September 19, 2024

ನಗರದಲ್ಲಿ ಮಾದರಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಾಜಿ ಶಾಸಕ ಸಿ.ಟಿ.ರವಿ ಅವರು ಹಿಂದೆಯೇ 9 ಕೋಟಿ ರೂ.

0
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಸುದ್ದಿಗೋಷ್ಠಿ

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನಗರದಲ್ಲಿ ಮಾದರಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಾಜಿ ಶಾಸಕ ಸಿ.ಟಿ.ರವಿ ಅವರು ಹಿಂದೆಯೇ ೯ ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದು, ಹಾಲಿ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೆ ಅದನ್ನು ತಡೆ ಹಿಡಿಯದೆ ಆದಷ್ಟು ಬೇಗನೆ ಭವನಆ ಕಾಮಗಾರಿ ಆರಂಭಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮಾದರಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎನ್ನುವುದು ಸಿ.ಟಿ.ರವಿ ಅವರ ಕನಸಾಗಿತ್ತು. ಇದಕ್ಕಾಗಿ ಕರ್ತಿಕೆರೆ, ಜಿ.ಪಂ. ಕಚೇರಿ ಪಕ್ಕ ಜಾಗವನ್ನು ಗುರುತಿಸಲಾಗಿದೆ. ಅದು ಸಾಧ್ಯವಾಗದಿದ್ದರೆ ನಗರದಲ್ಲಿರುವ ಹಳೇ ಭವನವನ್ನೇ ಕೆಡವಿ ಹೊಸದಾಗಿ ನಿರ್ಮಿಸಬೇಕು. ಈ ಭವನದಲ್ಲಿ ಬಡವರು ಮತ್ತು ಹಣವಂತರೂ ಮದುವೆ ಇನ್ನಿತರೆ ಶುಭ ಕಾರ್ಯಕ್ರಮಗಳನ್ನು ನಡೆಸುವಂತಾಗಬೇಕು ಎನ್ನುವುದು ಮಾಜಿ ಶಾಸಕರ ಆಶಯವಾಗಿದೆ ಎಂದರು.

೨೦೨೩ ರಲ್ಲಿ ಅಂದಿನ ಶಾಸಕರಾಗಿದ್ದ ಸಿ.ಟಿ.ರವಿ ಅವರು ೯ ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿ, ಮೂರನೇ ಒಂದು ಭಾಗದಷ್ಟು ಅನುದಾನವನ್ನು ಬಿಡುಗಡೆಯನ್ನೂ ಮಾಡಿಸಿದ್ದರು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ. ಈ ೯ ಕೋಟಿಗೆ ಇನ್ನೂ ೯ ಕೋಟಿ ರೂ. ಅನುದಾನವನ್ನು ಹಾಲಿ ಶಾಸಕರು ಮಂಜೂರು ಮಾಡಿಸಿ ರಾಜ್ಯಕ್ಕೇ ಮಾದರಿಯಾದ ಅಂಬೇಡ್ಕರ್ ಭವನವರನ್ನು ನಿರ್ಮಾಣ ಮಾಡಬೇಕು ಎಂದರು.

ಪರಿಶಿಷ್ಠಜಾತಿ, ಪರಿಶಿಷ್ಟ ವರ್ಗಗಳ ಜನರು ದುಬಾರಿ ಹಣ ನೀಡಿ ಛತ್ರಗಳಲ್ಲಿ ಮದುವೆ ಮಾಡಿಸಲು ಸಾಧ್ಯವಿಲ್ಲ ಎನ್ನುವುದು ಮಾಜಿ ಶಾಸಕರಾದ ಸಿ.ಟಿ.ರವಿ ಅವರಿಗೆ ಅರಿವಿತ್ತು. ಈ ಸಂಬಂಧ ಹಲವು ಕಡೆಗಳಲ್ಲಿ ಬೇಡಿಕೆಗಳೂ ಬಂದಿದ್ದ ಹಿನ್ನೆಲೆಯಲ್ಲಿ ಮಾದರಿ ಭವನ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಿಸಿದ್ದರು ಎಂದರು.

ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಎಲ್ಲಾ ಅನುದಾನ, ಕಾಮಗಾರಿಗೆ ತಡೆ ನೀಡಿದೆ. ಹಾಲಿ ಶಾಸಕರು ಕೂಡಲೇ ನಿವೇಶನವನ್ನು ಗುರುತಿಸಿ ಒಳ್ಳೆಯ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬೇಕು. ಯಾವುದೇ ಕಾರಣಕ್ಕೆ ಯೋಜನೆ ಸ್ಥಗಿತವಾಗಬಾರದು. ಇದು ಇಲ್ಲಿನ ಬಡವರು, ದಲಿತರ ಬೇಡಿಕೆಯಾಗಿದೆ ಎಂದರು.

ಇದಲ್ಲದೆ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ೫೦ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ೭.೫೦ ಕೋಟಿ ರೂ. ಅನುದಾನವನ್ನು ಹಿಂದಿನ ಶಾಸಕರು ತಂದಿದ್ದಾರೆ. ಈ ಪೈಕಿ ೨೫ ಭವನಗಳು ಕಾಮಗಾರಿ ಆರಂಭವಾಗಬೇಕಿದೆ. ಇನ್ನುಳಿದ ೨೫ ಭವನಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಅದೆಲ್ಲವನ್ನೂ ಪೂರ್ಣಗೊಳಿಸಬೇಕು. ೨೦೦೪ ರಿಂದ ೨೦೨೩ ಮಾರ್ಚ್ ವರೆಗೆ ಪರಿಶಿಷ್ಠ ಜಾತಿ, ಪಂಗಡದ ಕಾಲೋನಿಗಳು ಸಿ.ಟಿ.ರವಿ ಅವರು ಶಾಸಕರಾದ ನಂತರವೇ ಸಾಕಷ್ಟು ಅಭಿವೃದ್ಧಿ ಕಂಡಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಂಪನಹಳ್ಳಿ ಮೋಹನ್ ಕುಮಾರ್, ನಗರಾಧ್ಯಕ್ಷ ನರಸಿಂಹಮೂರ್ತಿ, ಮಂಜುನಾಥ್, ಹಿರೇಮಗಳೂರು ಕೇಶವ ಮೂರ್ತಿ ಇದ್ದರು.

Former MLA CT Ravi had already donated Rs 9 crore for the construction of Ambedkar Bhavan.

About Author

Leave a Reply

Your email address will not be published. Required fields are marked *

You may have missed