಿನ ಸೌಲಭ್ಯ ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮತ್ತಿತರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಸಧ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ೨೦೧೮ ರಲ್ಲಿ ಮೊದಲಬಾರಿ ಚಿಕ್ಕಮಗಳೂರಿಗೆ ಕೇಂದ್ರೀಯ ವಿದ್ಯಾಲಯ ಬಂದಿದೆ. ರಾಷ್ಟ್ರೀಯ ಮಟ್ಟದ ಶಿಕ್ಷಣ ನಮ್ಮ ಚಿಕ್ಕಮಗಳೂರಿನಲ್ಲಿಯೂ ಸಿಗಬೇಕು ಎನ್ನುವುದು ಎಲ್ಲರ ಆಶಯವಾಗಿತ್ತು ಎಂದರು.

ಕೇಂದ್ರೀಯ ವಿದ್ಯಾಯಲದ ಪರಿಕಲ್ಪನೆ ಆರಂಭವಾಗಿದ್ದು ೧೯೬೫ ರಲ್ಲಿ ಸುಮಾರು ೫೩ ವರ್ಷಗಳನ್ನು ದಾಟಿದರೂ ನಮ್ಮ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಬಂದಿರಲಿಲ್ಲ. ಹಲವು ಮಂದಿ ಸಂಸದರಾದರು, ಮಂತ್ರಿಗಳಾದರು, ಸರ್ಕಾರಗಳು ಬಂದು ಹೋದವು. ಆದರೂ ಈ ಭಾಗದ ಜನರ ಬೇಡಿಕೆಯನ್ನು ನರೇಂದ್ರ ಮೋದಿ ಅವರ ಸರ್ಕಾರ ೨೦೧೮ ರಲ್ಲಿ ಇದನ್ನು ಪೂರೈಸಿತು ಎಂದರು.

ನಾವು ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳನ್ನು ಆರಂಭಿಸಿದ್ದೇವೆ. ಈಗ ೨೬ ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕಟ್ಟಡ ಇಲ್ಲಿ ನಿರ್ಮಾಣವಾಗುತ್ತಿದೆ. ನೀರಿನ ವ್ಯವಸ್ಥೆಯನ್ನು ನೋಡಿಕೊಂಡು ಉದ್ಘಾಟನೆ ತೀರ್ಮಾನ ಮಾಡಲಾಗುವುದು.

ಸಧ್ಯಕ್ಕೆ ಇಲ್ಲಿ ಒಂದು ಬೋರ್‌ವೆಲ್ ತೆಗೆಸಲಾಗಿದೆ. ೪೦೦ ಮಕ್ಕಳು ಇಲ್ಲಿ ಕಲಿಯುವದರಿಂದ ಅಷ್ಟೂ ಜನರಿಗೆ ನೀರಿನ ವ್ಯವಸ್ಥೆ ಮಾಡಿಕೊಂಡು ತಾತ್ಕಾಲಿಕ ಕಟ್ಟಡದಿಂದ ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.

ಈಗಾಗಲೇ ಸಾಕಷ್ಟು ಬೋಧಕರು ಇದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಮಂದಿ ಬೇಕಾಗುತ್ತದೆ. ಇದರ ಬಗ್ಗೆ ಚರ್ಚಿಸುತ್ತೇವೆ. ದೆಹಲಿಗೆ ಹೋದ ನಂತರ ಮಾನವ ಸಂಪನ್ಮೂಲ ಇಲಾಖೆ ಸಚಿವರೊಂದಿಗೆ ಮಾತನಾಡುತ್ತೇವೆ ಎಂದರು.

Union Minister Shobha Karandlaje visited the work site

About Author

Leave a Reply

Your email address will not be published. Required fields are marked *

You may have missed