September 16, 2024

ರಾಜ್ಯ ಸರ್ಕಾರ ಏಕಾಏಕಿ ಜಾರಿಗೊಳಿಸಿರುವ ವಿದ್ಯುತ್‌ದರ ಹೆಚ್ಚಳವನ್ನು ಹಿಂಪಡೆಯಬೇಕು

0
ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಏಕಾಏಕಿ ಜಾರಿಗೊಳಿಸಿರುವ ವಿದ್ಯುತ್‌ದರ ಹೆಚ್ಚಳವನ್ನು ಹಿಂಪಡೆಯಬೇಕುಎಂದು ಚಿಕ್ಕಮಗಳೂರು ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆ(ಛೇಂಬರ್‌ಆಫ್‌ಕಾಮರ್ಸ್) ಒತ್ತಾಯಿಸಿದೆ.

ಜಿಲ್ಲಾಧಿಕಾರಿಕೆ.ಎನ್.ರಮೇಶ್‌ಅವರನ್ನುಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸ್ಥೆಯ ಪದಾಧಿಕಾರಿಗಳು,ಯಾರ ಗಮನಕ್ಕೂ ತಾರದೇ ವಿದ್ಯುತ್‌ದರವನ್ನುಗೌಪ್ಯವಾಗಿ ಹೆಚ್ಚಳ ಮಾಡಿರುವರಾಜ್ಯ ಸರ್ಕಾರದಕ್ರಮವನ್ನುತೀವ್ರವಾಗಿ ಆಕ್ಷೇಪಿಸಿದರು.

ಕೊರೋನಾ ಸಂದರ್ಭದಲ್ಲಿಆದ ಲಾಕ್ ನಿಂದ ಅನುಭವಿಸಿದ ನಷ್ಟ ಮತ್ತುಅದರಿಂದಉಂಟಾದ ಸಮಸ್ಯೆಗಳಿಂದ ರಾಜ್ಯದ ಮತ್ತುಜಿಲ್ಲೆಯ ಕೈಗಾರಿಕೆಗಳು ಇನ್ನೂ ಹೊರ ಬಂದಿಲ್ಲ. ದುಬಾರಿ ವಿದ್ಯುತ್ ಶುಲ್ಕವನ್ನು ಪಾವತಿಸಲಾಗದೆ.ರಾಜ್ಯಾದ್ಯಂತ ಸಾವಿರಾರು ಕೈಗಾರಿಕೆಗಳು ಈಗಾಗಲೇ ಮುಚ್ಚಿವೆಎಂದು ಹೇಳಿದರು.

ಇಂತಹಕೆಟ್ಟ ಪರಿಸ್ಥಿತಿಯಲ್ಲಿ ವಿದ್ಯುತ್‌ದರವನ್ನು ಮನಸ್ಸಿಗೆ ಬಂದಂತೆ ಏರಿಸಿದರೆ ರಾಜ್ಯದಲ್ಲಿ ಮತ್ತುಜಿಲ್ಲೆಯಲ್ಲಿ ಕೈಗಾರಿಕೆಗಳು ವಾಣಿಜ್ಯೋದ್ಯಮಿಗಳು ಉಳಿಯುವುದು ಹೇಗೆ ಎಂದು ಪ್ರಶ್ನಿಸಿದರು.

ಕೈಗಾರಿಕೆಗಳು ಮತ್ತು ವಾಣಿಜ್ಯೋದ್ಯಮಿಗಳನ್ನು ಉಳಿಸುವ ನಿಟ್ಟಿನಲ್ಲಿಅವೈಜ್ಞಾನಿಕವಾಗಿ ಹೆಚ್ಚಿಸಿರುವ ವಿದ್ಯುತ್‌ದರವನ್ನುರಾಜ್ಯ ಸರ್ಕಾರಕೂಡಲೇ ಹಿಂಪಡೆಯಬೇಕು ಹಿಂದಿನ ದರವನ್ನೇ ಮುಂದುವರೆಸಬೇಕುಎಂದು ಆಗ್ರಹಿಸಿದರು.

ಚಿಕ್ಕಮಗಳೂರು ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆಯಅಧ್ಯಕ್ಷಆರ್.ಎಂ.ಮಹೇಶ್,ಉಪಾಧ್ಯಕ್ಷ ಶಾಂತಾರಾಮ್ ಹೆಗಡೆ, ಕಾರ್ಯದರ್ಶಿ ವಿಜಯೇಂದ್ರ,ಜಂಟಿ ಕಾರ್ಯದರ್ಶಿ ಶಿವಣ್ಣ ಹಾಜರಿದ್ದರು.

Appeal from Chikmagalur Chamber of Commerce and Industry to District Administration

About Author

Leave a Reply

Your email address will not be published. Required fields are marked *