September 16, 2024

ನಗರಸಭಾ ಮೇಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

0
HK Kesavamurthy press conference of Dalit Defense Forum

HK Kesavamurthy press conference of Dalit Defense Forum

ಚಿಕ್ಕಮಗಳೂರು: ನಗರಸಭೆಯಲ್ಲಿ ನಡೆದಿರುವ ಪ್ರಕರಣ ಸಂಬಂಧ ಕಂದಾಯ ಭೂಮಿಗೆ ಇ-ಖಾತೆ ಮಾಡಿರುವ ಮೇಲಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಹಿತರಕ್ಷಣಾ ವೇದಿಕೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಈ ವೇಳೆ ಮಾತನಾಡಿದ ವೇದಿಕೆಯ ಹೆಚ್.ಕೆ.ಕೇಶವಮೂರ್ತಿ ಕಂದಾಯ ಭೂಮಿಗೆ ಇ-ಖಾತೆ ಮಾಡಿರುವ ಪ್ರಕರಣ ದಲ್ಲಿ ಇ-ಖಾತೆಗೆ ನೋಟ್‌ಶೀಟ್ ಬರೆದಿರುವ ದ್ವಿತೀಯ ದರ್ಜೆ ಸಹಾಯಕರನ್ನು ಅಮಾನತ್ತುಪಡಿಸಬೇಕು. ಭೂಮಿಯ ಇ-ಖಾತೆ ಮಾಡಬೇಕಾದರೆ ಕಂದಾಯ ಅಧಿಕಾರಿ ಹಾಗೂ ಆಯುಕ್ತರ ಗಮನಕ್ಕೆ ತಂದು ಸಹಿ ಮು ಖಾಂತರವೇ ಆಗುಬೇಕೆಂಬುದು ಸಾಮಾನ್ಯ ಜನರಿಗೂ ತಿಳಿದಿರುವ ವಿಚಾರವಾಗಿದೆ ಎಂದರು.

ಆದರೆ ಈ ಪ್ರಕರಣದಲ್ಲಿ ಕೇವಲ ದ್ವಿತೀಯ ದರ್ಜೆ ಸಹಾಯಕರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಂಡಿರುವುದು ಗಮನಿಸಿದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿದೆ. ಇದರ ಹಿಂದೆ ಶಾಮೀಲಾ ಗಿರುವ ಕಂದಾಯ ಅಧಿಕಾರಿ ಹಾಗೂ ಆಯುಕ್ತರ ಮೇಲೆ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶೀಘ್ರವೇ ಈ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರುಗಳಾದ ಆರ್.ಕೆ.ನರಸಿಂಹಮೂರ್ತಿ, ರಾಜಕುಮಾರ್, ರೇವಂತ್, ಎಸ್.ಡಿ.ಎಂ. ಮಂಜು, ಪ್ರದೀಪ್, ಧನಂಜಯ್, ವಿನೋದ್, ಜಗದೀಶ್, ಗಣೇಶ್, ರಾಜು, ನಂದನ್ ಮತ್ತಿತರರು ಹಾಜರಿದ್ದರು.

HK Kesavamurthy press conference of Dalit Defense Forum

About Author

Leave a Reply

Your email address will not be published. Required fields are marked *